ಬೆಂಗಳೂರು: ಒಂದು ಕಾಲದ ಜೋಡೆತ್ತಿ(ಹೆಚ್.ಡಿ.ಕುಮಾರಸ್ವಾಮಿ)ಗೆ ಟಕ್ಕರ್ ಕೊಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿದ್ಧತೆ ನಡೆಸಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಜೆಡಿಎಸ್ ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಪಕ್ಷ. ಇಲ್ಲಿ ಕಾಂಗ್ರೆಸ್‍ಗೆ ಮೊದಲನೇ ಎದುರಾಳಿಯಾಗಿ ಜೆಡಿಎಸ್ ನಿಲ್ಲುತ್ತದೆ. ಹಾಗಾಗಿ ಜೆಡಿಎಸ್ ಪ್ರಾಬಲ್ಯ ಕುಂದಿಸುವ ನಿಟ್ಟಿನಲ್ಲಿ ಸೋದರ, ಸಂಸದ ಡಿ.ಕೆ.ಸುರೇಶ್ ಜೊತೆ ಸೇರಿ ಡಿ.ಕೆ.ಶಿವಕುಮಾರ್ ರಣತಂತ್ರ ರಚಿಸಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮೈಸೂರು ಭಾಗದಲ್ಲಿನ ಕೆಲ ಪ್ರಬಲ ಜೆಡಿಎಸ್ ನಾಯಕರನ್ನು ಸೆಳೆಯುವ ರಣತಂತ್ರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಆಪರೇಷನ್ ಕಾಂಗ್ರೆಸ್ ಗಾಗಿ ಖಾಸಗಿ ಸರ್ವೆಗೆ ಡಿ.ಕೆ.ಶಿವಕುಮಾರ್ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಏನದು ಖಾಸಗಿ ಸರ್ವೆ?
ಮೈಸೂರು, ಮಂಡ್ಯ, ಹಾಸನ, ತುಮಕೂರು, ರಾಮನಗರ, ಬೆಂಗಳೂರು ಗ್ರಾ., ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಸಮೀಕ್ಷೆ ನಡೆಸಲು ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಭಾಗದಿಂದ ಯಾರು ಬಂದ್ರೆ ಕಾಂಗ್ರೆಸ್‍ಗೆ ಒಳ್ಳೆಯದು? ಯಾವ ಭಾಗದ ಕ್ಷೇತ್ರದ ನಾಯಕರನ್ನು ಸೆಳೆಯಬಹುದು? ಯಾರನ್ನ ಕಾಂಗ್ರೆಸ್‍ಗೆ ಕರೆತಂದರೆ ಜೆಡಿಎಸ್‍ಗೆ ಹಿನ್ನಡೆ ಆಗಲಿದೆ ಎಂಬಿತ್ಯಾದಿ ವಿಷಯಗಳ ಕುರಿತು ಸಮೀಕ್ಷೆ ನಡೆಯಲಿದೆ. ಈ ಸಮೀಕ್ಷೆಯ ಆಧಾರದ ಮೇಲೆಯೇ ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಆಪರೇಷನ್ ಕಾಂಗ್ರೆಸ್ ಮುಂದಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಜೋಡೆತ್ತುಗಳು ಒಂಟೆತ್ತುಗಳಾಗಿವೆ, ಒಂದು ಮತ್ತೊಂದನ್ನು ಅಟ್ಟಾಡಿಸುತ್ತಿದೆ: ಕಟೀಲ್ ವ್ಯಂಗ್ಯ
Advertisement
ಯಾಕೆ ಈ ಸಮೀಕ್ಷೆ?:
ಈಗಾಗಲೇ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ಸಿನ ಮುಂದಿನ ಸಿಎಂ ಅಭ್ಯರ್ಥಿ ಎಂದು ಬಿಂಬಿತರಾಗಿದ್ದಾರೆ. ಆದ್ರೆ ಕಾಂಗ್ರೆಸ್ ನಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಬಣ ಇದನ್ನ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಾಯಕರು ಮುಂದಿನ ಸಿಎಂ ಬಗ್ಗೆ ಹೇಳಿಕೆ ನೀಡುತ್ತಿರುತ್ತಾರೆ. ಆದ್ದರಿಂದ ಸಿಎಂ ಕನಸು ಕಾಣುತ್ತಿರುವ ಡಿ.ಕೆ.ಶಿವಕುಮಾರ್ ತಮ್ಮ ಬೆಂಬಲಕ್ಕೂ ಪ್ರಬಲವಾದ ಶಾಸಕರ ಬಣ ಇರಬೇಕು ಎಂಬ ಉದ್ದೇಶದಿಂದ ಆಪರೇಷನ್ ಕಾಂಗ್ರೆಸ್‍ಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಸ್ತಿತ್ವಕ್ಕಾಗಿ ಗುದ್ದೆತ್ತುಗಳಾದ ಜೋಡೆತ್ತುಗಳು
ಕೆಲ ದಿನಗಳ ಹಿಂದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮಿಷನ್ 123 ಅಡಿಯಲ್ಲಿ ಕೆಲಸ ಮಾಡಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಈಗ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಕುಂದಿಸಲು ಈಗಿನಿಂದಲೇ ಡಿ.ಕೆ.ಶಿವಕುಮಾರ್ ಮುಂದಾಗಿರೋದು ದಳಪತಿಗೆ ಶಾಕ್ ನೀಡಿದಂತಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಜೋಡೆತ್ತು ಗುದ್ದು – ಮಾಜಿ ಸಿಎಂ ಬೆನ್ನಿಗೆ ನಿಂತ ಡಿಕೆಶಿ