ಬೆಂಗಳೂರು: ಸಿದ್ದರಾಮೋತ್ಸವ ವಿಚಾರ ಯಾರಿಗೆ ಕೇಳಬೇಕೋ ಅವರನ್ನ ಕೇಳಿ, ನಾನು ಪಕ್ಷದ ಶಿಸ್ತಿನ ಸಿಪಾಯಿ, ನನಗೆ ಸೋನಿಯಾ ಗಾಂಧಿ ಅವರು ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರು ನನಗೆ ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನನಗೂ ಇತಿ ಮಿತಿ ಇದೆ ಎಂದು ಸಿದ್ದರಾಮೋತ್ಸವ ವಿಚಾರವಾಗಿ ಪ್ರತಿಕ್ರಿಯಿಸಿದರು.
Advertisement
Advertisement
ಶೂ ಸಾಕ್ಸ್ ವಿಚಾರದಲ್ಲಿ ಭೀಕ್ಷೆ ಎತ್ತಿ ಕೊಡಲು ನಾವು ಸಿದ್ಧರಿದ್ದೆವು ಎಂದ ಅವರು, ಬೆಳಗಾವಿ ಹೆಣ್ಣು ಮಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದು, ನ್ಯಾಯ ಒದಗಿಸಿ ಕೊಡಿ. ಸಂತೋಷ್ ಪಾಟೀಲ್ ರೀತಿ ಹಲವರು ನೊಂದಿದ್ದಾರೆ ಬೆಂದಿದ್ದಾರೆ. ಮಠಾಧೀಶರು ಕಮಿಷನ್ ಬಗ್ಗೆ ಮಾತಾಡಿದರೂ ಅವರ ಮೇಲೆ ಕೇಸು ಹಾಕಲಿಲ್ಲ ಮತ್ತೆ. ಮಾಜಿ ಸಿಎಂ ಮಗ ಇದಾರೆ ಅಂತ ನಿಮ್ಮ ಶಾಸಕರೆ ಹೇಳಿದ್ದಾರೆ. ಅವರು ಇದಾರೋ ಇಲ್ವೋ ಆದರೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸ್ವಂತ ಖರ್ಚಿನಲ್ಲಿಯೇ ಗುಂಡಿ ಮುಚ್ಚೋ ಕಾರ್ಯ- ಬೈಕ್ ಸವಾರರ ಜೀವ ಉಳಿಸ್ತಿರುವ ಮಲ್ನಾಡ್ ಯುವಕ
Advertisement
Advertisement
ಯಾವ ಯಾವ ಹುದ್ದೆಗೆ ಎಷ್ಟು ಹಣ ಎಂದು ಪಿಎಸ್‍ಐ ಹಗರಣ ವಿಚಾರದಲ್ಲಿ ಹೋಟೆಲ್ ಮೆನು ಕಾರ್ಡ್ ರೀತಿ ಹಾಕಿದ್ದಿರಿ. ಕೋವಿಡ್ ಕೆಲಸಕ್ಕೆ ನಮ್ಮ ಕಾರ್ಯಕರ್ತರು ಹಣ ನೀಡಿದ್ದಾರೆ. ಸರ್ಕಾರದ ಕೈಯಲ್ಲಿ ಮಾಡಲಾಗದ ಕೆಲಸವನ್ನು ನಾವು ಮಾಡಿದ್ದೇವೆ. ಸರ್ಕಾರಕ್ಕೆ ಒಂದು ಲಕ್ಷ ರೂ. ಈವರೆಗೂ ನೀಡಲು ಆಗಿಲ್ಲ. ಒಂದು ದಿನ ಸುದ್ದಿಗೋಷ್ಠಿ ಮಾಡಿ ಏನೇನು ಮಾಡಿದ್ದೇವೆ ಹೇಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಓಲೈಕೆಗೆ 29 ಕೋಟಿ ಹೊಳೆ – ಏರ್‌ಪೋರ್ಟ್ ರೋಡ್ ಟೆಂಡರ್‌ಗೆ ಆಕ್ರೋಶ
ಅಮೃತ್ ಪಾಲ್‍ರನ್ನ ಕೋರ್ಟ್ ಮುಂದೆ ನಿಲ್ಲಿಸಿ. ಯಾರ ಹೆಸರು ಇದೆ ಎನ್ನುವುದು ಬಯಲಿಗೆ ತಂದು ಅವರನ್ನು ಬಂಧಿಸಿ. ಏನೇನು ನಡೆದಿದೆ ಎಂಬ ಬಗ್ಗೆ ನಮ್ಮ ಬಳಿಯೂ ಮಾಹಿತಿ ಇದೆ. ಸರ್ಕಾದ ಚಾರ್ಜ್ ಶೀಟ್‍ನಲ್ಲಿ ಏನಿದೆ. ಸರ್ಕಾರ ರಾಜಕಾರಣಿ, ಮಂತ್ರಿಗಳ ಕುಮ್ಮಕ್ಕು ಇಲ್ಲದೆ ಯಾವುದು ನಡೆಯಲು ಸಾಧ್ಯವಿಲ್ಲ ಎಂದು ಶಂಕೆ ವ್ಯಕ್ತಪಡಿಸಿದರು.