ಬೆಂಗಳೂರು: ಗುಂಡಿಗಳ ಊರು ಬೆಂಗಳೂರು. ಇಲ್ಲಿ ಅದೆಷ್ಟು ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡು, ಜೀವ ಬಿಟ್ರೂ ಬಿಬಿಎಂಪಿ ಮಾತ್ರ ಬುದ್ದಿ ಕಲಿಯುತ್ತಿಲ್ಲ. ಇದರಿಂದ ರೋಸಿಹೋದ ಯುವಕನೊಬ್ಬ ತನ್ನ ಸ್ವಂತ ದುಡ್ಡಿನಿಂದಲೇ ಗುಂಡಿಗಳನ್ನ ಮುಚ್ಚುತ್ತಿದ್ದಾರೆ.
Advertisement
ಹೌದು. ಅನೀಲ್ ಎಂಬ ಯುವಕ ತನ್ನ ಸ್ವಂತ ಖರ್ಚಿನಲ್ಲಿಯೇ ಬೆಂಗಳೂರಿನಲ್ಲಿ ಗುಂಡಿಗಳನ್ನ ಮುಚ್ಚುವ ಕಾರ್ಯಮಾಡ್ತಿದ್ದಾರೆ. ಜೆಪಿ ನಗರದ ಸುತ್ತಮುತ್ತಲಿನ ಗುಂಡಿಗಳಿಗೆ ಜಲ್ಲಿ, ಸೆಮೆಂಟ್ ಹಾಗೂ ಡಸ್ಟ್ ಪೌಡರ್ ನ್ನು ಹಾಕಿ, ತನ್ನ ಸ್ನೇಹಿತರ ಜೊತೆ ಹೋಗಿ ಗುಂಡಿಗಳನ್ನ ಮುಚ್ಚುತ್ತಿದ್ದಾರೆ. ಮಲೆನಾಡು ಭಾಗದ ಅನೀಲ್, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. ನಿತ್ಯ 20-30 ಗುಂಡಿಗಳನ್ನ ಮುಚ್ಚು ವಾಹನ ಸವಾರರಿಗೆ ನಿಧಾನವಾಗಿ ಚಲಾಯಿಸುವಂತೆ ಜಾಗೃತಿ ಮೂಡಿಸ್ತಿದ್ದಾರೆ.
Advertisement
Advertisement
ಮೊದ ಮೊದಲು ಸಣ್ಣಪುಟ್ಟ ಏರಿಯಾಗಳಲ್ಲಿ ಗುಂಡಿ ಮುಚ್ಚಲು ಆರಂಭಿಸಿದ್ದ ಅನೀಲ್, ಇದೀಗ ಜೆಪಿ ನಗರ ತುಂಬೆಲ್ಲಾ ಬೈಕ್ ನಲ್ಲಿ ಓಡಾಡಿ, ಎಲ್ಲಿ ಗುಂಡಿಗಳು ಕಾಣುತ್ತೋ, ಅಲ್ಲಿ ಮುಚ್ಚುವ ಕೆಲಸ ಮಾಡ್ತಿದ್ದಾರೆ. ಅನೀಲ್ ಗೆ ಸ್ನೇಹಿತರು ಕೂಡ ಸಾಥ್ ಕೊಡ್ತಿದ್ದು, ಜೆಪಿ ನಗರ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ನಗರದಲ್ಲಿರೋ ಎಲ್ಲಾ ಗುಂಡಿಗಳನ್ನೂ ಮುಚ್ಚುತ್ತೇವೆ ಎನ್ನುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರು 2ನೇ ಮದುವೆಯಾಗಲು ಬೇಕು ಇಲಾಖೆ ಅನುಮತಿ – ಇಲ್ಲವಾದ್ರೆ ಸರ್ಕಾರಿ ಸೌಲಭ್ಯವಿಲ್ಲ
Advertisement
ಆಫೀಸ್, ಮನೆ ಕೆಲಸ. ಅದು, ಇದು ಅಂತ ಬ್ಯುಸಿ ಲೈಫ್ ನಲ್ಲಿರುವ ಜನರ ಮಧ್ಯೆ, ಗುಂಡಿ ಮುಚ್ಚೋಕೆ ಅಂತನೇ ಟೈಮ್ ಬಿಡುವು ಮಾಡಿಕೊಂಡ ಅನೀಲ್ ಆಂಡ್ ಟೀಂ ಕೆಲಸಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ