ಬೆಳಗಾವಿ: ಮೆಂಟಲ್ ಕೇಸ್ ಬಗ್ಗೆ ನಮ್ಮನ್ನು ಕೇಳಬೇಡಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ (Ramesh Jarkiholi) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ತಿರುಗೇಟು ನೀಡಿದರು.
ಬೆಳಗಾವಿ (Belagavi) ಗ್ರಾಮೀಣ ಕ್ಷೇತ್ರವೊಂದೇ ಡಿಕೆಶಿಗೆ ಕಾಣುತ್ತೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆ ಮೆಂಟಲ್ ಕೇಸ್ ಬಗ್ಗೆ ನನಗೆ ಕೇಳುವುದಕ್ಕೆ ಹೋಗಬೇಡಿ. ಇಡೀ ರಾಜ್ಯದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಇಡೀ ರಾಜ್ಯದಲ್ಲಿ ಬದಲಾವಣೆ ತರಬೇಕು. ಪರಿಶುದ್ಧವಾದ ರಾಜಕಾರಣ ನಾವು ಮಾಡಬೇಕು. ನಾವು ಯಾವುದೇ ಮೆಂಟಲ್ ಕೇಸ್‌ಗಳಿಗೆ ಉತ್ತರ ಕೊಡಲು ಆಗುವುದಿಲ್ಲ. ಹತಾಶೆಯಲ್ಲಿರುವವರಿಗೆ ನಾನು ಉತ್ತರ ಕೊಡಲು ಆಗುವುದಿಲ್ಲ ಎಂದರು. ಇದನ್ನೂ ಓದಿ: ಹುಕ್ಕಾ ಬಾರ್‌ನಲ್ಲಿ ವೈದ್ಯನ ಮಗಳ ಮೇಲೆ ಅತ್ಯಾಚಾರ
Advertisement
Advertisement
ಕಾಂಗ್ರೆಸ್ (Congress) ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರಕ್ಕೆ ನಾವೆಲ್ಲ ಈಗಾಗಲೇ 150 ಸೀಟ್‌ಗಳ ಬಗ್ಗೆ ಕುಳಿತು ಚರ್ಚೆ ಮಾಡಿದ್ದೇವೆ. ಇದೇ ತಿಂಗಳ 7ರಂದು ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ಇದೆ. ಅದೆಲ್ಲ ಆದ್ಮೇಲೆ ಯಾರ‍್ಯಾರಿಗೆ ಕಿವಿಯಲ್ಲಿ ಏನೇನು ಹೇಳಬೇಕೋ ಹೇಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಅಶೋಕ್ ಜೊತೆ ಮುನಿಸು – ಅರ್ಧದಲ್ಲೇ ಇಳಿದ ಸೋಮಣ್ಣ