-ಜನ ಬಿಜೆಪಿ ಸರ್ಕಾರವನ್ನು ಕಿತ್ತು ಒಗೆಯಲಿ
ಬೆಂಗಳೂರು: ಪರಿಷತ್ ಚುನಾವಣೆಯಲ್ಲಿ 15 ಸ್ಥಾನ ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಉಳಿದ ಸ್ಥಾನ ನಾವು ಗೆಲ್ಲುತ್ತೇವೆ ಬಿಡಿ. ಅವರಿಗೆ ಎಷ್ಟು ಸ್ಥಾನ ಬೇಕೋ ಅಷ್ಟು ಇಟ್ಟುಕೊಂಡು ಮಿಕ್ಕಿದ್ದು ನಮಗೆ ಬಿಟ್ಟಿದ್ದಾರೆ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಎಸ್‍ವೈ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.
Advertisement
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಾವಣೆ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ವರ್ಚೂವಲ್ ಮೂಲಕ ಸದಸ್ಯತ್ವ ನೋಂದಾವಣೆಗೆ ಚಾಲನೆ ನೀಡಿದ್ದೇವೆ. ಒಟ್ಟು ರಾಜ್ಯದ 2 ಸಾವಿರ ಸ್ಥಳಗಳಲ್ಲಿ ಸದಸ್ಯತ್ವ ನೋಂದಾವಣೆ ಏಕ ಕಾಲದಲ್ಲಿ ಆಗುತ್ತಿದೆ ಎಂದರು. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ- ಪೊಲೀಸರ ತನಿಖೆಯಿಂದ ಬಯಲು
Advertisement
Advertisement
ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗುವ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ಎರಡು ಪ್ಲಾನ್ ಹೊಂದಿದ್ದಾರೆ. ಒಂದು ಅಫೀಶಿಯಲ್ ಆಗಿ ಕಾಯ್ದೆ ಜಾರಿ ಮಾಡೋದು. ಎರಡನೇಯದ್ದು ಖಾಸಗೀಯಾಗಿ ಮಸೂದೆ ಮಂಡನೆ ಮಾಡೋಡು. ಈ ಎರಡು ಪ್ಲಾನ್ ಮಾಡಿಕೊಂಡಿರುವ ಬಿಜೆಪಿ ಈ ಬಿಲ್‍ಗಳನ್ನು ಮೂವ್ ಮಾಡಲು ಹೊರಟಿದೆ. ಮತಾಂತರ ಕಾಯ್ದೆ ಪಾಸ್ ಮಾಡಿಕೊಳ್ಳಲು ಹೊರಟರೆ ಅದು ಪೊಲಿಟಿಕಲಿ ಎಫೆಕ್ಟ್ ಅಗುತ್ತದೆ. ಇದು ಕೇವಲ ರಾಜ್ಯಕ್ಕೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಇದು ಅಂತರಾಷ್ಟ್ರೀಯ ವಿಷಯವಾಗಿದೆ. ಇಡೀ ಪ್ರಪಂಚವೇ ರಾಜ್ಯದಲ್ಲಿ ಇಂತಹಾ ಕೆಲಸ ಆಗುತ್ತಿದೇಯೆ ಎಂದು ಪ್ರಶ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮತದಾನ ಮಾಡಿದ ಸದಸ್ಯರಿಂದ ಮತ ಪತ್ರ ಬಹಿರಂಗ- ಚುನಾವಣಾಧಿಕಾರಿಗೆ ದೂರು
Advertisement
ಅವರು ಖಾಸಗೀ ಮಸೂದೆಯಾದರು ತರಲಿ, ಸರ್ಕಾರವೇ ತರಲಿ, ನಾವು ಆ ಬಿಲ್‍ಗೆ ಖಡಾಖಂಡಿತವಾಗಿ ವಿರೋಧ ಮಾಡುತ್ತೇವೆ. ಎಲೆಕ್ಷನ್ ಬರುತ್ತಿದೆ ಎಂದು ಬಿಲ್ ತರೋಕೆ ಹೊರಟಿದ್ದಾರೆ. ಒಂದೊಂದು ಸಮುದಾಯವನ್ನು ಟಾರ್ಗೆಟ್ ಮಾಡಿ, ಹಿಂಸೆ ಮಾಡುತ್ತಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಕೊಡುಗೆ ಗೊತ್ತಾ ಅವರಿಗೆ? ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಕೊಡುಗೆ ಹೆಚ್ಚಾಗಿದೆ. ಸ್ಕೂಲ್ ನಲ್ಲಿ ಸೀಟ್ ಬೇಕಾದ್ರೆ ಹೋಗಿ ಕೈ ಕಾಲು ಹಿಡಿಯುತ್ತಾರೆ. ಯಾರೆಲ್ಲಾ ಯಾವ ಸ್ಕೂಲ್, ಕಾಲೇಜ್‌ನಲ್ಲಿ ತಮ್ಮ ಮಕ್ಕಳನ್ನು ಸೇರಿಸಿದ್ದಾರೆ ಎಂದು ದಾಖಲೆ ತೆಗೆಯಿರಿ ಗೊತ್ತಾಗುತ್ತದೆ. ಇದುವರೆಗೆ ಮಕ್ಕಳನ್ನು ನಮ್ಮ ಸ್ಕೂಲ್‍ಗೆ ಸೇರಿಸಲ್ಲ ಎಂದು ದೂರು ಬಂದಿದೆಯಾ. ಕ್ರಿಶ್ಚಿಯನ್ ಸಮುದಾಯದವರು ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆ ಕೊಟ್ಟಿಲ್ಲ. ಕ್ರಿಶ್ಚಿಯನ್ ಸಮುದಾಯದವರು ಮಾನವೀಯತೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ: ಮುಂಬೈನಲ್ಲಿ 144 ಸೆಕ್ಷನ್ ಜಾರಿ- ರ‍್ಯಾಲಿ, ಮೆರವಣಿಗೆಗೆ ನಿಷೇಧ
ಬಿಜೆಪಿ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿ, ಮೂರು ಜನರನ್ನು ಸಿಎಂ ಮಾಡೋದು ಬಿಜೆಪಿಯ ಸಂಪ್ರದಾಯ ಮೊದಲಿಂದಲೂ ಸಂಪ್ರದಾಯವಿದೆ. ಅವರ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಅವರು ಏನು ಬೇಕಾದರೂ ಮಾಡಲಿ, ನಾನು ಅದನ್ನು ಅಭಿನಂದಿಸುತ್ತೇನೆ. ಮೂರು ಆದರೂ ಮಾಡಲಿ, ಆರು ಆದರೂ ಮಾಡಲಿ ಒಳ್ಳೆಯ ಸರ್ಕಾರ ಅಂತೂ ಕೊಡಲಿಲ್ಲ. ಜನ ಸರ್ಕಾರವನ್ನು ಕಿತ್ತು ಒಗೆಯಲಿ ಎಂದು ಕಿಡಿಕಾರಿದರು.
ದೆಹಲಿಯಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಕಾಂಗ್ರೆಸ್‍ನ ಕೇಂದ್ರ ಚುನಾವಣಾ ಸಮಿತಿ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಮೈಸೂರಿನಿಂದ ಮಾಜಿ ಸಿಎಂ ಸಿದ್ದರಾಮಯ್ಯ ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.