ಕೊಪ್ಪಳ: ಇಡಿ ಬಳಸಿಕೊಂಡು ನನಗೆ ಕೊಡಬಾರದ ಕಿರುಕುಳ ಕೊಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ಬಸಾಪೂರ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ ಪ್ರಬಲ ನಾಯಕರ ವಿರುದ್ಧ ಬಿಜೆಪಿ ತನಿಖೆ ಅಸ್ತ್ರ ಪ್ರಯೋಗ ಮಾಡುತ್ತಿದೆ. ಯಾರಿಂದ ಬಿಜೆಪಿಗೆ ತೊಂದರೆ ಆಗುತ್ತದೆಯೋ, ಅವರ ಮೇಲೆ ಈ ಪ್ರಯೋಗ ನಡೆಯುತ್ತಿದೆ. ನಾನು, ಚಿದಂಬರಂ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹೀಗೆ ಎಲ್ಲರ ಮೇಲೆ ತನಿಖೆ ಮಾಡುತ್ತಿದ್ದಾರೆ. ಇಡಿ ಬಳಸಿಕೊಂಡು ನನಗೆ ಕೊಡಬಾರದ ಕಿರುಕುಳ ಕೊಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
Advertisement
Advertisement
ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇದೆ. ನನಗೆ 60 ದಿನದ ಒಳಗೆ ಬೇಲ್ ಸಿಕ್ಕಿದೆ. ಆಗಲೇ ಚಾರ್ಜ್ ಶೀಟ್ ಹಾಕಬಹುದಿತ್ತು. ಇವೆಲ್ಲವೂ ರಾಜಕೀಯ ಉದ್ದೇಶದಿಂದ ಹಾಕಿದ ಕೇಸ್‍ಗಳಾಗಿದೆ. ಇವೆಲ್ಲವನ್ನು ನಾವು ಎದುರಿಸುತ್ತೇವೆ. ಮೇಲಿಂದ ಮೇಲೆ ನೋಟೀಸ್, ಸಮನ್ಸ್ ಕೊಡುತ್ತಿದ್ದಾರೆ. ಚುನಾವಣೆ ಸಮಯಕ್ಕೆ ತನಿಖೆ ಚುರುಕು ಮಾಡಿದ್ದಾರೆ. ದಿನವೂ ನನಗೆ, ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ನೋಟೀಸ್ ಬರುತ್ತಿವೆ. ಈ ಟೈಮ್‍ನಲ್ಲಿ ನನ್ನ ಬ್ಯುಸಿ ಆಗಿಸಬೇಕು ಅಂತಾ ಹೀಗೆಲ್ಲ ಮಾಡುತ್ತಿದ್ದಾರೆ. ಎಲ್ಲ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿ ಯಾರಾಗಬೇಕೆಂದು ಜನ ನಿರ್ಧರಿಸ್ತಾರೆ, ನಾನೇ ಸಿಎಂ ಆಗ್ತೀನಿ ಅಂತ ಕೂರೋಕೆ ಆಗುತ್ತಾ – ಎಚ್‍ಡಿಕೆ ವಿರುದ್ಧ ಸಿದ್ದು ವ್ಯಂಗ್ಯ
Advertisement
Advertisement
ಮಹಾರಾಷ್ಟ್ರ ಸರ್ಕಾರ ಪಥನ ವಿಚಾರವಾಗಿ ಮಾತನಾಡಿದ ಅವರು, ಇವೆಲ್ಲ ಬಿಜೆಪಿಯ ನಾಟಕ. ಬಿಜೆಪಿಗರೇ ಮಾಡುತ್ತಿದ್ದಾರೆ. ಈ ಹಿಂದೆಯೇ ಮುರುಗೇರ ನಿರಾಣಿ ಸರ್ಕಾರ ಮಾಡುತ್ತೇವೆ ಎಂದು ಹೇಳಿದ್ದರು ಎಂದಿದ್ದಾರೆ.
ಡಿಕೆಶಿ ವಿರುದ್ದ ಬಿಜೆಪಿ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಪಾರ್ಟಿ ಸಿದ್ದಾಂತದ ಬಗ್ಗೆ ಮಾತನಾಡಲಿ. ನಾವು ನಮ್ಮ ಪಾರ್ಟಿಯಲ್ಲಿ ಎಲ್ಲಾ ಸಮುದಾಯಗಳಿಗೆ ಅವಕಾಶ ಕೊಟ್ಟಿದ್ದೇವೆ. ಬ್ರಾಹ್ಮಣ, ಹಿಂದುಳಿದ, ದಲಿತ ವರ್ಗದವರಿಗೆ ಕಾಂಗ್ರೆಸ್ ಅವಕಾಶ ಕೊಟ್ಟಿದೆ. ರಾಜಕಾರಣದಲ್ಲಿ ಏನು ಬೇಕಾದರೂ ನಮ್ಮ ಪಾರ್ಟಿಯಲ್ಲಿ ಸಾಧ್ಯವಾಗುತ್ತದೆ. ಬಿಜೆಪಿಯವರು ತಮ್ಮ ಮುಖವಾಡವನ್ನು ಜನರ ಮುಂದೆ ಇಡಲಿ. ಅವರ ಸಿದ್ಧಾಂತ ತತ್ವಗಳನ್ನು ಜನರಿಗೆ ತಿಳಿಸಲಿ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ: ಕಾರಜೋಳ