ಬೆಳಗಾವಿ: ಡಿಸಿಎಂ ಶಿವಕುಮಾರ್ (DK Shivakumar) ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನೇರವಾಗಿ ಸುವರ್ಣ ಸೌಧ ಸಭಾಂಗಣದಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಎಂಎಲ್‌ಸಿ ಸಿ.ಟಿ ರವಿ (CT Ravi) ಗಂಭೀರ ಆರೋಪ ಮಾಡಿದ್ದಾರೆ.
ಠಾಣೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೊಲೀಸರಿಂದ ಜೀವಕ್ಕೆ ಅಪಾಯವಿದೆ. ಅನುಮಾನಾಸ್ಪದವಾಗಿ, ನಿಗೂಢವಾಗಿ ವರ್ತನೆ ಮಾಡುತ್ತಿದ್ದಾರೆ. ಇಲ್ಲಿಗೆ ನಮ್ಮನ್ನು ಯಾಕೆ ಕರೆದುಕೊಂಡು ಬಂದರು ಎಂದು ಹೇಳಿಲ್ಲ. ನನ್ನ ಮೇಲೆ ಯಾವ ಕೇಸ್ ಹಾಕಿದ್ದಾರೆ ಎಂದು ಮಾಹಿತಿ ನೀಡಿಲ್ಲ. ನನ್ನನ್ನು ಪ್ರತ್ಯೇಕವಾಗಿ ಕರೆದುಕೊಂಡು ಬಂದಿದ್ದಾರೆ. ಸುವರ್ಣಸೌಧದಲ್ಲಿ ನನ್ನ ಮೇಲೆ ಕೊಲೆ ಪ್ರಯತ್ನ ನಡೆಯಿತು. ಕೊಲೆ ಪ್ರಯತ್ನದ ಬಗ್ಗೆ ಸಭಾಪತಿಗೂ ದೂರುಕೊಟ್ಟಿದ್ದೇನೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಎನ್‌ಜಿ ಟ್ಯಾಂಕರ್ ನಡುವೆ ಡಿಕ್ಕಿ – ಧಗಧಗಿಸಿದ ಅಗ್ನಿ ಜ್ವಾಲೆ, ನಾಲ್ವರು ಸಜೀವ ದಹನ, 15 ಮಂದಿ ಸಾವು!
Advertisement
Advertisement
ಪೊಲೀಸರಿಗೆ ದೂರು ನೀಡಿದ್ದೇನೆ. ಕಳೆದ 2 ಗಂಟೆಯಿಂದ ಎಫ್‌ಐಆರ್ ಮಾಡಿ ಎಂದು ಒತ್ತಾಯಿಸಿದ್ದೇನೆ. ನಮಗೆ ಎಫ್‌ಐಆರ್ ಕಾಪಿ ನೀಡುತ್ತಿಲ್ಲ. ಪೊಲೀಸರ ನಡೆ ಅನುಮಾನಸ್ಪದವಾಗಿದೆ. ಇವರದು ಹಿಡನ್ ಅಜೆಂಡಾ ಇದ್ದ ಹಾಗೆ ಕಾಣುತ್ತಿದೆ. ಇದರ ಹಿಂದಿನ ದುರುದ್ದೇಶ ನನಗೆ ತಿಳಿಯುತ್ತಿಲ್ಲಾ. ಸಭಾಪತಿ ಅವರು ರೋಲಿಂಗ್ ಕೊಟ್ಟ ಮೇಲೆ ಇವರು ಯಾವ ಕಾರಣಕ್ಕೆ ಎಫ್‌ಐಆರ್ ಹಾಕಿದ್ದಾರೆ ಹೇಳಬೇಕು. ಏನೇ ಇರಲಿ ಅವರು ಮೊದಲು ನನಗೆ ಹೇಳಬೇಕು. ಇವರ ನಡೆ ಅನುಮಾನಾಸ್ಪದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿ.ಟಿ ರವಿ ಹೇಳಿಕೆ ಶಾಸಕಾಂಗ ವ್ಯವಸ್ಥೆಗೆ ದೊಡ್ಡ ಅವಮಾನ – ಡಿಕೆ ಶಿವಕುಮಾರ್
Advertisement