– ನಾಳೆ ಮತ್ತೆ ವಿಚಾರಣೆ
ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮೂರನೇ ದಿನದ ಜಾರಿ ನಿರ್ದೇಶನಾಲಯದ ವಿಚಾರಣೆ ಅಂತ್ಯವಾಗಿದೆ.
ಮೂರನೇ ದಿನದ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ಬಳಿಕ ಹೊರ ಬಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿ ನಾಯಕರು ಹಾಗೂ ಡಿಸಿಎಂ ಅಶ್ವಥ್ ನಾರಾಯಣ ವಿರುದ್ಧ ಕಿಡಿಕಾರಿದ್ದಾರೆ. ದೆಹಲಿಯ ಇಡಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದ ಉಪ ಮುಖ್ಯಮಂತ್ರಿಗಳು ಎಲ್ಲ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ಅಶ್ವಥ್ ನಾರಾಯಣ ಬಹಳ ದೊಡ್ಡವರು. ನನಗೆ ಯಾವ ಅನುಕಂಪವೂ ಬೇಡ. ನನಗೆ ಜನ್ಮ ನೀಡಿದ ತಂದೆ ಕೆಂಪೇಗೌಡ ಅವರ ಸಿಗಲಿ ಅಂತ ವರ್ಷಕ್ಕೆ ಒಮ್ಮೆ ಪೂಜೆ ಮಾಡುತ್ತೇವೆ. ಅಂತಹ ಧರ್ಮದಲ್ಲಿ ನಾವು ಹುಟ್ಟಿದ್ದೇವೆ. ಆ ಧರ್ಮದ ಆಚರಣೆಗೆ ಅಶ್ವಥ್ ನಾರಾಯಣ ಪಟಾಲಂ ಅವಕಾಶ ಕೊಡಲಿಲ್ಲ ಎಂದು ಕಿಡಿಕಾರಿದರು.
Advertisement
Advertisement
ಹೆದರಿಕೊಂಡು ಹೋಗುವ ರಣಹೇಡಿ ನಾನಲ್ಲ. ಈ ಹಿಂದೆ ಐಟಿ ದಾಳಿಗೂ ನಾನು ಹೆದರಲಿಲ್ಲ. ರಾಜಕಾರಣ ಮಾಡಲಿಕ್ಕೆ ಬೆಂಗಳೂರಿಗೆ ಬಂದವನು ನಾನು. ಅವರು ಏನೇ ಮಾಡಿದರೂ ನಾನು ಎದುರಿಸಲು ಸಿದ್ಧನಿದ್ದೇನೆ ಎಂದು ಅಶ್ವಥ್ ನಾರಾಯಣ ವಿರುದ್ಧ ಕಿಡಿಕಾರಿದರು.
Advertisement
ವಿಚಾರಣೆಗೂ ಮುನ್ನ ಕಣ್ಣೀರು ಹಾಕಿರುವ ಕುರಿತು ಮಾಧ್ಯಮಗಳು ಕೇಳುತ್ತಿದ್ದಂತೆ ಗರಂ ಆದ ಮಾಜಿ ಸಚಿವರು, ರೀ… ನಾವೇನ್ ಮನುಷ್ಯರು ಅಲ್ವೇನ್ರಿ. ನಾವು ರೇಪ್ ಮಾಡಿದ್ದೇವಾ? ದರೋಡೆ ಮಾಡಿದ್ದೇವಾ? ಜಮೀನು ಒತ್ತೂವರಿ ಮಾಡಿದ್ದೇನಾ? ಇಲ್ಲಾ ಅಲ್ವಾ. ನಾನು ಎಲ್ಲ ದಾಖಲೆ ನೀಡುತ್ತೇನೆ. ಲಂಚ ಪಡೆದಿದ್ದರ ಬಗ್ಗೆ ಯಾರಾದರೂ ಎಂದು ಹೇಳಿದರು.