ರಾಮನಗರ: ಬಿಜೆಪಿಯಲ್ಲಿ ವೀರರೂ, ಶೂರರಿದ್ದಾರೆ. ನಾವು ಹೆಂಗಸರು, ನಾವು ಶಿಖಂಡಿಗಳು, ನಾವೆಲ್ಲ ಸೀರೆಯುಟ್ಟಿದ್ದೇವೆ ನೋಡಿ. ಅವರೆಲ್ಲಾ ಗಂಡಸರು ಅದಕ್ಕೆ ಹೆದರಿದ್ದೇವೆ. ನಾಳೆ ಪಾದಯಾತ್ರೆ ಖಂಡಿತ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ
Advertisement
ಈ ಕುರಿತಂತೆ ಪಬ್ಲಿಕ್ ಟಿ.ವಿ ಜೊತೆಗೆ ಮಾತನಾಡಿದ ಅವರು, ಪಾದಯಾತ್ರೆ ನೀರಿನ ಸಮಸ್ಯೆಯ ದೊಡ್ಡ ಕಾರ್ಯಕ್ರಮ. ನಮ್ಮ ಜಿಲ್ಲೆಯಲ್ಲಿ ಒಬ್ಬ ಕೊರೊನಾ ಸೋಂಕಿತ ಐಸಿಯುನಲ್ಲಿ ಇಲ್ಲ. ಒಬ್ಬರೂ ಸಹ ಸತ್ತಿಲ್ಲ. ಬಿಜೆಪಿಯವರು ನಮ್ಮ ಪಾದಯಾತ್ರೆ ತಡೆಯಬೇಕು ಅಂತ ಸುಳ್ಳು ಕೊರೊನಾ ಪ್ರೆಕರಣಗಳ ಸಂಖ್ಯೆಯನ್ನು ನೀಡುತ್ತಿದ್ದಾರೆ. ಈಗಾಗಲೇ ಅಧಿಕಾರಿಗಳಿಗೆ ಕೇಸ್ ಹಾಕುವಂತೆ ಹೇಳಿದ್ದಾರೆ. ನಮಗೆ ಏನು ತೊಂದರೆ ಕೊಡಬೇಕೋ ಕೊಡಲಿ ಎಂದು ಸವಾಲು ಹಾಕಿದ್ದಾರೆ.
Advertisement
Advertisement
ಕೊರೊನಾ ಸಮಯದಲ್ಲಿ ರೈತರಿಗೆ, ಸಾಮಾನ್ಯ ಜನರಿಗೆ ಕಾಂಗ್ರೆಸ್ ಮಾಡಿದಷ್ಟು ಸಹಾಯವನ್ನು ಬಿಜೆಪಿ ಮಾಡಲಿಲ್ಲ. ಇವರು ಹೆಣದಲ್ಲಿ, ಔಷಧಿಯಲ್ಲಿ, ಪರಿಹಾರದಲ್ಲಿ ಹಣ ಹೊಡೆದಿದ್ದಾರೆ. ಇದೊಂದು 40% ಕಮಿಷನ್ ಸರ್ಕಾರ. ಇದನ್ನೆಲ್ಲಾ ನಾವು ಎಲ್ಲಿ ಹೇಳಿ ಬಿಡುತ್ತೇವೋ ಎಂಬ ಭೀತಿಯಿಂದ ನಮ್ಮನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಹೋಂ ಮಿನಿಸ್ಟರ್, ಹೋಂ ಮಿನಿಸ್ಟರ್ ರೀತಿ ನಡೆದುಕೊಂಡ್ರೆ ತಲೆ ಬಾಗ್ತೀವಿ: ಡಿಕೆಶಿ
Advertisement
ಮೇಕೆದಾಟು ಪಾದಯಾತ್ರೆ ಡಿಕೆಶಿ ಅವರ ರಾಜಕೀಯ ಗಿಮಿಕ್ ಎಂಬ ಬಿಜೆಪಿ ಅವರ ಆರೋಪಕ್ಕೆ, ಬಿಜೆಪಿಯಲ್ಲಿ ವೀರರೂ, ಶೂರರಿದ್ದಾರೆ. ನಾವು ಹೆಂಗಸರು, ನಾವು ಶಿಖಂಡಿಗಳು, ನಾವೆಲ್ಲ ಸೀರೆಯುಟ್ಟಿದ್ದೇವೆ ನೋಡಿ. ಅವರೆಲ್ಲಾ ಗಂಡಸರು ಅದಕ್ಕೆ ಹೆದರಿದ್ದೇವೆ. ನೀವೇ ನೋಡಿದ್ದೀರಲ್ಲ, ಸಿಎಂ ಎದುರಿಗೇ ಕೇಳಿದರಲ್ಲ ಗಂಡಸು ಯಾರು ಅಂತ ಎಂದು ಪರೋಕ್ಷವಾಗಿ ಅಶ್ವಥ್ ನಾರಾಯಣ್‍ಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಸಿಎಂ ಎದುರೇ ಡಿಕೆ ಸುರೇಶ್, ಅಶ್ವಥ್ ನಾರಾಯಣ ನಡುವೆ ಜಟಾಪಟಿ
ಪಾದಯಾತ್ರೆ ವೇಳೆ ಏನಾದರೂ ಸಮಸ್ಯೆಯಾದರೆ ನಮ್ಮನ್ನು ಜೈಲಿಗೆ ಹಾಕಿ. ಆದರೆ ಇಡೀ ರಾಜ್ಯದ ಜನರಿಗೆ ಯಾಕೆ ತೊಂದರೆ ನೀಡುತ್ತಿದ್ದೀರಾ? ನಿಮಗೆ ಸಾಮಾನ್ಯ ಜ್ಞಾನ ಇಲ್ಲಾವಾ? ಈ ದೇಶದಲ್ಲಿ ವಿದ್ಯಾವಂತರು, ಬುದ್ಧಿವಂತರೂ ಇಲ್ಲದೇ ಹೋದರೂ ನಡೆಯುತ್ತದೆ. ಆದರೆ ಪ್ರಜ್ಞಾವಂತಿಕೆ ಇರಬೇಕು. ನಿಮಗೆ ಪ್ರಜ್ಞೆನೇ ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನವ್ರು ರೈಲು, ಬಸ್ ಯಾವುದಲ್ಲಾದ್ರೂ ಹೋಗ್ಲಿ, ಆದ್ರೆ ಸಂದರ್ಭ ನೋಡಿ ಪ್ರತಿಭಟನೆ ಮಾಡ್ಲಿ: ಸುಧಾಕರ್
ಜನರಿಗೋಸ್ಕರ ಮಾಡುತ್ತಿರುವ ಈ ಹೋರಾಟ ಖಂಡಿತ ನಡೆಯುತ್ತದೆ. ಪಾದಯಾತ್ರೆಗೆ ಎಲ್ಲ ಸಿದ್ದತೆಯನ್ನು ಮಾಡಿಕೊಂಡಿದ್ದೇವೆ, ಹೋರಾಟ ನಡೆಸಲು ಮುಂದಕ್ಕೆ ಹೆಜ್ಜೆ ಹಾಕಿದ್ದೇವೆ. ನಾವು ಕಾಂಗ್ರೆಸ್ಸಿಗರು ಎಲ್ಲ ತ್ಯಾಗ, ಬಲಿದಾನಕ್ಕೂ ಬದ್ಧರಾಗಿದ್ದೇವೆ. ಸರ್ಕಾರ ಏನು ಮಾಡುತ್ತದೆಯೋ ಮಾಡಲಿ ಎಂದಿದ್ದಾರೆ.
ನಾಳೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪಾದಯಾತ್ರೆ ಯಶಸ್ವಿಯಾಗಲೆಂದು ಡಿ.ಕೆ.ಶಿವಕುಮಾರ್ ಅವರು ಕುಟುಂಬ ಸಮೇತರಾಗಿ ತಮ್ಮ ಮನೆ ದೇವರು ಕನಕಪುರದ ಕೆಂಕೇರಮ್ಮ ಮತ್ತು ಕಬ್ಬಾಳಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿದರು ಮತ್ತು ಕಬ್ಬಾಳಮ್ಮನಿಗೆ 101 ತೆಂಗಿನಕಾಯಿ ಹೊಡೆದಿದ್ದಾರೆ.