ಹುಬ್ಬಳ್ಳಿ: ಪೆಟ್ರೋಲ್, ಡೀಸೆಲ್ ಮಾತ್ರವಲ್ಲ. ಗ್ಯಾಸ್, ಅಡುಗೆ ಎಣ್ಣೆ ದರವೂ ಕಡಿಮೆ ಆಗಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
Advertisement
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾನಗಲ್ ಮತದಾರರ ಬಗ್ಗೆ ನನಗೆ ಮೊದಲೇ ನಂಬಿಕೆ ಇತ್ತು. ರೈತರು, ಕಾರ್ಮಿಕರು, ಬೀದಿ ವ್ಯಾಪಾರಿಗಳ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿರಲಿಲ್ಲ. ಸರ್ಕಾರದಿಂದಲೇ ನಿತ್ಯ ಜನರ ಪಿಕ್ ಪಾಕೆಟ್ ಆಗುತ್ತಿತ್ತು. ಇದರಿಂದ ಬೇಸತ್ತು ಹಾನಗಲ್ ಜನರು ಉತ್ತರ ಕೊಟ್ಟಿದ್ದಾರೆ. ಜನರು ಕೊಟ್ಟ ಉತ್ತರ ನೋಡಿ ಬೊಮ್ಮಾಯಿ, ಮೋದಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿದ್ದಾರೆ. ಈಗ ಬಿಜೆಪಿ ನಾಯಕರಿಗೆ ತಿಳುವಳಿಕೆ ಬಂದಿದೆ ಎಂದು ಟಾಂಗ್ ನೀಡಿದರು.
Advertisement
Advertisement
ಇನ್ನೂ ಗ್ಯಾಸ್, ಅಡುಗೆ ಎಣ್ಣೆ, ಮೋದಿ ಪಕೋಡ ಕರಿಯಲು ಎಣ್ಣೆ ದರ ಕಡಿಮೆ ಆಗಬೇಕಿದೆ. ದರ ಕಡಿಮೆ ಆಗದಿದ್ದರೆ ಮುಂದಿನ ಚುನಾವಣೆಯಲ್ಲೂ ಇದೇ ಉತ್ತರ ಸಿಗಲಿದೆ. ನನ್ನ ದೃಷ್ಟಿ 2023ರ ಚುನಾವಣೆ ಮೇಲಿದೆ. ಹಾನಗಲ್ ಗ್ರಾಮ ದೇವತೆಗೆ ಬೇಡಿಕೊಂಡಿದ್ದೆ. ಈಗ ದೇವಿ ವರಕೊಟ್ಟಿದ್ದಾಳೆ. ಅದಕ್ಕೆ ದೇವರ ಆಶೀರ್ವಾದ ಪಡೆಯಲು ಹೊರಟಿದ್ದೇನೆ. ಎಲ್ಲ ಜಾತಿ, ಧರ್ಮ, ಜನಾಂಗ ನಮಗೆ ಬೆಂಬಲ ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಸಾಧ್ಯತೆ
Advertisement
ಹಾನಗಲ್ ಸಿಎಂ ಅವರ ತವರು ಜಿಲ್ಲೆಯ ಕ್ಷೇತ್ರ. ಅವರು ಸಿಂದಗಿಯಲ್ಲಿ ಗೆದ್ದಿದ್ದು ಜೆಡಿಎಸ್ ಸ್ಥಾನ, ಇಲ್ಲಿ ನಾವು ಬಿಜೆಪಿ ಸೀಟ್ ಗೆದ್ದಿದ್ದೇವೆ. ಹಾನಗಲ್ ನನ್ನ ಮನೆ ಅಂತ ನಾನು ಹೇಳಿರಲಿಲ್ಲ, ನಾನು ಹಾನಗಲ್ ಅಳಿಯ, ಹಾನಗಲ್ ಮೊಮ್ಮಗ ಅಂತ ಹೇಳಿರಲಿಲ್ಲ. ಅವರು ಹೇಳಿದ್ದು, ಅಷ್ಟು ಮಾತ್ರ ಅವರಿಗೆ ನೆನಪಿಸಲು ಬಯಸುತ್ತೇನೆ. ಅವರ ಮಂತ್ರಿಗಳೆಲ್ಲ ಇಲ್ಲಿಯೇ ಬೀಡುಬಿಟ್ಟಿದ್ದರು. ಹಾನಗಲ್ ಜನರು ನನ್ನ ಗೌರವ ಉಳಿಸಿ ಅಂತ ಯಾರು ಕೇಳಿದ್ದರು. ಅಲ್ಲದೇ ಬಸವರಾಜ ಬೊಮ್ಮಾಯಿ ಅವರು ಫಲಿತಾಂಶ ಬರುವ ಮುನ್ನವೇ ಹಾನಗಲ್‌ನಲ್ಲಿ ಸೋಲೊಪ್ಪಿಕೊಂಡಿದ್ದರು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಪುನೀತ್ ಮಾಡುತ್ತಿದ್ದ ಕೆಲಸಕ್ಕೆ ನಾನೂ ಕೈ ಜೋಡಿಸುತ್ತೇನೆ: ರೇಣುಕಾಚಾರ್ಯ
ಬಿಟ್ ಕಾಯಿನ್ ಪ್ರಕರಣ ಇಡಿ ಹಾಗೂ ಸಿಬಿಐಗೆ ಕೊಟ್ಟಿದೀವಿ ಅಂತ ಹೇಳುತ್ತಾರೆ. ಅವರೇ ಅದರ ಬಗ್ಗೆ ವಿವರಣೆ ಕೊಡಬೇಕು. ನಾನು ಯಾವುದೇ ರಾಜಕಾರಣಿ ಬಗ್ಗೆ ಮಾತಾಡಿಲ್ಲ. ಪ್ರಕರಣ ತನಿಖೆ ಬಗ್ಗೆ ಸಾರ್ವಜನಿಕವಾಗಿ ಜನರಿಗೆ ಇಡಿ ಸ್ಪಷ್ಟಪಡಿಸಲಿ ಹಾಗೂ ಸಿಬಿಐಗೆ ಬರೆದಿರುವ ಪತ್ರ ಬಹಿರಂಗಪಡಿಸಲಿ. ನಾವು ಸಹ RTI ಮೂಲಕ ಅರ್ಜಿ ಸಲ್ಲಿಸಲಿದ್ದೇವೆ ಎಂದು ಹೇಳಿದರು.