ಬೆಂಗಳೂರು: ನಾನು ಕಾನೂನಿಗೆ ಬೆಲೆ ಕೊಡುವವನು. ನನ್ನನ್ನ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಹತ್ತಿರವೂ ಕೆಲವರ ಡೈರಿಗಳಿವೆ. ಈ ಕುರಿತು ಸಮಯ ಬಂದಾಗ ಕೊನೆಯಲ್ಲಿ ಏನೂ ಆಗಲ್ಲವೆಂದಾಗ ಬಹಿರಂಗ ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಆರ್ಥಿಕ ಅಪರಾಧಗಳ ನ್ಯಾಯಾಲಯದಿಂದ ಸಮನ್ಸ್ ವಿಚಾರ ಕುರಿತು ವಿಧಾನಸೌಧದಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ನ್ಯಾಯಾಲಯದಿಂದ ಸಮನ್ಸ್ ಬರಬಹುದು. ಆದರೆ ಈಗ ಯಾವುದೋ ನೋಟಿಸ್ ಒಂದು ಬಂದಿದೆ. ಖುದ್ದಾಗಿ ವಿಚಾರಣೆಗೆ ಹಾಜರಾಗಬೇಕೆಂದು ನನಗೆ, ತಾಯಿ ಹಾಗೂ ಸಹೋದರನಿಗೆ ನೋಟಿಸ್ ಬಂದಿದೆ. ನ್ಯಾಯಾಲಯದಿಂದ ಸಮನ್ಸ್ ಇನ್ನೆರಡು ದಿನಗಳಲ್ಲಿ ಬರಬಹುದು. ಪೋಸ್ಟಲ್ ಮೂಲಕ ಸಮನ್ಸ್ ಬರಬಹುದು. ವಿಚಾರಣೆಗೆ ಹಾಜರಾಗುತ್ತೇವೆ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದು ಹೇಳಿದರು. ಇದನ್ನು ಓದಿ: ಹವಾಲ ವ್ಯವಹಾರದಲ್ಲಿ ಡಿಕೆ ಶಿವಕುಮಾರ್ ಭಾಗಿ?
Advertisement
ಇದೇ ಐಟಿ ದಾಳಿ ವೇಳೆ ಸಿಕ್ಕ ಡೈರಿ ಕುರಿತು ಪ್ರತಿಕ್ರಿಯೆ ನೀಡಿ, ನನ್ನ ಬಳಿಯೂ ಕೆಲವರ ಡೈರಿಗಳಿವೆ. ಯಾರು? ಯಾರಿಗೆ? ಏನೇನು? ಬರೆದಿದ್ದಾರೆ ಎಂಬುವುದ ಸಹ ಗೊತ್ತಿದೆ. ಕೊನೆಯಲ್ಲಿ ಏನೂ ಆಗಲ್ಲವೆಂದಾಗ ಅದನ್ನು ಬಹಿರಂಗ ಮಾಡುತ್ತೇನೆ. ನನ್ನನ್ನ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಡಿಕೆ ಶಿವಕುಮಾರ್ ಯಾವುದಕ್ಕೂ ಹೆದರುವುದಿಲ್ಲ. ನಾನು ಕಾನೂನಿಗೆ ಬೆಲೆ ಕೊಡುವವನು. ಕೋರ್ಟ್ ನಲ್ಲಿ ಪ್ರಕರಣ ಇರುವ ಕಾರಣ ಈ ಕುರಿತು ಏನು ಹೇಳುವುದಿಲ್ಲ ಎಂದರು.
Advertisement
https://www.youtube.com/watch?v=ZbAbYdv64Ik
Advertisement
ನ್ಯಾಯಾಲಯದಲ್ಲಿ ಈ ಕುರಿತು ಪ್ರಕರಣ ನಡೆಯುತ್ತಿರುವುದರಿಂದ ಇದಲ್ಲವಾಗಿದ್ದರೆ ನಾನೇನು ಅನ್ನೋದನ್ನ ತೋರಿಸುತ್ತಿದ್ದೆ. ತಮ್ಮ ಆಪ್ತರಿಗೆ ಹಲವರು ಸಾಕಷ್ಟು ಸಮಸ್ಯೆ ನೀಡುತ್ತಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿದ್ದಾರೆ. ಆದರೆ ಸಮನ್ಸ್ ಇನ್ನೂ ಯಾವುದು ಬಂದಿರುವ ಕುರಿತು ಮಾಹಿತಿ ಇಲ್ಲ. ಯಾರೋ ಏನೋ ಹೇಳಿಕೆ ನೀಡಿದ್ದಾರೆ ಎಂದ ತಕ್ಷಣ ನನ್ನನ್ನು ಪ್ರಕರಣದಲ್ಲಿ ಹೊಣೆ ಮಾಡಲು ಸಾಧ್ಯವಿಲ್ಲ. ಇದೆಲ್ಲಾ ಯಾಕೆ ಮಾಡುತ್ತಿದ್ದಾರೆ ಎಂಬುವುದು ನನಗೆ ಗೊತ್ತಿಗೆ ಎಂದು ಹೇಳಿದರು.
Advertisement
ರಾಜೀನಾಮೆಗೆ ಒತ್ತಾಯ: ಬಿಜೆಪಿ ನಾಯಕರು ತಮ್ಮ ರಾಜೀನಾಮೆಗೆ ಒತ್ತಾಯ ಮಾಡಿದ್ದರೆ ಅವರ ನಾಯಕರ ಮೇಲೆ ಎಷ್ಟು ಪ್ರಕರಣಗಳಿದೆ ಎಂಬುವುದನ್ನು ಪ್ರಶ್ನೆ ಮಾಡಿದ್ದೀರಾ. ಅವರದ್ದೇ ಪಕ್ಷದ ಮುಖ್ಯಮಂತ್ರಿ ಆಗಿದ್ದವರ ಮೇಲೆ ಎಷ್ಟು ಕೇಸ್ ಗಳು ಇವೆ ಎಂಬುವುದು ಗೊತ್ತಿದೆ ಎಂದು ಹೇಳಿದ್ದಾರೆ.