– 2 ಗಂಟೆಗೂ ಹೆಚ್ಚು ಕಾಲ ಲೋಕಾಯುಕ್ತ ವಿಚಾರಣೆ ಎದುರಿಸಿದ ಡಿಸಿಎಂ
ಬೆಂಗಳೂರು: ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದ ತನಿಖೆಯನ್ನು ಲೋಕಾಯುಕ್ತ (Lokayukta) ಚುರುಕುಗೊಳಿಸಿದೆ. ಸಮನ್ಸ್ ಹಿನ್ನೆಲೆಯಲ್ಲಿ ಡಿಕೆಶಿ ಅವರಿಂದು ಲೋಕಾಯುಕ್ತ ಕಚೇರಿಗೆ ತೆರಳಿ ವಿಚಾರಣೆ ಎದುರಿಸಿದರು. ಲೋಕಾಯುಕ್ತ ವಿಚಾರಣೆ ಸಲುವಾಗಿ ಸಂಪುಟ ಸಭೆ ಮಧ್ಯೆಯೇ ನಿರ್ಗಮಿಸಿದರು.
Advertisement
ಗುರುವಾರ ಮಧ್ಯಾಹ್ನ 2 ಗಂಟೆಗೆ ಸುಮಾರಿಗೆ ಶುರುವಾದ ವಿಚಾರಣೆ ಸಂಜೆ ಸುಮಾರು 4:30 ಗಂಟೆ ವರೆಗೂ ನಡೀತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಲೋಕಾಯುಕ್ತ ಅಧಿಕಾರಿಗಳು ಬುಧವಾರ (ಆ.21) ಸಮನ್ಸ್ ಕೊಟ್ಟು, ವಿಚಾರಣೆಗೆ ಹಾಜರಾಗೋಕೆ ಹೇಳಿದ್ದರು. ಇವತ್ತು ಬಂದಿದ್ದೀನಿ, ಎರಡು ಗಂಟೆಗೂ ಹೆಚ್ಚು ಕಾಲ ವಿಚಾರಣೆ ಮಾಡಿದ್ರು. ಮತ್ತೆ ಕೆಲ ದಾಖಲೆಗಳೊಂದಿಗೆ ಬರೋಕೆ ಹೇಳಿದ್ದಾರೆ. ಯಾವತ್ತೂ ಬರಬೇಕು ಅನ್ನೋದನ್ನು ಇನ್ನೂ ಹೇಳಿಲ್ಲ ಎಂದರು.
Advertisement
Advertisement
ಮುಂದುವರಿದು ಇವರಿಗಿಂತ ಸಿಬಿಐನವರೇ (CBI) ಪರವಾಗಿಲ್ಲ, ಒಂದಿನೂ ಕರೆದಿಲ್ಲ, ಏನೂ ಕೇಳಿಲ್ಲ. ಇವರು ನೋಡಿದ್ರೆ ಆಗಲೇ ಹಿಂಸೆ ಕೊಡೋಕೆ ಶುರು ಮಾಡಿದ್ದಾರೆ. ಯಾವೆಲ್ಲಾ ದಾಖಲೆಗಳು ಕೇಳಿದ್ದಾರೆ ಅನ್ನೋದನ್ನು ಹೇಳೋಕೆ ಆಗಲ್ಲ ಎಂದು ಹೇಳಿದ್ದರು.
Advertisement
ಈ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಕಳೆದ ವರ್ಷ ಹಿಂಪಡೆದು, ಲೋಕಾಯುಕ್ತಕ್ಕೆ ವಹಿಸಿತ್ತು. ನಂತರ ಡಿಕೆ ಶಿವಕುಮಾರ್ ವಿರುದ್ಧ ಲೋಕಾಯುಕ್ತ ಸಂಸ್ಥೆ ಎಫ್‌ಐಆರ್ ದಾಖಲಿಸಿತ್ತು.