ಬೆಂಗಳೂರು: ಅದೇನು ಬಿಚ್ಚಿಡ್ತಾರೋ ಬಿಚ್ಚಿಡಲಿ.. ನಾನು ಬೇಡ ಅನ್ನೋಕೆ ಆಗುತ್ತಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ.
ಹೆಚ್‍ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಎಲ್ಲರಿಗೂ ಅವಕಾಶ ಇದೆ, ಅವರಿಗೊಬ್ಬರಿಗೆ ಅಲ್ಲ ಎನ್ನುವ ಮೂಲಕ ನಮ್ಮ ಹತ್ತಿರವೂ ದಾಖಲೆಯ ಬಾಣಗಳಿವೆ ಎಂದು ಪರೋಕ್ಷವಾಗಿ ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಇನ್ನೆರಡು ದಿನಗಳಲ್ಲಿ ಬಿಬಿಎಂಪಿ ಪೇಪರ್‌ಗಳನ್ನು ಮುಂದೆ ಇಡ್ತೀವಿ: ಹೆಚ್‌ಡಿಕೆ
ಆಗಸ್ಟ್ 15ರ ಬಳಿಕ ದಾಖಲೆ ರಿಲೀಸ್ ಮಾಡೋದಾಗಿ ಡಿಸಿಎಂ ಸೋಮವಾರ ಹೇಳಿಕೆ ನೀಡಿ ತೀವ್ರ ಕುತೂಹಲ ಮೂಡಿಸಿದ್ರು. ಇದರ ನಡುವೆಯೇ ಕುಮಾರಸ್ವಾಮಿ ಕೂಡ ಪೇಪರ್ ಬಾಂಬ್ ಸಿಡಿಸಿದ್ದಾರೆ. ಇನ್ನೆರಡು ದಿನದಲ್ಲಿ ಬಿಬಿಎಂಪಿ ಪೇಪರ್ ಮುಂದಿಡ್ತೀವಿ ಎನ್ನುವ ಮಾತುಗಳನ್ನು ಆಡಿದ್ದಾರೆ. ಬಿಬಿಎಂಪಿಯಲ್ಲಿ ನಡೆಯುತ್ತಿರುವ ಪೇಪರ್‍ಗಳನ್ನ ನಿಮ್ಮ ಮುಂದಿಡ್ತೀನಿ.. ದಾಖಲೆ ಬಿಡುಗಡೆ ಅಂತೇನಿಲ್ಲ ಎಂದಿದ್ದಾರೆ.
ಹೆಚ್‍ಡಿಕೆ ಮಾತುಗಳು ಈಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿವೆ. ಕುಮಾರಸ್ವಾಮಿ ಯಾರ ವಿರುದ್ಧದ ದಾಖಲೆಗಳನ್ನು ಮತ್ತು ಯಾವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊರಗಿಡಬಹುದು. ಇದರ ಪರಿಣಾಮಗಳು ಏನಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
Web Stories