ನವದೆಹಲಿ: ಜಾರಿ ನಿರ್ದೇಶನಾಲುಯದ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೈ ಬಿಪಿ, ಹೈ ಶುಗರ್ ನಿಂದ ಬಳಲುತ್ತಿರುವ ಡಿ.ಕೆ.ಶಿವಕುಮಾರ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಸೆಪ್ಟೆಂಬರ್ 17ರವರೆಗೂ ಕಸ್ಟಡಿ ವಿಸ್ತರಣೆಯಾದ ಬಳಿಕ ಶನಿವಾರ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳು ಮುಂದಾಗಿದ್ದರು. ಬೆಳಗ್ಗೆ 9:30 ವೇಳೆಗೆ ತುಘಲಕ್ ರೋಡ್ ಪೋಲಿಸ್ ಠಾಣೆಯಿಂದ ಡಿಕೆ ಶಿವಕುಮಾರ್ ಕರೆದುಕೊಂಡು ಹೋದ ಇಡಿ ಅಧಿಕಾರಿಗಳು 11 ಗಂಟೆ ಬಳಿಕ ವಿಚಾರಣೆ ಆರಂಭಿಸಿದ್ದರು. ಮಧ್ಯಾಹ್ನ ಒಂದು ಗಂಟೆ ಬಳಿಕ ಡಿಕೆ ಶಿವಕುಮಾರ್ ಗೆ ಜ್ವರ ಮತ್ತು ಹೈ ಬಿಪಿಯಾಗಿ ಆರೋಗ್ಯದಲ್ಲಿ ಏರುಪೇರಾಯಿತು. ಕೂಡಲೇ ಕೋರ್ಟ್ ನಿರ್ದೇಶನದಂತೆ ಇಡಿ ಅಧಿಕಾರಿಗಳು ಆರ್‍ಎಂಎಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
Advertisement
ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆ ಎರ್ಮಜೆನ್ಸಿ ವಾರ್ಡ್ ಗೆ ಡಿಕೆ ಶಿವಕುಮಾರ್ ಅವರನ್ನ ದಾಖಲು ಮಾಡಲಾಯಿತು. ಸುಮಾರು ಏಳು ಗಂಟೆ ಬಳಿಕ ಸಪೆಷಲ್ ವಾರ್ಡ್ ಗೆ ಶಿಫ್ಟ್ ಮಾಡಿದ ವೈದ್ಯರು ಕಡ್ಡಾಯವಾಗಿ ವಿಶ್ರಾಂತಿ ಪಡೆಯಲೇಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ವೈದ್ಯರ ಸಲಹೆ ಹಿನ್ನೆಲೆ ಡಿಕೆ ಶಿವಕುಮಾರ್ ಇಡಿ ಅಧಿಕಾರಿಗಳ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 11 ಗಂಟೆಯ ಬಳಿಕ ಮತ್ತೆ ವಿಚಾರಣೆ ಆರಂಭವಾಗುವ ಸಾಧ್ಯತೆಗಳಿವೆ.
Advertisement
ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಭೇಟಿಯಾಗಿದ್ದರು. ಆಸ್ಪತ್ರೆಗೆ ಆಗಮಿಸಿದ ಪತ್ನಿ ಮತ್ತು ಮಕ್ಕಳು ಡಿಕೆಶಿಯವರ ಆರೋಗ್ಯ ವಿಚಾರಿಸಿದರು.