ರಾಯಚೂರು: ಕೊರೊನಾದಿಂದ ಸತ್ತವರ ಮನೆಗೆ ಬಿಜೆಪಿ ನಾಯಕರು ಯಾರೂ ಹೋಗಲಿಲ್ಲ. 4 ಲಕ್ಷ ಜನ ಕೊರೊನಾಗೆ ಬಲಿಯಾಗಿದ್ದಾರೆ. ಜನರಿಗೆ ಬಿಜೆಪಿ ಸರ್ಕಾರ ಏನು ಆಶೀರ್ವಾದ ಮಾಡಿದೆ. ಜನ ಸತ್ತಿರುವ ಬೂದಿ ನೋಡಿದವಲ್ಲಾ ಇದೇನಾ ಆಶೀರ್ವಾದ. ಬಿಜೆಪಿ ಸರ್ಕಾರ ಜನರಿಗೆ ಬೂದಿ ಆಶೀರ್ವಾದ ಮಾಡಿದೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ವಿಭಾಗ ಮಟ್ಟದ ಸಭೆಗಾಗಿ ರಾಯಚೂರನ್ನು ತಲುಪಿದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆ ದೊರಕಿದ ಸ್ವಾಗತ ಅಭೂತಪೂರ್ವವಾಗಿತ್ತು!
ನಿಮ್ಮೆಲ್ಲರ ನಂಬಿಕೆ ಮತ್ತು ವಿಶ್ವಾಸ ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಲು ನಮಗೆ ಸ್ಪೂರ್ತಿ ನೀಡುತ್ತದೆ.
— DK Shivakumar (@DKShivakumar) August 17, 2021
Advertisement
ರಾಯಚೂರಿನಲ್ಲಿ ಕಲಬುರಗಿ ವಿಭಾಗೀಯ ಮಟ್ಟದ ಕಾಂಗ್ರೆಸ್ ಸಭೆ ಬಳಿಕ ಮಾತನಾಡಿದ ಅವರು, ಸರ್ಕಾರ ಔಷಧಿ, ಗೋಧಿ, ಆಸ್ಪತ್ರೆ ಬೆಡ್ ಕೊಟ್ಟು ಆಶೀರ್ವಾದ ಮಾಡಲಿಲ್ಲ. ಸಿಎಂ ಯಾಕೆ ಬದಲಾವಣೆ ಮಾಡಿದ್ದಾರೆ ಅಂತ ಬಿಜೆಪಿ ಅವರು ಹೇಳಬೆಕು. ಕೇಂದ್ರ ಆರೋಗ್ಯ ಸಚಿವರನ್ನ ಯಾಕೆ ತೆಗೆದ್ರು ಅಂತ ಬಿಜೆಪಿಯವರೇ ಹೇಳಬೇಕು. ಸಭೆಯಲ್ಲಿ ವಿಭಾಗೀಯ ಮಟ್ಟದ ನಾಯಕರಿಗೆ ಟಾರ್ಗೆಟ್ ಕೊಟ್ಟಿದ್ದೇವೆ. ಟಾರ್ಗೆಟ್ ಏನಂದ್ರೆ 75 ವರ್ಷದ ಸ್ವಾತಂತ್ರ್ಯ ಹಿನ್ನೆಲೆ ಇಡೀ ವರ್ಷ ಆಚರಣೆ ಮಾಡುವುದು. ಕಾಂಗ್ರೆಸ್ ಮಾತ್ರವಲ್ಲದೆ ಎಲ್ಲರನ್ನ ಒಳಗೊಂಡು ಕಾರ್ಯಕ್ರಮಗಳನ್ನ ರೂಪಿಸಬೇಕು. ಒಂದೊಂದು ತಿಂಗಳು ಒಂದೊಂದು ಹೆಸರಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ಎದುರೇ ಸಿದ್ದರಾಮಯ್ಯಗೆ ಜೈಕಾರ ಕೂಗಿದ ವ್ಯಕ್ತಿ
Advertisement
The love and warmth given by Raichur today to Congress Party leaders and workers upon their arrival for the divisional level meeting was truly overwhelming!
This faith & trust inspires us all to work harder! pic.twitter.com/75Mj9yIAKU
— DK Shivakumar (@DKShivakumar) August 17, 2021
Advertisement
In a divisional meeting with party leaders of Raichur, Kalaburagi and Bidar, alongside AICC GS Sri @RSSurjewala and CLP leader Sri @Siddaramaiah, we discussed the prevailing issues in these regions, in addition to strengthening the party at the grassroots level. pic.twitter.com/u1RdimJgYg
— DK Shivakumar (@DKShivakumar) August 17, 2021
Advertisement
ಅಕ್ಟೋಬರ್ ತಿಂಗಳಲ್ಲಿ ಗಾಂಧಿ ನೆನಪಲ್ಲಿ ಪ್ರತಿ ಪಂಚಾಯತಿಯಲ್ಲಿ ಸಭೆ. ನವೆಂಬರ್ ನೆಹರು ಜನ್ಮದಿನ ಹಿನ್ನೆಲೆ ಪ್ರಜಾಪ್ರಭುತ್ವ ಕುರಿತು ಜಾಗೃತಿ. ಡಿಸೆಂಬರ್ ತಿಂಗಳು ಕಾಂಗ್ರೆಸ್ ಸಂಸ್ಥಾಪನಾ ದಿನ ಹಿನ್ನೆಲೆ ಕಾರ್ಯಕ್ರಮಗಳನ್ನ ರೂಪಿಸುತ್ತಿದ್ದೇವೆ. ಎಲ್ಲಾ ಕಾರ್ಯಕರ್ತರಿಗೂ ಕೆಲಸ ಹಂಚುತ್ತಿದ್ದೇವೆ. ನಿಷ್ಕ್ರಿಯ ಇದ್ದವರು ಕೆಲಸ ಮಾಡುವವರಿಗೆ ಅವಕಾಶ ಕೊಡಬೇಕು ಅನ್ನೋ ಸಂದೇಶ ನೀಡಿದ್ದೇವೆ ಅಂತ ಡಿ.ಕೆ.ಶಿವಕುಮಾರ್ ಹೇಳಿದರು.