ಬೆಂಗಳೂರು: ಐಎಎಸ್ ಮತ್ತು ಐಪಿಎಸ್ ಬೆಳವಣಿಗೆ ಬಗ್ಗೆ ನಾನು ಮಾತಾಡಲ್ಲ. ಆದರೆ ನಾನು ದೇವರನ್ನು ನಂಬುತ್ತೇನೆ ಎಂದು ಡಿ.ಕೆ ರವಿ (DK Ravi) ಪತ್ನಿ ಕುಸುಮಾ (Kusuma) ತಿಳಿಸಿದ್ದಾರೆ.
ಐಪಿಎಸ್ ಅಧಿಕಾರಿ ರೂಪಾ (Roopa IPS) ಹಾಗೂ ರೋಹಿಣಿ ಸಿಂಧೂರಿಯ (Rohin Sindhuri) ಜಟಾಪಟಿಗೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ಮ ಯಾರನ್ನು ಬಿಡುವುದಿಲ್ಲ. ಇದೇ ಜನ್ಮದಲ್ಲಿ ಇಲ್ಲೇ ಅನುಭವಿಸುತ್ತೇವೆ ಎಂಬ ನಂಬಿಕೆ ಇಟ್ಟಿಕೊಂಡಿದ್ದೇನೆ. ನಾನು ಯಾರ ಪರನೂ ನಿಲ್ಲಲ್ಲ. ಆದರೆ ನನಗೆ ಆದ ನೋವು ಬೇರೆ ಯಾರಿಗೂ ಆಗಬಾರದು ಅನ್ನೋದಷ್ಟೇ ನನ್ನ ಉದ್ದೇಶವಾಗಿದೆ ಎಂದು ಹೇಳಿದರು.
- Advertisement
ನನಗೆ ಆದ ನೋವು, ನನ್ನ ಕುಟುಂಬಕ್ಕೆ ಆದ ನೋವು ಬೇರೆ ಯಾರಿಗೂ ಆಗಬಾರದು. ಸಿಬಿಐ ರಿಪೋರ್ಟ್ ಬಂದ ಮೇಲೆ, ಅದರಲ್ಲಿ ಏನಿತ್ತು ಎನ್ನುವುದನ್ನು ಯಾರು ತಿಳಿದುಕೊಳ್ಳಲಿಲ್ಲ. ಇನ್ನೂ ಹಲವು ಸತ್ಯಗಳಿವೆ. ಅದನ್ನು ಯಾರು ಯೋಚನೆ ಮಾಡಿಲ್ಲ. ರಿಪೋರ್ಟ್‍ನಲ್ಲಿ ಎಲ್ಲವೂ ವಿಸ್ತಾರವಾಗಿ ವಿವರಣೆ ಇದೆ. ಅದು ಎಲ್ಲರಿಗೂ ಗೊತ್ತಾಗಲಿ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಣಕ್ಕಾಗಿ ಪೀಡಿಸುತ್ತಿದ್ದ ಪ್ರಾಣ ಸ್ನೇಹಿತನನ್ನೇ ಹತ್ಯೆಗೈದ
- Advertisement
ಯಾವ ಕಾರಣಕ್ಕೆ ರವಿ ಸಾವನ್ನಪ್ಪಿದ್ರು ಅನ್ನೋದು ಸಿಬಿಐ ವರದಿಯಲ್ಲಿದೆ. ಡಿ.ಕೆ ರವಿಗೆ ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆ ಇರಲಿಲ್ಲ. ಆ ರೀತಿಯ ಹೇಳಿಕೆ ನೀಡುತ್ತಿರುವುದು ಡಿ.ಕೆ ರವಿಗೆ ನೀಡಿರುವ ಅವಮಾನವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಲ್ಲು-ಬಾಣಕ್ಕೆ 2000 ಕೋಟಿ ಡೀಲ್ – ಸಂಜಯ್ ರಾವತ್ ಬಾಂಬ್
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k