ಬೆಂಗಳೂರು: ಬೆಳಗಾವಿ ಮಾತ್ರವಲ್ಲ ಬೆಂಗಳೂರಿನಲ್ಲೂ ಅನ್ಯಭಾಷಿಕರ ದರ್ಬಾರ್ ಆರಂಭವಾಗಿದೆ. ಪಬ್‍ನಲ್ಲಿ ಕನ್ನಡ ಹಾಡು ಕೇಳೋದೇ ತಪ್ಪಾ ಅನ್ನೋ ಪ್ರಶ್ನೆ ಎದ್ದಿದೆ. ಕನ್ನಡ ಹಾಡು ಕೇಳಿದ್ದಕ್ಕೆ ಡಿಜೆ ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Advertisement
ಕೋರಮಂಗಲದ ಬದ್ಮಾಶ್ ಹ್ಯಾಂಗೋವರ್ ಪಬ್‍ನಲ್ಲಿ ಈ ಘಟನೆ ನಡೆದಿದೆ. ವಿವೇಕನಗರದ ನಿವಾಸಿ ಸುಮಿತಾ ಫ್ಯಾಮಿಲಿ ನಿನ್ನೆ ರಾತ್ರಿ ಬದ್ಮಾಶ್ ಪಬ್‍ನಲ್ಲಿ ಸಹೋದರ ನಂದಕಿಶೋರ್ ಬರ್ತ್ ಡೇ ಪಾರ್ಟಿಗೆ ಬಂದಿತ್ತು. ಬರೀ ಅನ್ಯಭಾಷೆ ಹಾಡುಗಳನ್ನೇ ಪ್ಲೇ ಮಾಡ್ತಿದ್ದ ಡಿಜೆಗೆ ಕನ್ನಡ ಹಾಡು ಹಾಕಿ ಅಂತ ಸುಮಿತಾ ಕುಟುಂಬ ಕೇಳಿಕೊಂಡಿದೆ. ಈ ವೇಳೆ ಡಿಜೆ, ಕನ್ನಡ ಗಿನ್ನಡ ಇಲ್ಲ, ಕನ್ನಡ ಬೇಕು ಅಂದ್ರೇ ಈ ಪಬ್ ಗೆ ಬರಬೇಡಿ ಎಂದು ಆವಾಜ್ ಹಾಕಿದ್ದಾನೆ. ಇದನ್ನೂ ಓದಿ: 40 ವರ್ಷಗಳ ನಂತರ ತನ್ನ ಮೂಲ ಹುಡುಕುತ್ತಾ ಬಂದ ಸ್ವೀಡನ್ ಪ್ರಜೆ!
Advertisement
Advertisement
ಆವಾಜ್ ಮಾತ್ರವಲ್ಲ ಡಿಜೆ ಸಿದ್ದಾರ್ಥ ಅಲಿಯಾಸ್ ಡಿಜೆ ಅಪೋಸಿಟ್ ಹಲ್ಲೆ ಮಾಡಲು ಸಹ ಮುಂದಾಗಿದ್ದ. ರಾತ್ರಿ 8:30 ರಿಂದ 12:30ರ ವರೆಗೂ ಕೇಳಿಕೊಂಡ್ರು ಕನ್ನಡ ಸಾಂಗ್ ಪ್ಲೇ ಮಾಡಲೇ ಇಲ್ಲ ಎಂದು ಕುಟುಂಬ ಆರೋಪಿಸಿದೆ. ಇದರಿಂದ ಬೆಂಗಳೂರಿನಲ್ಲಿ ಕನ್ನಡಿಗರಿಗೆ ಹಾಗೂ ಕನ್ನಡಕ್ಕೆ ಕವಡೆ ಕಾಸಿನ ಕಿಮ್ಮತ್ತು ಎಂಬುದು ಸ್ಪಷ್ಟವಾಗಿದೆ. ಕನ್ನಡಿಗರು ಬೆಂಗಳೂರಿನ ಪಬ್ ಗೆ ಹೋಗೊ ಹಾಗೇ ಇಲ್ವಾ, ಪಬ್ ಗೆ ಹೋದ್ರೆ ಕನ್ನಡ ಸಾಂಗ್ ಹಾಕಿ ಅಂತ ಕೇಳಲೇಬಾರದಾ ಎಂಬ ಅನುಮಾನ ಮೂಡಿದೆ.