ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಹಾಲಿವುಡ್ ನ ಖ್ಯಾತ ಡಿಜೆ ಅಲೆನ್ ವಾಕರ್ (Alan Walker) ಸದಾ ಮಾಸ್ಕ್ (Mask) ಹಾಕಿಕೊಂಡು ಮನೆಯಿಂದ ಆಚೆ ಬರುತ್ತಾರೆ. ಕಾರ್ಯಕ್ರಮದಲ್ಲೂ ಅವರು ಮಾಸ್ಕ್ ಮರೆಯುವುದಿಲ್ಲ. ಎಲ್ಲರೂ ತಮ್ಮನ್ನು ಗುರುತಿಸಲಿ, ತಮ್ಮ ಅಂದವನ್ನು ನೋಡಲಿ ಎಂದು ಬಯಸಿದರೆ, ಆದರೆ ಅಲೆನ್ ಮಾತ್ರ ಮುಖ ಮುಚ್ಚಿಕೊಂಡೆ ಓಡಾಡುತ್ತಾರೆ.
Advertisement
ಅಷ್ಟಕ್ಕೂ ಅಲೆನ್ ಮಾಸ್ಕ್ ಹಾಕಿಕೊಂಡೇ ಇರುವುದು ಯಾಕೆ? ಕೋವಿಡ್ ನಂತರವೂ ಅವರು ಮಾಸ್ಕ್ ಹಾಕಿಕೊಳ್ಳುವುದು ಯಾಕೆ ಎಂದು ಹಲವರು ಪ್ರಶ್ನೆ ಕೂಡ ಮಾಡಿದ್ದಾರೆ. ಅಚ್ಚರಿಯ ಸಂಗತಿ ಅಂದರೆ ಕೋವಿಡ್ ಗಿಂತ ಮುಂಚೆಯೇ ಅವರು ಮಾಸ್ಕ್ ಧರಿಸಿಕೊಂಡೇ ಓಡಾಡುತ್ತಿದ್ದರಂತೆ. ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ 2015ರಿಂದ ಅವರು ನಿರಂತವಾಗಿ ಮಾಸ್ಕ್ ಧರಿಸುತ್ತಿದ್ದಾರೆ.
Advertisement
Advertisement
ನಿನ್ನೆಯಷ್ಟೇ ಬೆಂಗಳೂರಿನಲ್ಲಿ ನಡೆದ ಆರ್.ಸಿ.ಬಿ ಅನ್ ಬಾಕ್ಸ್ ಕಾರ್ಯಕ್ರಮಕ್ಕೂ ಅಲೆನ್ ಆಗಮಿಸಿದ್ದರು. ಆಗಲೂ ಅವರು ಮಾಸ್ಕ್ ಧರಿಸಿಕೊಂಡೇ ಇದ್ದರು. ಕಾರ್ಯಕ್ರಮದಲ್ಲಾದರೂ ಅವರು ಮಾಸ್ಕ್ ತೆಗೆಯುತ್ತಾರೆ ಎನ್ನುವ ನಂಬಿಕೆ ಇತ್ತು. ಆದರೆ, ಅವರು ಕೊನೆಗೂ ಮಾಸ್ಕ್ ತಗೆಯಲಿಲ್ಲ. ಹಾಗೆಯೇ ಕಾರ್ಯಕ್ರಮ ನಡೆಸಿಕೊಟ್ಟು ಮತ್ತಷ್ಟು ಕುತೂಹಲಕ್ಕೆ ಕಾರಣವಾದರು.
Advertisement
ತಾವು ಮಾಸ್ಕ್ ಧರಿಸಿಯೇ ಇರುವುದಕ್ಕೆ ನಾನಾ ಕಾರಣಗಳನ್ನೂ ಅವರು ಕೊಟ್ಟಿದ್ದಾರೆ. ಮಾಸ್ಕ್ ಇಲ್ಲದೇ ಓಡಾಡಿದರೆ, ಜನರು ತಮ್ಮನ್ನು ಬಹುಬೇಗ ಗುರುತಿಸುತ್ತಾರಂತೆ. ಹಾಗಾಗಿ ತಮ್ಮ ಖಾಸಗಿ ಕ್ಷಣಗಳಿಗೆ ಧಕ್ಕೆ ಆಗುತ್ತದೆ. ಜನರು ಗುರುತಿಸದಂತೆ ಓಡಾಡಿದರೆ ನೆಮ್ಮದಿ. ಹಾಗಾಗಿ ಸದಾ ಮಾಸ್ಕ್ ಧರಿಸುತ್ತೇನೆ ಎಂದಿದ್ದಾರೆ.
ಮತ್ತೊಂದು ಕಡೆ ಇದೇ ಮಾಸ್ಕ್ ವಿಚಾರವಾಗಿ ಮಾತನಾಡಿರುವ ಅವರು, ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಸಮಾನರಂತೆಯೇ ಇರಬೇಕು. ನನಗೆ ಮಾಸ್ಕ್ ಆ ರೀತಿಯ ಸಂದೇಶವನ್ನು ನೀಡುತ್ತದೆ ಎಂದು ಭಾವಿಸಿದ್ದೇನೆ. ಸಮಾನತೆಗಾಗಿ ನಾನು ಸದಾ ಮಾಸ್ಕ್ ಧರಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.