ವಾಷಿಂಗ್ಟನ್: ಮುಂದಿನ ವರ್ಷದಿಂದ ಅಮೆರಿಕದ ನ್ಯೂಯಾರ್ಕ್ ನಗರದ(New York) ಶಾಲೆಗಳಗೆ ದೀಪಾವಳಿಯಂದು (Deepavali) ಸಾರ್ವಜನಿಕ ರಜೆ (Holiday) ಘೋಷಣೆಯಾಗಲಿದೆ.
ನ್ಯೂಯಾರ್ಕ್ ಅಸೆಂಬ್ಲಿ ಸದಸ್ಯೆ ಜೆನ್ನಿಫರ್ ರಾಜ್‌ಕುಮಾರ್ ಮತ್ತು ಶಿಕ್ಷಣ ಚಾನ್ಸಲರ್ ಡೇವಿಡ್ ಬ್ಯಾಂಕ್ಸ್ ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ತಿಳಿಸಿದ್ದಾರೆ.
Advertisement
ನ್ಯೂಯಾರ್ಕ್ ನಗರದಲ್ಲಿರುವ ಹಿಂದೂ, ಬುದ್ಧ, ಸಿಖ್, ಜೈನ್ ಸಮುದಾಯದ ಸುಮಾರು 2 ಲಕ್ಷ ಮಂದಿ ಬೆಳಕಿನ ಹಬ್ಬವನ್ನು ಆಚರಿಸುತ್ತಿದ್ದಾರೆ. ಈಗ ದೀಪಾವಳಿಯನ್ನು ಗುರುತಿಸುವ ಸಮಯ ಬಂದಿದೆ ಎಂದು ಈ ರಜೆ ಜಾರಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೆನ್ನಿಫರ್ ರಾಜ್‌ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಚೇತನ್ ವಿವಾದಾತ್ಮಕ ಹೇಳಿಕೆಗೆ ನೋ ಕಾಮೆಂಟ್ಸ್ ಎಂದ `ಕಾಂತಾರ’ ನಟ ರಿಷಬ್
Advertisement
#Diwali symbolizes the victory of light over darkness, and today that light is brighter.@NYCMayor stood in solidarity as @JeniferRajkumar introduced legislation to replace "Anniversary Day" on the school calendar with Diwali. pic.twitter.com/yrryS5DGSk
— City of New York (@nycgov) October 20, 2022
Advertisement
ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಅವರ ಸಸ್ಯ ಆಧಾರಿತ ಆಹಾರ ಮತ್ತು ಧ್ಯಾನ ಅಭ್ಯಾಸದ ಬಗ್ಗೆ ಮಾತನಾಡಿದ ಜೆನ್ನಿಫರ್ ರಾಜ್ ಕುಮಾರ್ ಎರಿಕ್ ಅವರನ್ನು ಹಿಂದೂ ಮೇಯರ್ ಎಂದು ಕರೆದರು.
Advertisement
ದೀಪಾವಳಿ ಹಬ್ಬವನ್ನು ಯಾಕೆ ಆಚರಿಸಬೇಕು ಮತ್ತು ನಿಮ್ಮೊಳಗೆ ಬೆಳಕಾಗುವುದು ಹೇಗೆ ಎಂಬುದರ ಬಗ್ಗೆ ಮಕ್ಕಳಿಗೆ ತಿಳಿಸಲಾಗುತ್ತದೆ ಎಂದು ಜೆನ್ನಿಫರ್ ಹೇಳಿದರು.
ದೀಪಾವಳಿ ರಜೆಯ ಹೊರತಾಗಿಯೂ ಹೊಸ ಶಾಲಾ ವೇಳಾಪಟ್ಟಿಯ ಪ್ರಕಾರ ಇನ್ನೂ 180 ಶಾಲಾ ದಿನಗಳನ್ನು ಹೊಂದಿರುತ್ತದೆ.