ಸಂತೋಷದೊಂದಿಗೆ ಸಿಹಿ ಹಂಚುವ ಹಬ್ಬ ದೀಪಾವಳಿಗೆ ಮನೆಯಲ್ಲಿಯೇ ಸಿಹಿ ಮಾಡಿಲ್ಲವೆಂದರೆ ಹೇಗೆ? ಇಂದು ದೀಪಾವಳಿಯ ಪ್ರಯುಕ್ತ ಜನಪ್ರಿಯವಾದ ಸಿಹಿ ರಸಗುಲ್ಲ (Rasgulla) ಮಾಡುವ ವಿಧಾನವನ್ನು ನಾವು ಹೇಳಿಕೊಡುತ್ತೇವೆ. ನೀವೂ ಇದನ್ನು ಮನೆಯಲ್ಲಿ ಟ್ರೈ ಮಾಡಿ ಹಬ್ಬವನ್ನು ಸಿಹಿಯೊಂದಿಗೆ ಆಚರಿಸಿ.
ಬೇಕಾಗುವ ಪದಾರ್ಥಗಳು:
ಹಾಲು – 2 ಲೀಟರ್
ನಿಂಬೆ ರಸ – 2 ಟೀಸ್ಪೂನ್
ಸಕ್ಕರೆ – 1 ಕಪ್
ನೀರು – 5 ಕಪ್
ಏಲಕ್ಕಿ – 3
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಪಾತ್ರೆಯಲ್ಲಿ ಹಾಲನ್ನು ಹಾಕಿ, ಕುದಿಸಿ.
* ಹಾಲು ಕುದಿ ಬಂದ ನಂತರ ನಿಂಬೆ ರಸವನ್ನು ಅದಕ್ಕೆ ಹಾಕಿ, ಚೆನ್ನಾಗಿ ಬೆರೆಸಿ.
* ಈಗ ಉರಿಯನ್ನು ಕಡಿಮೆ ಮಾಡಿ, ಹಾಲು ಸಂಪೂರ್ಣವಾಗಿ ಒಡೆಯಲು ಬಿಡಿ.
* ಹಾಲು ಸಂಪೂರ್ಣವಾಗಿ ಒಡೆದ ನಂತರ ಅದನ್ನು ಶುಭ್ರವಾದ ಬಟ್ಟೆಯ ಸಹಾಯದಿಂದ ಸೋಸಿ ನೀರಿನಂಶದಿಂದ ಪನೀರ್ ಅನ್ನು ಬೇರ್ಪಡಿಸಿ.
* ಈಗ ಪನೀರ್‌ನಿಂದ ನಿಂಬೆಹಣ್ಣಿನ ಹುಳಿ ಅಂಶವನ್ನು ತೆಗೆದು ಹಾಕಲು ಅದೇ ಬಟ್ಟೆಯ ಸಹಾಯದಿಂದ ತಣ್ಣೀರಿನಲ್ಲಿ ತೊಳೆಯಿರಿ.
* ಈಗ ಪನೀರ್‌ನಿಂದ ನೀರಿನ ಅಂಶವನ್ನು ಆದಷ್ಟು ಹಿಂಡಿ ತೆಗೆಯಿರಿ. ನೀರು ಇಳಿದು ಹೋಗಲು 1 ಗಂಟೆಗಳ ಕಾಲ ಪನೀರ್ ಅನ್ನು ಅದೇ ಬಟ್ಟೆಯಲ್ಲಿ ಕಟ್ಟಿ, ನೇತು ಹಾಕಿ. ಇದನ್ನೂ ಓದಿ: ಸಿಹಿಯಾದ ಜಿಲೇಬಿ ಮಾಡಿ ನಾಲಿಗೆ ಚಪ್ಪರಿಸಿ ಸವಿಯಿರಿ
Advertisement
Advertisement
* ಈಗ ಪನೀರ್ ಅನ್ನು 5 ನಿಮಿಷ ಕೈಯಿಂದಲೇ ಮ್ಯಾಶ್ ಮಾಡಿ. ಪನೀರ್‌ನಲ್ಲಿ ಯಾವುದೇ ಗಂಟಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಸಣ್ಣ ಸಣ್ಣ ಉಂಡೆ ಕಟ್ಟಿಕೊಳ್ಳಿ.
* ಈಗ ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು, ಅದಕ್ಕೆ 5 ಕಪ್ ನೀರು, 1 ಕಪ್ ಸಕ್ಕರೆ ಹಾಗೂ 3 ಏಲಕ್ಕಿ ಹಾಕಿ, ಸಕ್ಕರೆ ಕರಗುವವರೆಗೆ ಚೆನ್ನಾಗಿ ಕುದಿಸಿ.
* ಸಕ್ಕರೆ ಪಾಕ 5 ನಿಮಿಷ ಕುದಿದ ಬಳಿಕ ಪನೀರ್ ಉಂಡೆಗಳನ್ನು ಒಂದೊಂದಾಗಿಯೇ ಪಾಕದಲ್ಲಿ ಬಿಡಿ.
* ಈಗ 10 ನಿಮಿಷ ರಸಗುಲ್ಲವನ್ನು ಸಕ್ಕರೆ ಪಾಕದೊಂದಿಗೆ ಕುದಿಸಿ.
* ಬಳಿಕ ರಸಗುಲ್ಲವನ್ನು ಪಾಕದಿಂದ ತೆಗೆದು ತಕ್ಷಣ ತಣ್ಣನೆಯ ನೀರಿನಲ್ಲಿ ಬಿಡಿ. ಇದರಿಂದ ರಸಗುಲ್ಲ ಕುಗ್ಗುವುದನ್ನು ತಡೆಯಬಹುದು.
* ಈಗ ಬಡಿಸುವ ಬೌಲ್ ತೆಗೆದುಕೊಂಡು, ಅದಕ್ಕೆ ರಸಗುಲ್ಲ ಹಾಕಿ, ಸಕ್ಕರೆ ಪಾಕವನ್ನೂ ಸುರಿದು ಬಡಿಸಿ. ಇದನ್ನೂ ಓದಿ: ಸೀಬೆ ಹಣ್ಣಿನಿಂದ ಬರ್ಫಿ ಮಾಡಿ ನೋಡಿ