ಬೆಂಗಳೂರು: ಬಿಗ್ಬಾಸ್ ಖ್ಯಾತಿಯ ದಿವ್ಯಾ ಉರುಡುಗ, ಅರವಿಂದ್ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಈ ಜೋಡಿ ಏನೇ ಮಾಡಿದ್ರು ಸುದ್ದಿ ಎನ್ನುವಷ್ಟರ ಮಟ್ಟಿಗೆ ಅಭಿಮಾನಿಗಳ ಬಳಗ ಇವರಿಗೆ ಇದೆ. ಈ ಜೋಡಿ ಇದೀ ಒಟ್ಟಿಗೆ ಕಾರ್ ಸವಾರಿ ಮಾಡುವ ಮೂಲಕವಾಗಿ ಸುದ್ದಿಯಲ್ಲಿದೆ.
ಕೆಪಿ ಅರವಿಂದ್ ಅವರು ಗಂಟೆಗೆ 200 ಕಿಮೀ ವೇಗದಲ್ಲಿ ಕಾರ್ ಸವಾರಿ ಮಾಡಿದ್ದಾರೆ. ಆ ಬಗ್ಗೆ ದಿವ್ಯಾ ಉರುಡುಗ ಕೂಡ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ಬ್ಲೂ ಫಿಲಂಗಳ ಬಗ್ಗೆ ಹೆಚ್ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ: ಅಶ್ವಥ್ ನಾರಾಯಣ
View this post on Instagram
ಗಂಟೆಗೆ 200 ಕಿಮೀ ಓಡುವ ಕಾರನಲ್ಲಿ ಎಂದಿಗೂ ನಾನು ನನ್ನ ಜೀವನದಲ್ಲಿ ಕೂತಿರಲಿಲ್ಲ. ಡ್ರೈವರ್ ಕೌಶಲದ ಮೇಲೆ ನಿಮಗೆ ನಂಬಿಕೆ ಇದ್ದಾಗ, ಸೂಪರ್ ಫನ್ ಆಗಿರತ್ತೆ. ಈ ನ್ಯಾಷನಲ್ ರೆಕಾರ್ಡ್ನಲ್ಲಿ ಭಾಗಿಯಾಗಲು ಸೂಪರ್ ಥ್ರಿಲ್ ಆಗಿತ್ತು ಎಂದು ದಿವ್ಯಾ ಉರುಡುಗ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಸಾಕಷ್ಟು ಜನರು ದಿವ್ಯಾ ಉರುಡುಗ ಪೋಸ್ಟ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಕಟೀಲ್ ಆರೋಪಕ್ಕೆ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಸಾಕ್ಷ್ಯ ನೀಡಿದ ಬಿಜೆಪಿ
View this post on Instagram
ದಿವ್ಯಾ ನಂತಹ ಸಹ ಚಾಲಕಿ ಸಿಕ್ಕಿರುವುದು ತುಂಬಾ ಖುಷಿಯಾಗಿದೆ. ಯಾವುದೇ ಸಮಯದಲ್ಲಿ ಯಾವುದೇ ಅಪಾಯ ಬರಬಹುದು, ಹೀಗಿರುವಾಗ ಆಕೆಯ ನಂಬಿಕೆ ಗಳಿಸಿಕೊಂಡಿರುವುದಕ್ಕೆ ನಾನು ಅದೃಷ್ಟ ಮಾಡಿದ್ದೇನೆ ಎಂದು ಅರವಿಂದ್ ಹೇಳಿಕೊಂಡಿದ್ದಾರೆ.
ಖಾಸಗಿ ಕಂಪನಿ ಆಯೋಜಿಸಿದ್ದ ಕಾರ್ ರೈಡ್ನಲ್ಲಿ ದಿವ್ಯಾ ಉರುಡುಗ, ಕೆಪಿ ಅರವಿಂದ್ ಭಾಗವಹಿಸಿದ್ದರು. ದಿವ್ಯಾ ಹಾಗೂ ಅರವಿಂದ್ ಇತ್ತೀಚಿಗೆ ಖಾಸಗಿ ಸಮಾರಂಭವೊಂದರಲ್ಲಿ ಜೊತೆಯಾಗಿ ಡ್ಯಾನ್ಸ್ ಮಾಡಿದ್ದು, ಪ್ರೇಕ್ಷಕರ ಗಮನ ಸೆಳೆದಿತ್ತು. ದಿವ್ಯಾ ಹಾಗೂ ಅರವಿಂದ್ರನ್ನು ಇಷ್ಟಪಟ್ಟ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅರ್ವಿಯಾ ಹ್ಯಾಶ್ ಟ್ಯಾಗ್ ಸೃಷ್ಟಿ ಮಾಡಿ ಟ್ರೆಂಡ್ ಮಾಡಿದ್ದರು.