ಚಿಕ್ಕಬಳ್ಳಾಪುರ: ವಿಚ್ಛೇದಿತ ಪತ್ನಿಯನ್ನು ಕೊಲೆ ಮಾಡಿ ಕಳ್ಳತನದ ಕಥೆ ಕಟ್ಟಿದ್ದ ಪತಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜುಲೈ 12ರಂದು ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಅಂಗನವಾಡಿ ಕಾರ್ಯಕರ್ತೆ ವೆಂಕಟಲಕ್ಷ್ಮಮ್ಮ(51) ಕೊಲೆ ಪ್ರಕರಣಣದಲ್ಲಿ ಆಕೆಯ ವಿಚ್ಚೇದಿತ ಗಂಡ ಅಂಜಪ್ಪನನ್ನ ಬಂಧಿಸಲಾಗಿದೆ.
Advertisement
Advertisement
ಜುಲೈ 12ರಂದು ಅಂಜಪ್ಪ ಅಳಿಯನ ಜೊತೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿ ಮನೆಯಲ್ಲಿ ಒಂಟಿಯಾಗಿದ್ದ ನನ್ನ ವಿಚ್ಚೇದಿತ ಪತ್ನಿ ವೆಂಕಟಲಕ್ಷ್ಮಮ್ಮಳನ್ನು ಕೊಲೆ ಮಾಡಿ, ಕತ್ತಲ್ಲಿದ್ದ ಸರ, ಮನೆಯ ಬಿರುವನಲ್ಲಿದ್ದ ಒಡವೆ, ಹಣವನ್ನು ಕದ್ದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಇದನ್ನೂ ಓದಿ: ಲುಲು ಮಾಲ್ ವಿವಾದ – ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟುನ ಕ್ರಮ: ಆದಿತ್ಯನಾಥ್
Advertisement
ಕೂಡಲೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮೃತ ವೆಂಕಟಲಕ್ಷ್ಮಮ್ಮಳನ್ನು ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿ, ತನಿಖೆ ನಡೆಸಲು ಪ್ರಾರಂಭಿಸಿದ್ದಾರೆ. ತನಿಖೆಯಲ್ಲಿ ಅಸಲಿ ಕೊಲೆಗಾರ ಅಂಜಪ್ಪ ಎನ್ನುವುದು ಗೊತ್ತಾಗಿದೆ. ಈ ಅಂಜಪ್ಪ ಚಿಂತಾಮಣಿ ತಾಲೂಕು ಕತ್ರಿಗುಪ್ಪೆ ಗ್ರಾಮದವನಾಗಿದ್ದು, ಈತ ನಾಯನಹಳ್ಳಿ ಗ್ರಾಮದ ಕೊಲೆಯಾದ ವೆಂಕಟಲಕ್ಷ್ಮಮ್ಮಳನ್ನ ಮದುವೆಯಾಗಿದ್ದ, ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ಈಕೆಗೆ ವಿಚ್ಚೇದನ ನೀಡಿದ್ದ ಅಂಜಪ್ಪ ಬೇರೊಂದು ಮದುವೆಯಾಗಿದ್ದ.
Advertisement
ಇದರಿಂದ ತವರುಮನೆ ಸೇರಿದ್ದ ವೆಂಕಟಲಕ್ಷ್ಮಮ್ಮ ತನ್ನ ನಾಯನಹಳ್ಳಿ ಗ್ರಾಮದಲ್ಲಿ ತನ್ನ ಹೆಸರಿನಲ್ಲಿದ್ದ 26 ಗುಂಟೆಯ ಜಮೀನನ್ನು ಗಂಡ ಅಂಜಪ್ಪ ಮಧ್ಯಸ್ಥಿಕೆಯಲ್ಲೇ ಒಬ್ಬರಿಗೆ 40 ಲಕ್ಷಕ್ಕೆ ಆಗ್ರಿಮೆಂಟ್ ಕೊಟ್ಟಿದ್ದಳು. ಆದರೆ ಅಗ್ರಿಮೆಂಟ್ ಮಾಡಿಕೊಂಡು ಸುಮ್ಮನಾಗಿದ್ದ ಅವರು ವರ್ಷಗಳೇ ಕಳೆದರೂ ರಿಜಿಸ್ಟರ್ ಮಾಡಿಕೊಂಡಿರಲಿಲ್ಲ. ಹೀಗಾಗಿ ಇತ್ತೀಚೆಗೆ ಅದೇ ಜಮೀನನ್ನು ವೆಂಕಟಲಕ್ಷ್ಮಮ್ಮ ಬೇರೊಬ್ಬರಿಗೆ 60ಲಕ್ಷಕ್ಕೆ ಮಾರಾಟ ಮಾಡಲು ಮುಂದಾಗಿದ್ದಳು. ಇದೇ ವಿಚಾರದಲ್ಲಿ ವಿಚ್ಚೇದಿತ ಗಂಡ ಹೆಂಡತಿ ಮಧ್ಯೆ ಮನಸ್ತಾಪ ಉಂಟಾಗಿ ಅಂಜಪ್ಪ ವೆಂಕಟಲಕ್ಷ್ಮಮ್ಮಳನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ನಮ್ಮ ಮುದ್ದಿನ ಗಿಳಿ ಕಾಣೆಯಾಗಿದೆ – ಬ್ಯಾನರ್, ಕರಪತ್ರ ಹಂಚಿದ ದಂಪತಿ