ಡಿವೋರ್ಸ್ ಫೋಟೋಶೂಟ್ : ನಟಿ ಶಾಲಿನಿಯ ನಾನಾವತಾರ

Public TV
1 Min Read
Shalini 5

ಟಿ  (Actress) ಶಾಲಿನಿ (Shalini) ಡಿವೋರ್ಸ್ ವಿಚಾರವಾಗಿ ಸಾಕಷ್ಟು ಸುದ್ದಿ ಆಗಿದ್ದಾರೆ. ವಿಚ್ಚೇದನ (Divorce) ಸಿಕ್ಕ ಸಂಭ್ರಮದಲ್ಲಿ ಅವರು ಫೋಟೋಶೂಟ್ (Photoshoot) ಮಾಡಿಸಿದ್ದು, ಆ ಫೋಟೋಗಳು ವೈರಲ್ ಆಗಿವೆ. ಅಲ್ಲದೇ, ಕೆಲವರು ಆ ರೀತಿಯ ಫೋಟೋಗಳಿಗೆ ಟೀಕೆ ಕೂಡ ಮಾಡಿದ್ದಾರೆ.

Shalini 3

ಶಾಲಿನಿ ತಮಿಳಿನ (Tamil) ಪ್ರಸಿದ್ಧ ಕಿರುತೆರೆ ನಟಿ. ಮುಳ್ಳುಂ ಮಲರುಂ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಮಗಳೊಂದಿಗೆ ತಾನು ಒಂಟಿಯಾಗಿ ಇದ್ದೇನೆ ಎಂದು ಹಲವಾರು ಸಲ ಹೇಳಿಕೊಂಡಿದ್ದರು. ಇದೀಗ ಡಿವೋರ್ಸ್ ವಿಚಾರವನ್ನು ಫೋಟೋಗಳ ಮೂಲಕ ಹಂಚಿಕೊಂಡಿದ್ದಾರೆ.  ಇದನ್ನೂ ಓದಿ:ಗೃಹ ಪ್ರವೇಶದ ಸಂಭ್ರಮದಲ್ಲಿ ‘ರಾಧಾ ರಮಣ’ ನಟಿ ಕಾವ್ಯ ಗೌಡ

Shalini 2

ಜೀವನದಲ್ಲಿ 99 ತೊಂದರೆಗಳಿವೆ. ಅವುಗಳಲ್ಲಿ ಗಂಡ ಕೂಡ ಒಬ್ಬ ಎನ್ನುವಂತಹ ಬರಹವನ್ನೂ ಫೋಟೋಗಳೊಂದಿಗೆ ಪೋಸ್ಟ್ ಮಾಡಿದ್ದಾರೆ. ಪತಿಯೊಂದಿಗೆ ಇರುವ ಫೋಟೋಗಳನ್ನು ಹರಿದು ಹಾಕುವ ಹಾಗೂ ಗಂಡ ಫೋಟೋವನ್ನು ಕಾಲಿನಿಂದ ತುಳಿಯುವಂತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

Shalini 1 1

ಡಿವೋರ್ಸ್ ನಂತರ ಮಗಳ ಸಂಪೂರ್ಣ ಜವಾಬ್ದಾರಿಯನ್ನು ನಾನೇ ತಗೆದುಕೊಂಡಿದ್ದೇನೆ ಎಂದು ಹೇಳಿರುವ ನಟಿ, ಮಗಳೊಂದಿಗೆ ಒಂಟಿಯಾಗಿ ಬದುಕುತ್ತಿರುವುದನ್ನೂ ಹೇಳಿಕೊಂಡಿದ್ದಾರೆ. ಅಲ್ಲದೇ, ಮಗಳನ್ನು ಹೇಗೆ ಬೆಳೆಸಬೇಕು ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ನಾನು ಧೈರ್ಯದಲ್ಲಿದ್ದೇನೆ ಎಂದಿದ್ದಾರೆ.

Shalini 6

ಫೋಟೋಗಾಗಿ ನಾನಾ ಬಗೆಯಲ್ಲಿ ಪೋಸ್ ಕೊಟ್ಟಿರುವ ಶಾಲಿನಿ, ರೆಡ್ ಸ್ಲಿಟ್ ಡ್ರೆಸ್ ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಡಿವೋರ್ಸ್ ಎಂಬ ಬೋರ್ಡ್ ಕೂಡ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಜೀವಕ್ಕೆ ಅಂತ್ಯ ಹಾಡುವ ಬದಲು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವುದು ಒಳ್ಳೆದು ಎಂಬ ಸಲಹೆಯನ್ನೂ ನೀಡಿದ್ದಾರೆ.

Shalini 4

ನಮ್ಮ ಜೀವನದಲ್ಲಿ ನಾವು ಹೇಗಿರಬೇಕು ಎನ್ನುವುದನ್ನು ನಾವೇ ನಿರ್ಧಾರ ಮಾಡಬೇಕು. ಸಹ್ಯವಲ್ಲದ ದಾಂಪತ್ಯ ಮುರಿಯುವುದರಲ್ಲಿ ಯಾವುದೇ ತಪ್ಪಿಲ್ಲ. ಜೀವನದಲ್ಲಿ ಎಲ್ಲರೂ ಖುಷಿಯಾಗಿ ಇರಬೇಕು ಎಂದು ಹೇಳಿಕೊಂಡಿದ್ದಾರೆ.

Shalini 1

ಇದೇ ಮೊದಲ ಬಾರಿಗೆ ನಟಿಯೊಬ್ಬರು ಈ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡು ವಿಚ್ಚೇದನವನ್ನು ಸೆಲೆಬ್ರೇಟ್ ಮಾಡಿರುವುದಕ್ಕೆ ನಾನಾ ರೀತಿಯ ಕಾಮೆಂಟ್ ಗಳನ್ನು ಹಾಕಿದ್ದಾರೆ ಅಭಿಮಾನಿಗಳು. ಒಂದಷ್ಟು ಜನ ಶಾಲಿನಿ ಪರವಾಗಿ ಮಾತನಾಡಿದ್ದರೆ, ಮತ್ತಷ್ಟು ಜನ ಶಾಲಿನ ಈ ನಡೆಯನ್ನು ಪ್ರಶ್ನಿಸಿದ್ದಾರೆ.

Share This Article