ಶಿವಮೊಗ್ಗ: ದೇಶ ವಿಭಜನೆ ಮಾಡುವುದು ಕಾಂಗ್ರೆಸ್‌ನ (Congress) ಸಂಸ್ಕೃತಿ. ಈಗಾಗಲೇ ದೇಶವನ್ನು ಮೂರು ವಿಭಾಗ ಮಾಡಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ (BY Raghavendra) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಡಿಕೆ ಸುರೇಶ್ (DK Suresh) ರಾಷ್ಟ್ರ ವಿಭಜನೆ ಹೇಳಿಕೆ ವಿಚಾರವಾಗಿ ಶಿವಮೊಗ್ಗದಲ್ಲಿ (Shivamogga) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶ ಒಡೆಯುವ ವಿಚಾರದಲ್ಲಿ ರಾಜಕೀಯ ನಾಯಕರು ಹೇಳಿಕೆ ಕೊಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಸಹ ಈ ಹೇಳಿಕೆಯನ್ನು ವಿರೋಧ ಮಾಡಿದ್ದಾರೆ. ಕಾಂಗ್ರೆಸ್ ನಾಯಕರಲ್ಲಿಯೇ ಭಿನ್ನ ನಿಲುವು ಇದೆ. ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು. ಇದನ್ನೂ ಓದಿ: ಹಾಸನ, ಮಂಡ್ಯ ಲೋಕಸಭಾ ಟಿಕೆಟ್ ಬಿಜೆಪಿಗೆ ಸಿಗಲಿದೆ: ಪ್ರೀತಮ್ ಗೌಡ
- Advertisement -
- Advertisement -
28 ಕ್ಷೇತ್ರದಲ್ಲೂ ಗೆಲ್ಲಲು ನಮ್ಮ ಸಂಘಟನೆ ಮುಂದಾಗಿದೆ. ಲೋಕಸಭಾ ಯುದ್ಧಕ್ಕೆ ಬೂತ್ ಮಟ್ಟದಿಂದ ಕಾರ್ಯಕರ್ತರು ಅಣಿಯಾಗುತ್ತಿದ್ದಾರೆ. ದೇಶದಲ್ಲಿ 400 ಕ್ಷೇತ್ರ ಗೆಲ್ಲುವ ನಿರೀಕ್ಷೆ ಇದೆ. ದೇಶದಲ್ಲಿ ಬಿಜೆಪಿ (BJP) ಪರ ವಾತಾವರಣ ಇದೆ. ಶಿವಮೊಗ್ಗ ಕ್ಷೇತ್ರದಲ್ಲಿ ಅಭಿವೃದ್ಧಿ ನೋಡಿ ನನ್ನನ್ನು ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಶಾಮನೂರು ಶಿವಶಂಕರಪ್ಪ ಅತಿಥಿಗೃಹವನ್ನು ಉದ್ಘಾಟಿಸಲಿದ್ದಾರೆ ಅಮಿತ್ ಶಾ
- Advertisement -
- Advertisement -
ಇನ್ನು ಎಲ್.ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿದ್ದಾರೆ. ಇದು ರಾಜಕೀಯ ಮುತ್ಸದ್ದಿಗೆ ಸಿಕ್ಕ ಗೌರವ. ಸಿದ್ಧಾಂತಕ್ಕೆ ಬದ್ಧರಾಗಿ ಹೋರಾಟ ಮಾಡಿದ ನಾಯಕ ಎಲ್.ಕೆ ಅಡ್ವಾಣಿಯವರ ದೊಡ್ಡ ತಪಸ್ಸಿನಿಂದ ರಾಮಮಂದಿರ ನಿರ್ಮಾಣವಾಗಿದೆ. ರಾಮಮಂದಿರ ನಿರ್ಮಾಣ ಮಾಡಲು ದೊಡ್ಡ ಶಕ್ತಿಯಾಗಿ ಅಡ್ವಾಣಿಯವರು ನಿಂತಿದ್ದರು. ಹಿಂದೂಗಳ ಭಾವನೆಗೆ ಶಕ್ತಿ ಸಿಕ್ಕಿದ್ದು ಅಡ್ವಾಣಿಯವರ ಅವಧಿಯಲ್ಲಿ. ಭಾರತ ರತ್ನ ಅಡ್ವಾಣಿಯವರಿಗೆ ಸಿಕ್ಕಿರುವುದು ಹೆಮ್ಮೆಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: 1 ಕಿ.ಮಿಗೆ 1.59 ಲಕ್ಷ, ದಿನಕ್ಕೆ 50 ಲಕ್ಷ – ಭಾರತ್ ಜೋಡೋ ಯಾತ್ರೆಗೆ ಬರೋಬ್ಬರಿ 71 ಕೋಟಿ ಖರ್ಚು