ಕಲಬುರಗಿ: ಗುಜರಾತ್ ಚುನಾವಣೆ ನಂತರ ಕಾಂಗ್ರೆಸ್ ನಾಯಕರು ಮೃದು ಹಿಂದುತ್ವ ಅನುಸರಿಸ್ತಿದ್ದಾರೆ ಎನ್ನಲಾಗಿತ್ತು. ಆದ್ರೆ ಹಿಂದುತ್ವ ವಿಷಯದಲ್ಲಿ ರಾಜ್ಯ ಸರ್ಕಾರ ಯೂಟರ್ನ್ ಹೊಡೆದಿದೆ.
ಪ್ರತಿವರ್ಷದಂತೆ ಈ ವರ್ಷ ಸಹ ಕಲಬುರಗಿಯ ಜೇವರ್ಗಿ ಪಟ್ಟಣದಲ್ಲಿ ಮಾರ್ಚ್ 27ರಂದು ವಿಶ್ವ ಹಿಂದು ಪರಿಷತ್ ಸಮಾವೇಶ ನಡೆಸಲು ನಿರ್ಧರಿಸಿದೆ. ಆದ್ರೆ ಜಿಲ್ಲಾಡಳಿತ ಮಾತ್ರ ಸಮಾವೇಶಕ್ಕೆ ಅನುಮತಿ ನೀಡಲು ನಿರಾಕರಿಸಿದೆ ಎಂಬುದಾಗಿ ತಿಳಿದುಬಂದಿದೆ.
Advertisement
Advertisement
ಕಾರ್ಯಕ್ರಮಕ್ಕೆ ಹಿಂದೂ ಫೈರ್ ಬ್ರಾಂಡ್ ಎಂದೇ ಪ್ರಸಿದ್ಧರಾಗಿರುವ ಸಾಧ್ವಿ ಸರಸ್ವತಿ ಆಗಮಿಸುತ್ತಿದ್ದು, ಅವರ ಭಾಷಣದಿಂದ ಕಾಂಗ್ರೆಸ್‍ಗೆ ಹೊಡೆತ ಬೀಳುತ್ತೆ ಅನ್ನೋ ಭೀತಿಯಿಂದ ಕಾರ್ಯಕ್ರಮಕ್ಕೆ ಅನುಮತಿ ನೀಡ್ತಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ.
Advertisement
ಇತ್ತ ಸರ್ಕಾರ ಅನುಮತಿ ಕೊಡಲಿ ಕೊಡದೇ ಇರಲಿ. ನಾವು ನಿಗದಿತ ದಿನಾಂಕದಂದು ಸಮಾವೇಶ ನಡೆಸಿಯೇ ತೀರುತ್ತೇವೆ ಅಂತ ವಿಹೆಚ್‍ಪಿ ಮತ್ತು ಭಜರಂಗದಳ ಮುಖಂಡರು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.