ಸಂಬಂಧಿ ಸಾವಿನಿಂದ ಮನನೊಂದು ಚಿತೆಗೆ ಹಾರಿ ಪ್ರಾಣ ಕಳ್ಕೊಂಡ

Public TV
1 Min Read
Funeral

ಭೋಪಾಲ್: ತನ್ನ ಸೋದರ ಸಂಬಂಧಿಯ ಸಾವಿನಿಂದ ಮನನೊಂದ ವ್ಯಕ್ತಿಯೋರ್ವ ಉರಿಯುತ್ತಿರುವ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಶುಕ್ರವಾರ ಸಾಗರ ಜಿಲ್ಲೆಯ ಮಜ್ಗವಾನ್ ಗ್ರಾಮದಲ್ಲಿ ಜ್ಯೋತಿ ದಾಗಾ ಎಂಬ ಮಹಿಳೆ ಬಾವಿಗೆ ಜಾರಿ ಸಾವನ್ನಪ್ಪಿದ್ದಾರೆ. ಆಕೆಯ ಅಂತ್ಯಕ್ರಿಯೆಯನ್ನು ಶನಿವಾರ ನೆರವೇರಿಸಲಾಯಿತು. ಚಿತೆಗೆ ಬೆಂಕಿ ಹಚ್ಚಿದ ನಂತರ ಸಂಬಂಧಿಕರು ತಮ್ಮ, ತಮ್ಮ ಮನೆಗಳಿಗೆ ತೆರಳಿದರು. ಸ್ವಲ್ಪ ಸಮಯದ ನಂತರ ಸ್ಮಶಾನಕ್ಕೆ ಸೋದರಸಂಬಂಧಿ ಕರಣ್(21) ಆಗಮಿಸಿದರು. ಇದನ್ನು ಕಂಡ ಕೂಡಲೇ ಗ್ರಾಮಸ್ಥರು ಆತನ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಕರಣ್ ಚಿತೆಗೆ ಹಾರಿ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: UP ಸಿಎಂ ಅಲಹಾಬಾದ್ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ: ಓವೈಸಿ ಕಿಡಿ

FotoJet 67

ಭಾನುವಾರ ಬೆಳಗ್ಗೆ ಕರಣ್ ಅಂತ್ಯ ಸಂಸ್ಕಾರವನ್ನು ಜ್ಯೋತಿ ಚಿತಾಗಾರದ ಬಳಿ ನೆರವೇರಿಸಲಾಯಿತು. ಇದೀಗ ಪೊಲೀಸರು ಈ ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಬಹೇರಿಯಾ ಪೊಲೀಸ್ ಠಾಣೆಯ ಇನ್‍ಚಾರ್ಜ್ ದಿವ್ಯಾ ಪ್ರಕಾಶ್ ತ್ರಿಪಾಠಿ ತಿಳಿದ್ದಾರೆ. ಇದನ್ನೂ ಓದಿ:  ಡ್ರಗ್ಸ್ ಕೇಸ್: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ, ನಟ ಸಿದ್ಧಾಂತ್ ಕಪೂರ್ ಬಂಧನ

Share This Article
Leave a Comment

Leave a Reply

Your email address will not be published. Required fields are marked *