ನವದೆಹಲಿ: ಸುಪ್ರೀಂಕೋರ್ಟ್ ನಲ್ಲಿ ಅನರ್ಹರ ಕೇಸ್ ವಿಚಾರಣೆ ದೀರ್ಘ ವಾದದ ಬಳಿಕ ನಾಳೆಗೆ ಮುಂದೂಡಿಕೆಯಾಗಿದೆ.
ಮೊದಲಿಗೆ ಕರ್ನಾಟಕ ಹೈಕೋರ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಲ್ಲಿಸಿರುವ ಅರ್ಜಿಗೆ ತಡೆ ನೀಡಿದ ನ್ಯಾಯಪೀಠ, ಅನರ್ಹತೆಯು ಉಪಚುನಾವಣೆಗಾ? ಅಥವಾ ವಿಧಾನಸಭೆ ಅವಧಿ ಮುಗಿಯುವವರೆಗಾ? ಅನ್ನೋದು ಪರಿಶೀಲಿಸಬೇಕಿದೆ ಅಂದರು. ಅನರ್ಹ ಶಾಸಕರ ಪರ ಮುಕುಲ್ ರೋಹ್ಟಗಿ ಮತ್ತು ಕಾಂಗ್ರೆಸ್ ಪರ ಕಪಿಲ್ ಸಿಬಲ್, ರಾಜೀವ್ ಧವನ್ ಅವರ ವಾದ-ಪ್ರತಿವಾದವನ್ನು ಕೋರ್ಟ್ ಇವತ್ತು ಆಲಿಸಿದ್ದು, ನಾಳೆ ಅಂದ್ರೆ ಗುರುವಾರ ಕಾಂಗ್ರೆಸ್ ಮತ್ತು ಚುನಾವಣಾ ಆಯೋಗದ ವಾದ ಮಂಡನೆಗೆ ಅವಕಾಶ ನೀಡಿದೆ.
Advertisement
Advertisement
ಅನರ್ಹರ ಪರ ರೋಹ್ಟಗಿ ವಾದ ಏನು:
* ರಾಜೀನಾಮೆ ನೀಡಿದ್ದರೂ ಶಾಸಕರು ಹಾಜರಾಗುವ ದಿನಾಂಕವನ್ನು ಸ್ಪೀಕರ್ ಮುಂದೂಡುತ್ತಲೇ ಬಂದರು. ಇವರ ಉದ್ದೇಶ, ಹಿನ್ನೆಲೆ ಏನು?
* ಗನ್ ಪಾಯಿಂಟ್‍ನಲ್ಲಿ ರಾಜೀನಾಮೆ ಕೊಡಿಸಿದ್ರೆ ಅಂಗೀಕಾರ ಬೇಡ. ಶಾಸಕರು ಸ್ವಯಂ ಪ್ರೇರಿತವಾಗಿ ಸಂವಿಧಾನದ ಬದ್ಧವಾಗಿ ನೀಡಿದ್ದಾರೆ. ಆದರೂ ಅನರ್ಹ ಮಾಡಿರೋದು ಕಾನೂನು ಬಾಹಿರ.
* ರಾಜೀನಾಮೆ, ಅನರ್ಹತೆ ಕುರಿತು ಸ್ಪೀಕರ್ ತಮ್ಮ ವ್ಯಾಪ್ತಿಯನ್ನು ಮೀರಿದ್ದಾರೆ.
* ಉದ್ದೇಶಪೂರ್ವಕವಾಗಿ ಮತ್ತೊಮ್ಮೆ ರಾಜೀನಾಮೆ ನೀಡುವಂತೆ ಸ್ಪೀಕರ್ ಒತ್ತಾಯಿಸಿದ್ದಾರೆ. ಸುಪ್ರೀಂ ಆದೇಶದಂತೆ ಶಾಸಕರು ಪ್ರತ್ಯೇಕವಾಗಿ ಹಾಜರಾಗಿ ರಾಜೀನಾಮೆ ನೀಡಿದ್ದಾರೆ.
* ರಾಜೀನಾಮೆ ಸ್ವೀಕಾರ ಆಗಬೇಕಿತ್ತು. ಅನರ್ಹತೆ ಸರಿಯಲ್ಲ. ಅನರ್ಹಗೊಳಿಸಿದರೂ ಅದು ವಿಧಾನಸಭೆಯ ಅವಧಿ ಮುಗಿಯುವ ತನಕವಲ್ಲ.
Advertisement
Advertisement
ಕಾಂಗ್ರೆಸ್ ವಾದ:
* ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು
* ಕಾಂಗ್ರೆಸ್ ಪರ ವಕೀಲರಾದ ಕಪಿಲ್ ಸಿಬಲ್, ರಾಜೀವ್ ಧವನ್ ವಾದ ಒಪ್ಪದ ನ್ಯಾಯಪೀಠ.
* ಹೈಕೋರ್ಟ್‍ಗೆ ನೀವು ಹೋಗಿದ್ದೀರಾ..? ಅಂತ ಸಿಬಲ್‍ಗೆ ನ್ಯಾಯಪೀಠದ ಪ್ರಶ್ನೆ.
* ಇಲ್ಲ, ನಾವು ಮಾಡೆಲ್ ಆಫ್ ಕಂಡಕ್ಟ್ ಜಾರಿಯಾಗದ್ದನ್ನು ಪ್ರಶ್ನಿಸಿದ್ದೇವೆ ಎಂದ ಕಪಿಲ್ ಸಿಬಲ್.
* ಮೊದಲು ವಾದ ಮಂಡನೆಯಾಗಲಿ, ಆಮೇಲೆ ನೋಡೋಣ ಎಂದ ನ್ಯಾಯಪೀಠ.