ಮಂಡ್ಯ: ಇಂದು ಸುಪ್ರೀಂ ಕೋರ್ಟಿನಲ್ಲಿ ಅನರ್ಹ ಶಾಸಕರ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಜೆಡಿಎಸ್‍ನ ಅನರ್ಹ ಶಾಸಕ ನಾರಾಯಣಗೌಡ ಪರವಾದ ತೀರ್ಪಿಗಾಗಿ ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವರಿಗೆ ಅಭಿಷೇಕ, ಹೂವಿನ ಅಲಂಕಾರ ಮಾಡಿ ಪಾರ್ಥಿಸಿದ್ದಾರೆ.
ಕೆ.ಆರ್ ಪೇಟೆ ತಾಲೂಕಿನಾದ್ಯಂತ ಇರುವ ದೇವಾಲಯಗಳಲ್ಲಿ ನಾರಾಯಣಗೌಡ ಬೆಂಬಲಿಗರು, ಅಭಿಮಾನಿಗಳು ಪೂಜೆ ಸಲ್ಲಿಸುತ್ತಿದ್ದಾರೆ. ತಾಲೂಕಿನ ಪ್ರತಿ ಹೋಬಳಿಗಳಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. ದೇವರಿಗೆ ಅಭಿಷೇಕ, ಹೂವಿನ ಅಲಂಕಾರ ಮಾಡಿಸಿ ನಾರಾಯಣಗೌಡರ ಪರ ಸುಪ್ರೀಂ ಕೋರ್ಟ್ ತೀರ್ಪು ಬರುವಂತೆ ಪ್ರಾರ್ಥಿಸುತ್ತಿದ್ದಾರೆ. ಇದನ್ನೂ ಓದಿ:ದೋಸ್ತಿ ಸರ್ಕಾರ ಪತನಕ್ಕೆ ಕಾರಣರಾಗಿ ಅನರ್ಹರಾಗಿರೋ ಶಾಸಕರು ಸುಪ್ರೀಂನಲ್ಲಿ ಮಂಡಿಸಿದ್ದ ವಾದಗಳೇನು?
Advertisement
Advertisement
ಅಷ್ಟೇ ಅಲ್ಲದೆ ಅನರ್ಹ ಶಾಸಕರ ಪರ ತೀರ್ಪು ಬಂದರೆ ಸಂಭ್ರಮಾಚರಣೆಗೆ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಪಟಾಕಿ ಸಿಡಿಸಿ, ಸಿಹಿ ಹಂಚಲು ಬೆಂಬಲಿಗರು ತಯಾರಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಸುಪ್ರೀಂ ಕೋರ್ಟಿನಿಂದ ಸಕಾರಾತ್ಮಕ ತೀರ್ಪು ಬಂದರೆ ನಾರಾಯಣಗೌಡ ಅವರು ಇಂದಿನಿಂದಲೇ ಉಪಚುನಾವಣೆಯ ರಣಾಂಗಣಕ್ಕೆ ಧುಮುಕಲಿದ್ದಾರೆ. ರಾಜೀನಾಮೆ ಬಳಿಕ ಕ್ಷೇತ್ರಾದ್ಯಂತ ಸಂಚರಿಸಿರುವ ನಾರಾಯಣಗೌಡ, ಮಗಳ ಮದುವೆ ಊಟ ನೆಪದಲ್ಲಿ ಪ್ರತಿ ಹೋಬಳಿಯ ಜನಕ್ಕೂ ಬಾಡೂಟ ಹಾಕಿಸಿದ್ದರು. ರಾಜೀನಾಮೆ ನೀಡಿದ್ದು ಕ್ಷೇತ್ರದ ಅಭಿವೃದ್ಧಿಗಾಗಿ, ಮತ್ತೊಮ್ಮೆ ಅವಕಾಶ ನೀಡಿ ಎಂದು ಒಂದು ಸುತ್ತಿನ ಪ್ರಚಾರ ಕೂಡ ಮಾಡಿದ್ದರು. ಇದನ್ನೂ ಓದಿ:ಸುಪ್ರೀಂಕೋರ್ಟಿನಿಂದ ಇಂದು ಜಡ್ಜ್‌ಮೆಂಟ್ – ಅಗ್ನಿ ಪರೀಕ್ಷೆಯಲ್ಲಿ ಪಾಸ್ ಆಗ್ತಾರಾ ರೆಬೆಲ್ಸ್?
Advertisement
Advertisement
ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂ ಕೋರ್ಟಿನಿಂದ ತೀರ್ಪು ಹೊರಬೀಳಲಿದ್ದು, ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕರಾದ ರಮೇಶ್ ಜಾರಕಿಹೋಳಿ, ಮುನಿರತ್ನ, ಎಸ್.ಟಿ ಸೋಮಶೇಖರ್, ಬಿಸಿ ಪಾಟೀಲ್, ಬೈರತಿ ಬಸವರಾಜ್, ಹೆಚ್. ವಿಶ್ವ ನಾಥ್, ರೋಷನ್ ಬೇಗ್, ಆರ್ ಶಂಕರ್ ಸೇರಿ ಇನ್ನು ಹಲವರು ದೆಹಲಿ ತಲುಪಿದ್ದು ಇಂದಿನ ತೀರ್ಪು ಬಗ್ಗೆ ವಕೀಲರ ಜೊತೆ ಚರ್ಚೆ ಮಾಡುತ್ತಿದ್ದಾರೆ. ಇದನ್ನೂ ಓದಿ:ಅನರ್ಹರ ತೀರ್ಪು: ಮಧ್ಯಾಹ್ನ 3 ಗಂಟೆವರೆಗೆ ಸಿಎಂ ಎಲ್ಲಾ ಪ್ರೋಗ್ರಾಂ ಕ್ಯಾನ್ಸಲ್
ಒಟ್ಟಿನಲ್ಲಿ ತಿಂಗಳುಗಳ ಕಾನೂನು ಹೋರಾಟಕ್ಕೆ ಅಂತಿಮ ದಿನ ಬಂದಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಅನರ್ಹ ಶಾಸಕರ ಭವಿಷ್ಯ ನಿರ್ಧಾರ ಆಗಲಿದೆ.