ರಾಯಚೂರು: ಮಂತ್ರಾಲಯ ಗುರು ರಾಘವೇಂದ್ರಸ್ವಾಮಿ ಮಠ ಹಾಗೂ ಉತ್ತರಾಧಿ ಮಠಗಳ ನಡುವೆ ಹಲವು ದಶಕಗಳಿಂದ ಇದ್ದ ನವಬೃಂದಾವನಗಡ್ಡೆ ವಿವಾದ ಕೊನೆಗೂ ಇತ್ಯರ್ಥವಾಗಿದೆ.
ಉಭಯ ಮಠಗಳ ಶ್ರೀಗಳ ಐತಿಹಾಸಿಕ ಸೌಹಾರ್ದ ಸಮಾಗಮದ ಮೂಲಕ ಸಕಾರಾತ್ಮಕ ಹಾಗೂ ಸೌಹಾರ್ದಪೂರ್ಣವಾಗಿ ವಿವಾದ ಅಂತ್ಯ ಕಂಡಿದೆ. ಪರಸ್ಪರ ಆಹ್ವಾನಗಳ ಮೇರೆಗೆ ನಿನ್ನೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಉತ್ತರಾಧಿಮಠ ಹಾಗೂ ಜಯನಗರ 5ನೇ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿಗಳ ಮಠಗಳಲ್ಲಿ ಪ್ರತ್ಯೇಕವಾಗಿ ನಡೆದ ಸೌಹಾರ್ದ ಸಮಾಗಮ ಕಾರ್ಯಕ್ರಮ ಯಶಸ್ವಿಯಾದವು. ಇದನ್ನೂ ಓದಿ: ಸರ್ಕಾರದ ವೆಬ್‌ಸೈಟ್‌ನಿಂದ EVM ವಿಶ್ವಾರ್ಹತೆ ಸಮೀಕ್ಷೆ ಡಿಲೀಟ್; ಬಿಜೆಪಿ ಟೀಕೆ
ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ಹಾಗೂ ಉತ್ತರಾಧಿ ಮಠದ ಪೀಠಾಧಿಪತಿ ಸತ್ಯಾತ್ಮ ತೀರ್ಥ ಶ್ರೀಗಳ ನಡುವೆ ಸೌಹಾರ್ದ ಸಮಾಗಮ ಯಶಸ್ವಿಯಾಗಿ ನಡೆಯಿತು. ಶ್ರೀಗಳ ಪರಸ್ಪರ ಭೇಟಿಯಿಂದ ಉಭಯ ಮಠದ ನಡುವಿನ ವಿವಾದ ಅಂತ್ಯವಾಗಿದ್ದು, ಮಾಧ್ವ ಸಮುದಾಯದಲ್ಲಿ ಏಕತೆಗೆ ಬಲವಾದ ಪುಷ್ಟಿಯನ್ನು ನೀಡಿದೆ.

