ಬೆಂಗಳೂರು: ಸರ್ಕಾರ ಕೇಸ್ ವಾಪಸ್ ಪಡೆದ ನಂತರ ಸೇಫ್ ಎಂದುಕೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ್‌ಗೆ (DCM DK Shivakumar) ಸಿಬಿಐ (CBI) ಶಾಕ್ ನೀಡಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಪ್ರಕರಣಕ್ಕೆ (Disproportionate Assets Case )ಸಂಬಂಧಿಸಿದಂತೆ ಡಿಕೆಶಿ ಕುಟುಂಬಕ್ಕೆ ಹಾಗೂ ವ್ಯಾವಹಾರಿಕ ಆಪ್ತರಿಗೆ ಸಿಬಿಐ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಮುಂದೆ ನನಗೂ ವೈಯಕ್ತಿಕವಾಗಿ ನೋಟಿಸ್ ಕೊಡ್ತಾರೆ ಎನ್ನುವ ಮೂಲಕ ಡಿಕೆಶಿ ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ. ಇದು ರಾಜಕೀಯವಾಗಿ ನನ್ನನ್ನು ಮುಗಿಸುವ ಷಡ್ಯಂತ್ರ ಎನ್ನುವ ಮೂಲಕ ಪೊಲಿಟಿಕಲ್ ಸೇಫ್ ಗೇಮ್ ಆಡುತ್ತಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿಗಳಿಕೆ ಕೇಸ್ – ಈಗ ಡಿಕೆಶಿ ವಿರುದ್ಧ ಲೋಕಾಯುಕ್ತದಿಂದಲೂ ತನಿಖೆ
Advertisement
Advertisement
ಸರ್ಕಾರ ಕೇಸಿನ ಶಿಫಾರಸ್ಸನ್ನು ವಾಪಸ್ ಪಡೆದ ನಂತರವೂ ಸಿಬಿಐ ತಮ್ಮ ವಿರುದ್ಧ ಬಿದ್ದಿಗೆ ಬಿದ್ದಿದೆ. ಇದರ ಹಿಂದೆ ರಾಜಕೀಯ ಎದುರಾಳಿಗಳಾದ ದೊಡ್ಡ ದೊಡ್ಡವರ ಕೈವಾಡವಿದೆ ಎನ್ನುವುದು ಡಿಕೆಶಿ ಆರೋಪ.
Advertisement
ಏನಿದು ಪ್ರಕರಣ?
2017 ರಲ್ಲಿ ಡಿ.ಕೆ.ಶಿವಕುಮಾರ್ ವಾಸ್ತವ್ಯವಿದ್ದ ಈಗಲ್‌ಟನ್ ರೆಸಾರ್ಟ್ ಮತ್ತು ಅವರ ಸಹಚರರ ಮೇಲೆ ದಾಳಿ ಮೇಲೆ ದಾಳಿ ಮಾಡಿದ್ದ ಆದಾಯ ತೆರಿಗೆ ಇಲಾಖೆ (Income Tax Department) ಸುಮಾರು 8.59 ಕೋಟಿ ಹಣ ವಶಪಡಿಸಿಕೊಂಡಿತ್ತು. ಲೆಕ್ಕಕ್ಕೆ ಸಿಗದ ಈ ಹಣವನ್ನು ಡಿ.ಕೆ.ಶಿವಕುಮಾರ್ ತಮ್ಮ ಸಹಚರರ ಬಳಿ ಇರಿಸಿದ್ದರು ಎಂದು ಆರೋಪಿಸಿತ್ತು. ಇದೇ ಪ್ರಕರಣದಲ್ಲಿ ಇಡಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿತ್ತು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದ ಇಡಿ ಪಿಸಿ ಆ್ಯಕ್ಟ್ ನಡಿ ತನಿಖೆ ನಡೆಸಲು ಸಿಬಿಐಗೆ ನೀಡಲು ಶಿಫಾರಸು ಮಾಡಿತ್ತು. ಶಿಫಾರಸು ಆಧರಿಸಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ನೇತೃತ್ವದ ಸರ್ಕಾರ ಸಿಬಿಐ ತನಿಖೆಗೆ ನೀಡಿತ್ತು.
Advertisement