ಧರ್ಮಶಾಲಾ: ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ರೋಚಕ ವಿಶ್ವಕಪ್ (World Cup 2023) ಪಂದ್ಯದಲ್ಲಿ ಡಿಸ್ನಿಪ್ಲಸ್ ಹಾಟ್‌ಸ್ಟಾರ್ (Disney+ Hotstar) ಏಕಕಾಲಕ್ಕೆ 4.3 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು, ಹಿಂದಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ.
Déjà woohoo! Another record-breaking performance by all of us! ????????
Time for a hat-trick?????#INDvNZ pic.twitter.com/IBm2V39dIl
— Disney+ Hotstar (@DisneyPlusHS) October 22, 2023
Advertisement
ಸೂಪರ್ ಸಂಡೇನಲ್ಲಿ ಧರ್ಮಶಾಲಾದ HPCA ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಕಿವೀಸ್ ಪಂದ್ಯವು ಕೊನೇ ಕ್ಷಣದವರೆಗೂ ರೋಚತೆಯಿಂದ ಕೂಡಿತ್ತು. ಡೆತ್ ಓವರ್ ಶುರುವಾಗುತ್ತಿದ್ದಂತೆ, ಕೊಹ್ಲಿ (Virat Kohli) ವಿಶ್ವದಾಖಲೆಯ ಶತಕದ ವೈಭವ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಆನ್‌ಲೈನ್ ವೇದಿಕೆಯಲ್ಲಿ ದಾಂಗುಡಿಯಿಡುತ್ತಿದ್ದರು, ಕೊಹ್ಲಿ ಎದುರಿಸುವ ಪ್ರತಿ ಎಸೆತವನ್ನು ಸಿಕ್ಸರ್ ಸಿಡಿಸುತ್ತಾರೋ, ಬೌಂಡರಿ ಸಿಡಿಸುತ್ತಾರೋ ಎಂದು ಅಭಿಮಾನಿಗಳು ಉಸಿರು ಬಿಗಿಹಿಡಿದು ನೋಡುತ್ತಿದ್ದರು, ಪ್ರತಿ ಎಸೆತ ಚಚ್ಚಿದಾಗಲೂ ಕೊಹ್ಲಿ ಕೊಹ್ಲಿ ಎಂದು ಕೂಗುತ್ತಾ ಹುರಿದುಂಬಿಸುತ್ತಿದ್ದರು.
Advertisement
Advertisement
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದ ಭಾರತ ತಂಡ, ಬ್ಯಾಟಿಂಗ್ ಮಾಡುವ ಅವಕಾಶವನ್ನು ಎದುರಾಳಿ ನ್ಯೂಜಿಲೆಂಡ್ ತಂಡಕ್ಕೆ ಬಿಟ್ಟುಕೊಟ್ಟಿತ್ತು. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಬೆಂಕಿ ಬೌಲಿಂಗ್ ದಾಳಿಯಿಂದ 273 ರನ್‌ಗಳಿಗೆ ಕಿವೀಸ್ ತಂಡವನ್ನು ಕಟ್ಟಿಹಾಕಿದ್ದ ಭಾರತ ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿತು. ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್ ಸ್ಫೋಟಕ ಬ್ಯಾಟಿಂಗ್‌ನಿಂದ ಉತ್ತಮ ಆರಂಭ ಪಡೆದರೂ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಶ್ರೇಯಸ್ ಅಯ್ಯರ್ 33 ರನ್, ಕೆ.ಎಲ್ ರಾಹುಲ್ 27 ರನ್ ಗಳಿಸಿ ಔಟಾಗುತ್ತಿದ್ದಂತೆ ಪಂದ್ಯ ಗೆಲ್ಲಿಸುವ ಜವಾಬ್ದಾರಿ ಕೊಹ್ಲಿ ಹೆಗಲ ಮೇಲೆ ಬಿದ್ದಿತ್ತು. ಇದಕ್ಕೆ ರವೀಂದ್ರ ಜಡೇಜಾ ಕೂಡ ಸಾಥ್ ನೀಡಿದರು.
Advertisement
ಕೊಹ್ಲಿ 42.5ನೇ ಓವ್‌ನಲ್ಲಿ ಬ್ಯಾಟಿಂಗ್ ಮಾಡುವಾಗ 3.6 ಕೋಟಿಯಿದ್ದ ವೀಕ್ಷಕರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಾ ಸಾಗಿತು. 44ನೇ ಓವರ್‌ನಲ್ಲಿ 3.7 ಕೋಟಿ, 46.3ನೇ ಓವರ್‌ನಲ್ಲಿ 4 ಕೋಟಿ, 47ನೇ ಓವರ್‌ನಲ್ಲಿ 4.1 ಕೋಟಿ, ಅದೇ ಕ್ಷಣ 4.2 ಕೋಟಿ ಇದ್ದ ವೀಕ್ಷಕರ ಸಂಖ್ಯೆ 4.3 ಕೋಟಿಗೆ ಏರಿಕೆಯಾಗಿತ್ತು. ಆದ್ರೆ ಕೊಹ್ಲಿ ಶತಕವನ್ನ ಕಣ್ತುಂಬಿಕೊಳ್ಳಲು ಬಂದ ಅಭಿಮಾನಿಗಳಿಗೆ ನಿರಾಸೆಯಾಯಿತು. ಇದು ಈ ಹಿಂದಿನ ಎಲ್ಲ ದಾಖಲೆಗಳನ್ನ ಉಡೀಸ್ ಮಾಡಿದೆ. ಇದನ್ನೂ ಓದಿ: ಇಶಾನ್‌ಗೆ ಜೇನುಹುಳು ಕಂಟಕ, ಸೂರ್ಯನಿಗೆ ಮೊಣಕೈ ಗಾಯ – ಪಂದ್ಯ ಆರಂಭಕ್ಕೂ ಮುನ್ನವೇ ಭಾರತಕ್ಕೆ ತ್ರಿಬಲ್ ಶಾಕ್
ಭಾರತ ಮತ್ತು ಪಾಕ್ ಪಂದ್ಯದ ವೇಳೆ ರೋಹಿತ್ ಶರ್ಮಾ (Rohit Sharma) ಬ್ಯಾಟಿಂಗ್ ನೋಡಲು 3.5 ಕೋಟಿ ಜನರು ವೀಕ್ಷಣೆ ಮಾಡಿದ್ದು, ಈವರೆಗಿನ ದಾಖಲೆಯಾಗಿತ್ತು. ಈ ಹಿಂದೇ ಇದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ 2023ರ ಐಪಿಎಲ್ ಫೈನಲ್ ಪಂದ್ಯವನ್ನು ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 3.2 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು ಈ ವರೆಗಿನ ದಾಖಲೆಯಾಗಿತ್ತು. ಇದನ್ನೂ ಓದಿ: ಶಮಿ ಹೊಸ ದಾಖಲೆ – ODI ವಿಶ್ವಕಪ್ ಇತಿಹಾಸದಲ್ಲೇ 2 ಬಾರಿ ಐದು ವಿಕೆಟ್ ಕಬಳಿಸಿದ ಮೊದಲ ಭಾರತೀಯ
2023ರ ಐಪಿಎಲ್ ಆವೃತ್ತಿಯಲ್ಲಿ ಜಿಯೋಸಿನಿಮಾ ಸತತ 4ನೇ ಬಾರಿಗೆ ತನ್ನದೇ ವೀಕ್ಷಕರ ದಾಖಲೆ ಮುರಿದಿತ್ತು. ಜೊತೆಗೆ 2019ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ ನಿರ್ಮಿಸಲ್ಪಟ್ಟಿದ್ದ ವಿಶ್ವದಾಖಲೆಗಳೆಲ್ಲವನ್ನೂ ನುಚ್ಚುನೂರು ಮಾಡಿತ್ತು. 2013ರ ವಿಶ್ವಕಪ್ ಪಂದ್ಯವನ್ನು 2.53 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು. ಇದನ್ನೂ ಓದಿ: ಎಲ್ಲಿ ಹೋಯ್ತು ಬಾಬರ್‌ನ ಬೆಂಕಿ ಬ್ಯಾಟಿಂಗ್? – ಮತ್ತೆ ಗಂಭೀರ್ ಕೆಣಕಿದ ಕೊಹ್ಲಿ ಫ್ಯಾನ್ಸ್
ಏಪ್ರಿಲ್ 17ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಎಂ.ಎಸ್ ಧೋನಿ ಅವರ ಆಟ ವೀಕ್ಷಿಸಲು 2.4 ಕೋಟಿ ವೀಕ್ಷಕರು ಜಿಯೋಸಿನಿಮಾದಲ್ಲಿ ಒಟ್ಟಾಗಿ ಸೇರಿದ್ದು ಹಿಂದಿನ ದಾಖಲೆ ಎನಿಸಿತ್ತು. ಅದಕ್ಕೂ ಮುನ್ನ ಏಪ್ರಿಲ್ 12ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಗತವೈಭವ ನೆನಪಿಸುವಂಥ ಬ್ಯಾಟಿಂಗ್ ಪ್ರದರ್ಶಿಸಿದಾಗ ಗರಿಷ್ಠ 2.2 ಕೋಟಿ ವೀಕ್ಷಕರ ದಾಖಲೆ ಕಂಡಿತ್ತು.
ಭಾನುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನತ್ತಿದ್ದ ಭಾರತ ತಂಡ 30.3 ಓವರ್‌ಗಳಲ್ಲೇ 192 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು. ಇದನ್ನೂ ಓದಿ: ಪಾಕಿಸ್ತಾನ್ ಜಿಂದಾಬಾದ್ ಅನ್ನದೇ ಇನ್ನೇನು ಹೇಳ್ಬೇಕು? – ಪೊಲೀಸ್ ಅಧಿಕಾರಿ ಜೊತೆ ಪಾಕ್ ಅಭಿಮಾನಿ ವಾಗ್ವಾದ
Web Stories