ಮುಂಬೈ: ಬಾಲಿವುಡ್ ಹಾಟ್ ನಟಿ ದಿಶಾ ಪಠಾಣಿ ದೀಪಾವಳಿಗಾಗಿ ವಿಶೇಷ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್‍ನಲ್ಲಿ ದಿಶಾ ಲೆಹೆಂಗಾ ಮೇಲೆ ಒಳಉಡುಪನ್ನು ಧರಿಸಿದ್ದು, ಸದ್ಯ ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದೀಪಾವಳಿ ಹಬ್ಬಕ್ಕಾಗಿ ಗೋಲ್ಡನ್ ಲೆಹೆಂಗಾ ಧರಿಸಿ ಅದಕ್ಕೆ ಒಳಉಡುಪು ಹಾಕಿ ಕೈಯಲ್ಲಿ ದೀಪ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಹೋಟೆಲ್‍ನ ರೂಂವೊಂದರಲ್ಲಿ ದಿಶಾ ಫೆಸ್ಟಿವ್ ಲುಕ್‍ನಲ್ಲಿ ಈ ರೀತಿ ಫೋಟೋಶೂಟ್ ಮಾಡಿಸಿದ್ದಾರೆ. ಲೆಹೆಂಗಾಗೆ ದಿಶಾ ಹಣೆಗೆ ಬೈತಲೆ ಬೊಟ್ಟು ಹಾಕಿದ್ದಾರೆ.
Advertisement
Advertisement
ದಿಶಾ ಈ ಫೋಟೋ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ 19 ಗಂಟೆಯಲ್ಲಿ 16 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಸದ್ಯ ದಿಶಾ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಫೋಟೋ ನೋಡಿದ ಜನರು ದಿಶಾ ಲೆಹೆಂಗಾಗೆ ಬ್ಲೌಸ್ ಧರಿಸುವುದನ್ನು ಮರೆತಿದ್ದಾರೆ ಎಂದು ಕಮೆಂಟ್ ಮಾಡಿ ಕಾಲೆಳೆಯುತ್ತಿದ್ದಾರೆ.
Advertisement
ದಿಶಾ ಲೆಹೆಂಗಾ ಮೇಲೆ ಬ್ಲೌಸ್ ಧರಿಸುವ ಬದಲು ಒಳಉಡುಪು ಧರಿಸಲು ಕಾರಣವಿದೆ. ದಿಶಾ ಒಳಉಡುಪಿನ ಬ್ರ್ಯಾಂಡ್ ಕಂಪನಿಗೆ ಈ ರೀತಿಯ ಜಾಹೀರಾತು ನೀಡಿದ್ದಾರೆ. ದಿಶಾ ಈ ಬ್ರ್ಯಾಂಡ್ ಕಂಪನಿಯನ್ನು ಬಹಳ ಸಮಯದಿಂದ ಪ್ರಚಾರ ಮಾಡುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
View this post on Instagram