– ಕ್ಲಬ್ ಡ್ರೆಸ್‍ಕೋಡ್ ಬಗ್ಗೆ ವರದಿ ಮಂಡನೆ
ಬೆಂಗಳೂರು: ವಿಧಾನಸಭೆ ಅಧಿವೇಶನದ ಎರಡನೇ ದಿನವಾದ ಇವತ್ತು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ನಡೆಯಲಿದೆ. ಪ್ರತಿಪಕ್ಷ ಬಿಜೆಪಿ ವಂದನಾರ್ಪಣೆ ನಿರ್ಣಯದ ಚರ್ಚೆ ವೇಳೆ ಸರ್ಕಾರದ ವಿರುದ್ಧ ಅಸ್ತ್ರ ಪ್ರಯೋಗಿಸಲು ನಿರ್ಧರಿಸಿದೆ.
ಬರ ಪರಿಹಾರ ಅಸಮರ್ಪಕ ನಿರ್ವಹಣೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತಾ ಹಾಗೂ ಐಟಿ ದಾಳಿ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಸವಾರಿ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ.
Advertisement
ಈ ನಡುವೆ ಕಲಾಪದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಕ್ಲಬ್‍ಗಳ ಕಾರ್ಯಚಟುವಟಿಕೆಗಳು ಮತ್ತು ನಿಯಂತ್ರಣದ ಅಧ್ಯಯನದ ಸಮಿತಿ ವರದಿಯನ್ನ ಅಧ್ಯಕ್ಷ ಎನ್.ಎ.ಹ್ಯಾರಿಸ್ ಮಂಡಿಸಲಿದ್ದಾರೆ. ಕ್ಲಬ್‍ಗಳ ಡ್ರೆಸ್‍ಕೋಡ್‍ಗೆ ಕಡಿವಾಣ, ಅನಧಿಕೃತ ಬಾರ್ ಕೌಂಟರ್‍ಗಳ ಮೇಲೆ ಕಡಿವಾಣ ಸೇರಿದಂತೆ ಹಲವು ಪ್ರಮುಖ ಶಿಫಾರಸುಗಳನ್ನು ಮಾಡುವ ಸಾಧ್ಯತೆ ಇದೆ.
Advertisement