ನವದೆಹಲಿ: ಮೇಕೆದಾಟು ಮತ್ತು ಮಹದಾಯಿ ಯೋಜನೆ ಸಂಬಂಧ ಮುಂದಿನ ಕಾರ್ಯತಂತ್ರಗಳ ರೂಪಿಸುವ ಕುರಿತು ಇಂದು ಸರ್ವ ಪಕ್ಷ ಸಂಸದರ ನಡೆಸಲಾಯಿತು.
ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನವದೆಹಲಿಯ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರ ನಿವಾಸದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಅನಂತ ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ ಸೇರಿದಂತೆ ರಾಜ್ಯದ ಎಲ್ಲ ಸಂಸದರು ಭಾಗಿಯಾಗಿದ್ದರು.
Advertisement
ಇಂದು ನಡೆದ ರಾಜ್ಯದ ಸರ್ವ ಸಂಸದರ , ನೀರಾವರಿ ಸಚಿವರ , ಅಧಿಕಾರಿಗಳ ಸಭೆಯಲ್ಲಿ , ರಾಜ್ಯದಲ್ಲಿ ಜಾರಿಯಾಗಬೇಕಾದ ನೀರಾವರಿ ಯೋಜನೆಗಳ ವಿಷಯದಲ್ಲಿ ಪಕ್ಷಾತೀತವಾಗಿ ಒಂದಾಗಿ . ರಾಜ್ಯದ ಹಿತ ದೃಷ್ಟಿಯನ್ನು ಗಮನದಲ್ಲಿಟ್ಟುಕ್ಕೊಂಡು ಒಗ್ಗಟ್ಟಿನಿಂದ ಯೋಜನೆ ಜಾರಿಯಾಗುವತ್ತ ದೃಢ ಹೆಜ್ಜೆ ಇಡಲು ನಿರ್ಧರಿಸಲಾಯಿತು pic.twitter.com/xQIdSoF4Qz
— Sadananda Gowda (@DVSadanandGowda) December 20, 2018
Advertisement
ಮೇಕೆದಾಟು ಯೋಜನೆಗೆ ಸಂಬಂಧ ಕೇಂದ್ರ ಜಲ ಆಯೋಗ ವಿಸ್ತೃತ ವರದಿ ನೀಡಲು ಸೂಚಿಸಿದ್ದು ಇದನ್ನು ವಿರೋಧಿಸಿ ತಮಿಳುನಾಡು ಪ್ರತಿಭಟನೆ ನಡೆಸುತ್ತಿದ್ದು ಈ ಬಗ್ಗೆ ಮಹತ್ವ ಚರ್ಚೆ ನಡೆಸಲಾಗಿದೆ. ತಮಿಳುನಾಡು ಸಂಸದರ ಪ್ರತಿಭಟನೆ ವಿರೋಧವಾಗಿ ರಾಜ್ಯದ ಸಂಸದರು ಡಿಸೆಂಬರ್ 27 ರಂದು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
Advertisement
ಮೇಕೆದಾಟು ಸಂಬಂಧ ಕೇಂದ್ರ ಸಚಿವರು ಅಥವಾ ಪ್ರಧಾನಿಯನ್ನು ಭೇಟಿಯಾಗದಿರಲು ಸಭೆ ನಿರ್ಧರಿಸಿದೆ. ದೇವೇಗೌಡರ ಸಲಹೆಯಂತೆ ತಮಿಳುನಾಡು ವಿರುದ್ಧ ಪ್ರತಿಭಟನೆ ಹೊರತು ತಟಸ್ಥವಾಗಿರಲು ನಿರ್ಣಯವನ್ನು ಕೈಕೊಳ್ಳಲಾಗಿದೆ.
Advertisement
ಕರ್ನಾಟಕಕ್ಕೆ ಸಂಬಂದಿಸಿದ ಮೇಕೆದಾಟು , ಮಹದಾಯಿ ಮೊದಲಾದ ನೀರಾವರಿ ಯೋಜನೆಗಳ ಬಗ್ಗೆ ರಾಜ್ಯ ತೆಗೆದುಕ್ಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಚರ್ಚಿಸಲು ಇಂದು ದೆಹಲಿಯ ನಿವಾಸದಲ್ಲಿ ನಮ್ಮ ರಾಜ್ಯದ ಸಂಸದರ ಸಭೆ ಆಯೋಜಿಸಲಾಗಿದೆ ಕರ್ನಾಟಕದ ಜಲ ಸಂಪನ್ಮೂಲ ಸಚಿವರು , ಅಧಿಕಾರಿಗಳು , ಭಾಗವಹಿಸಲಿದ್ದಾರೆ
— Sadananda Gowda (@DVSadanandGowda) December 20, 2018
ಮೇಕೆದಾಟು ಯೋಜನೆ ಸಂಬಂಧ ಕೇಂದ್ರ ಸಚಿವರು ಅಥವಾ ಪ್ರಧಾನಿ ಭೇಟಿಯಾದಲ್ಲಿ ತಮಿಳುನಾಡು ಆಕ್ಷೇಪಕ್ಕೆ ಅನುವು ಮಾಡಿಕೊಟ್ಟಾಂತಗಾಲಿದ್ದು ಸಮಸ್ಯೆ ದೊಡ್ಡದಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೇಕೆದಾಟು ಸಂಬಂಧ ಕೇಂದ್ರದ ಮೇಲೆ ಒತ್ತಡ ಹೇರದಿರಲು ಚಿಂತಿಸಲಾಗಿದೆ.
ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಧಿಕರಣ ತೀರ್ಪು ನೀಡಿದ್ದು ಪರಿಶೀಲನಾ ಅರ್ಜಿ ಸಲ್ಲಿಸುವ ಕುರಿತು ಚರ್ಚಿಸಲಾಗಿದೆ. ತೀರ್ಪು ನೀಡಿ ನಾಲ್ಕು ತಿಂಗಳು ಕಳೆದರೂ ಇನ್ನು ನೋಟಿಫಿಕೇಷನ್ ಹೊರಡಿಸದ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಭೇಟಿಯಾಗಲು ನಿರ್ಧರಿಸಲಾಗಿದೆ.
Hon’ble MP’s of Karnataka (From Both the Houses) will be meeting at my Delhi residence tomorrow .The united steps to be taken by Our state for Mekedatu and Mahadayi Water project will be discussed .Hon’ble Former PM Sri @H_D_Devegowda Ji And Sri @DKShivakumar met me today pic.twitter.com/fPdzy2tK6U
— Sadananda Gowda (@DVSadanandGowda) December 19, 2018
ಸಭೆ ಬಳಿಕ ಡಿವಿ ಸದಾನಂದ ಗೌಡ ಅವರು, ಇಂದು ನಡೆದ ರಾಜ್ಯದ ಸರ್ವ ಸಂಸದರ, ನೀರಾವರಿ ಸಚಿವರ, ಅಧಿಕಾರಿಗಳ ಸಭೆಯಲ್ಲಿ ರಾಜ್ಯದಲ್ಲಿ ಜಾರಿಯಾಗಬೇಕಾದ ನೀರಾವರಿ ಯೋಜನೆಗಳ ವಿಷಯದಲ್ಲಿ ಪಕ್ಷಾತೀತವಾಗಿ ಒಂದಾಗಿ ರಾಜ್ಯದ ಹಿತ ದೃಷ್ಟಿಯನ್ನು ಗಮನದಲ್ಲಿಟ್ಟುಕ್ಕೊಂಡು ಒಗ್ಗಟ್ಟಿನಿಂದ ಯೋಜನೆ ಜಾರಿಯಾಗುವತ್ತ ದೃಢ ಹೆಜ್ಜೆ ಇಡಲು ನಿರ್ಧರಿಸಲಾಯಿತು ಎಂದು ಟ್ವೀಟ್ ಮಾಡಿದ್ದಾರೆ.
During today’s all party karnataka Members Of Parliament Meeting , It’s resolved that to protect the interests of state All MP’s will take a unified steps on Water projects of karnataka . MPs will hold Protest on 27 th December at Delhi against stalling Water projects by others pic.twitter.com/12iSjtZiJf
— Sadananda Gowda (@DVSadanandGowda) December 20, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv