ಬೆಂಗಳೂರು: ಈಶ್ವರಪ್ಪ ಅವರ ಜೊತೆ ಮಾತಾಡುತ್ತೇನೆ, ಅವರೂ ಸರಿ ಹೋಗುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S Yediyurappa) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಶ್ವರಪ್ಪ (K.S Eshwarappa) ಅವರ ಮಗ ಕಾಂತೇಶ್‍ಗೆ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರ ಮಾಡಿಕೊಂಡ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರ ಮಗನಿಗೆ ಎಂಎಲ್‍ಸಿ ಮಾಡುವ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ನಾನು ಮಾತನಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ವಿರುದ್ಧವೂ ಯಶಸ್ವಿಯಾಗಿಲ್ಲ, ಅವರಿಂದಲೂ ಟಿಕೆಟ್ ತಗೊಂಡು ಬರೋದಕ್ಕೆ ಆಗಿಲ್ಲ: ಕರಂದ್ಲಾಜೆ
ಯದುವೀರ್ ಸ್ಪರ್ಧೆ ವಿಚಾರವಾಗಿ, ಅವರು ಸ್ಪರ್ಧೆಯಿಂದ ಸುತ್ತಮುತ್ತಲ ಕ್ಷೇತ್ರಗಳಲ್ಲಿ ಅನುಕೂಲವಾಗಲಿದೆ. ಅವರು ಕೂಡಾ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಓಡಾಡಲು ಒಪ್ಪಿಕೊಂಡಿದ್ದಾರೆ. ಅವರ ಸ್ಪರ್ಧೆಯಿಂದ ದೊಡ್ಡ ಬಲ ಬಂದಿದೆ ಎಂದಿದ್ದಾರೆ.
ಇದೇ ವೇಳೆ ಪ್ರತಾಪಸಿಂಹಗೆ ಟಿಕೆಟ್ ಕೈತಪ್ಪಿದ ವಿಚಾರವಾಗಿ, ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಪತ್ರಕರ್ತರಲ್ಲಿ, ಯಾವುದೇ ಪ್ರಶ್ನೆ ಕೇಳಬೇಡಿ, ಎಲ್ಲರೂ ಸಮಾಧಾನಗೊಂಡಿದ್ದಾರೆ. ಎಲ್ಲರೂ ಬೆಂಬಲ ನೀಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು