ಬೆಂಗಳೂರು: ಸಾರಿಗೆ ನಿಯಮ (Traffic Rules) ಉಲ್ಲಂಘನೆ ದಂಡ ಪಾವತಿಸಲು ನೀಡಿದ್ದ ಶೇ.50ರಷ್ಟು ರಿಯಾಯಿತಿ ಅವಧಿ ಮತ್ತೆ ವಿಸ್ತರಣೆ ಆಗುತ್ತಾ..? ರಾಜ್ಯ ಸರ್ಕಾರ ರಿಯಾಯಿತಿ ನೀಡಿದ ಬೆನ್ನಲ್ಲೇ ಸಾರಿಗೆ ನಿಯಮ ಉಲ್ಲಂಘಿಸಿದ್ದ ವಾಹನ ಸವಾರರು ದಂಡ ಪಾವತಿಸಿ ಪ್ರಕರಣಗಳಿಂದ ಮುಕ್ತರಾಗ್ತಿದ್ದಾರೆ.
ಕೋಟಿ ಕೋಟಿ ದಂಡ ಸಂಗ್ರಹ ಆಗ್ತಿದೆ. ಮೂರೇ ಮೂರು ದಿನದಲ್ಲಿ 30 ಕೋಟಿ ದಂಡ ವಸೂಲಿ ಆಗಿದೆ. ಇದೇ ಶನಿವಾರ ಅಂದ್ರೆ ಫೆಬ್ರವರಿ 11ರ ತನಕ ವಿನಾಯಿತಿ ಅವಕಾಶ ಇದ್ದು, ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಸರ್ಕಾರ ನೀಡಿರೋ ಕಾಲಾವಧಿಯಲ್ಲಿ ದಂಡ ಪಾವತಿ ಮಾಡೋದು ಕಷ್ಟ. ಹೀಗಾಗಿ ಮಾರ್ಚ್ 11ರವರೆಗೆ ಅವಧಿ ವಿಸ್ತರಿಸುವಂತೆ ಸವಾರರು ಟ್ವೀಟ್ (Tweet) ಮೂಲಕ ಮನವಿ ಮಾಡಿಕೊಳ್ತಿದ್ದಾರೆ. ಇದನ್ನೂ ಓದಿ: ಎರಡು ದಿನದಲ್ಲಿ 14 ಕೋಟಿ ಟ್ರಾಫಿಕ್ ದಂಡ ಸಂಗ್ರಹ
ಸದ್ಯ 1 ಕೋಟಿ 80 ಲಕ್ಷ ನಿಯಮ ಉಲ್ಲಂಘನೆ ಪ್ರಕರಣಗಳಿವೆ. ಅದರಲ್ಲಿ 3 ದಿನದಲ್ಲಿ ಕೇವಲ 8 ಲಕ್ಷ ಪ್ರಕರಣಗಳು ವಿಲೇವಾರಿಯಾಗಿದೆ. ದಂಡ ಪಾವತಿ ವೇಳೆ ಹಲವು ಕಡೆಗಳಲ್ಲಿ ಸರ್ವರ್ ಡೌನ್ (Server Down), ಟೆಕ್ನಿಕಲ್ ಸಮಸ್ಯೆಗಳು ಎದುರಾಗಿವೆ. ಮತ್ತೊಂದು ಕಡೆ ನಕಲಿ ನಂಬರ್ ಪ್ಲೇಟ್ಗಳ ಬಗ್ಗೆಯೂ ದೂರು ಬರ್ತಿವೆ. ಅವುಗಳನ್ನು ಪರಿಶೀಲನೆ ನಡೆಸಲು ಸಮಯಾವಕಾಶ ಬೇಕು. ಹೀಗಾಗಿ ಇನ್ನೆರಡು ದಿನಗಳಲ್ಲಿ ಹೆಚ್ಚುವರಿ ಸಮಯ ವಿಸ್ತರಣೆ ಬಗ್ಗೆ ಅಧಿಕೃತ ತಿರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k