ಬೆಂಗಳೂರು: ಕಳೆದರೆಡು ದಿನಗಳಿಂದ ಶಾಂತನಾಗಿದ್ದ ವರುಣ ದೇವ ಇಂದು ಮಧ್ಯಾಹ್ನದಿಂದಲೇ ಆರ್ಭಟಿಸುತ್ತಿದ್ದಾನೆ. ಭಾರೀ ಮಳೆಯಿಂದಾಗಿ ನೀರು ರಸ್ತೆಗಳಿಗೆ ನುಗ್ಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
ಮೆಜೆಸ್ಟಿಕ್, ಮಾರ್ಕೆಟ್, ಕಾರ್ಪೋರೇಷನ್, ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರ, ಜಯನಗರ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್, ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಸೇರಿದಂತೆ ನಗರದ ಹಲವೆಡೆ ಮಳೆಯ ಆರ್ಭಟ ಜೋರಾಗಿದೆ. ಸತತ ಅರ್ಧ ಗಂಟೆಯಿಂದ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಇನ್ನೂ ಮಲ್ಲೇಶ್ವರಂ, ಆನಂದ್ ರಾವ್ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಶಿವಾನಂದ ಸರ್ಕಲ್ ಬಳಿ ರೇಲ್ವೇ ಟ್ರ್ಯಾಕ್ ಕೆಳಗೆ 3 ಅಡಿ ನೀರು ನಿಂತಿದೆ.
Advertisement
ಮಳೆಯ ನೀರಿನಿಂದಾಗಿ ಕೆರೆಯಂತಾಗಿದ್ದು, ವಾಹನಗಳು ಮುಂದಕ್ಕೆ ಚಲಿಸಲಾರದೇ ನಿಂತಲ್ಲೇ ನಿಂತಿವೆ. ಇದರಿಂದಾಗಿ ವಿಧಾನಸೌಧ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ಮಳೆಯ ತೀವ್ರತೆಗೆ ನಾಯಂಡಹಳ್ಳಿ ಬಳಿ ಗೋಡೆ ಕುಸಿತವಾಗಿದೆ. ನಾಯಂಡಹಳ್ಳಿಯ ರಾಜಕಾಲುವೆಯ ನೀರು ಬ್ರಿಡ್ಜ್ ಮೇಲೆಯೇ ಹರಿಯುತ್ತಿದೆ. ಪಕ್ಕದಲ್ಲಿಯ ತಡೆಗೋಡೆಯನ್ನ ದಾಟಿ ರಾಜಕಾಲುವೆ ನೀರು ರಸ್ತೆಗೆ ಬರುತ್ತಿದೆ.