ಚಿಕ್ಕೋಡಿ: ತಾಲೂಕಿನ ಮುಗಳಿ ಗ್ರಾಮದ ಬಸವೇಶ್ವರ ಜಾತ್ರೆ ಅಂಗವಾಗಿ ಡರ್ಟ್ ಟ್ರ್ಯಾಕ್ ಮೋಟಾರ್ ಸೈಕಲ್ ರೇಸ್ ಸ್ಪರ್ಧೆ ನಡೆಯಿತು.
Advertisement
ಗಜಾನನ ರೇಸಿಂಗ್ ಸಂಘಟನಾ ಕಮಿಟಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಓಪನ್ ಕ್ಲಾಸ್, 125ಸಿಸಿ ಮೋಟಾರ್ ಸೈಕಲ್ ರೇಸ್ ವಿಭಾಗದಲ್ಲಿ ಇಚಲಕರಂಜಿ ಧಾರವಾಡ, ಬೆಳಗಾವಿ, ಸಾಂಗ್ಲಿ ಕೊಲ್ಲಾಪುರ, ಪಣಜಿ, ಪುಣೆ ಸಾಂಗಲಿ, ನಗರ ಸೇರಿದಂತೆ ಗಡಿಭಾಗದ ಮೂರು ರಾಜ್ಯದ ಸುಮಾರು 150ಕ್ಕೂ ಹೆಚ್ಚಿನ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಇದನ್ನೂ ಓದಿ: ಎಲ್ಲೆಂದರಲ್ಲಿ ಕಾಣಿಸುತ್ತಿದೆ Z ಸಿಂಬಲ್ – ಇದು ರಷ್ಯಾದ ಯುದ್ಧದ ಸಂಕೇತ!
Advertisement
Advertisement
ಬೈಕ್ ರೇಸ್‍ಗೆ ಚಾಲನೆ ನೀಡಿ ಮಾತನಾಡಿದ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮುಗಳಿ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಲ್ಲಪ್ಪಾ ಬಡಿಗೇರ ಅವರ ನೇತೃತ್ವದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಬೈಕ್ ರೇಸ್ ರಾಷ್ಟ್ರ ಮಟ್ಟದ ಡರ್ಟ್ ಟ್ರ್ಯಾಕ್ ಬೈಕ್ ರೇಸ್‍ಗೆ ಬೆಳೆದು ನಿಂತಿದ್ದು ಶ್ಲಾಘನೀಯ ಎಂದರು. ಇದನ್ನೂ ಓದಿ: ವಿಧಾನಸಭೆಗೆ ಕುದುರೆ ಏರಿ ಬಂದ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್
Advertisement
ಯರನಾಳದ ಬ್ರಹ್ಮಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವಿಜಯ ಕೋಟೆವಾಲೆ, ವಿಳಾಸ ಪಾಲ, ರಾಜು ಪಾಟೀಲ್ ದುಂಡಪ್ಪಾ ಬೆಂಡವಾಡೆ, ರುದ್ರಪ್ಪಾ ಸಂಗಪ್ಪಗೋಳ, ರಾಜು ಹರಗನ್ನವರ, ಆಯೋಜಕ ಮಲ್ಲಪ್ಪ ಬಡಿಗೇರ್, ಬಿ.ಕೆ.ಪಾಟೀಲ್, ಎಲ್.ಎಸ್.ಹಂಚಿನಾಳೆ ಉಪಸ್ಥಿತರಿದ್ದರು.