ED ದಾಳಿ ಬಿಜೆಪಿಯ ನೆಚ್ಚಿನ ಅಸ್ತ್ರ: ರಾಹುಲ್ ಗಾಂಧಿ

Public TV
2 Min Read
rahul gandhi

ನವದೆಹಲಿ: ಜಾರಿ ನಿರ್ದೇಶನಾಲಯದ(Enforcement Directorate​ raids) ದಾಳಿ ಬಿಜೆಪಿಯ ನೆಚ್ಚಿನ ಅಸ್ತ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಬಿಜೆಪಿ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.

ಮಂಗಳವಾರ ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಅವರ ಸಂಬಂಧಿಕರ ಮನೆಯಲ್ಲಿ ನಡೆದ ದಾಳಿಯ ನಡೆದ ಬೆನ್ನಲ್ಲೆ, ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಡಿ ದಾಳಿ ನಡೆಸುವುದು ಬಿಜೆಪಿಯ ಅಚ್ಚುಮೆಚ್ಚಿನ ಅಸ್ತ್ರವಾಗಿದೆ. ಏಕೆಂದರೆ ಅವರಲ್ಲಿಯೇ ಮರೆಮಾಚಲು ವಿಷಯಗಳಿವೆ. ಅಂತಹ ದಾಳಿಗಳಿಗೆ ಪಕ್ಷವು ಹೆದರುವುದಿಲ್ಲ ಎಂದು ರಾಹುಲ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚರಣ್​ಜಿತ್ ಸಿಂಗ್ ಚೆನ್ನಿ ಸಂಬಂಧಿ ಮನೆಯ ಮೇಲೆ ಇಡಿ ದಾಳಿ

Charanjit Singh Channi 4

ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮುಖ್ಯಮಂತ್ರಿ ಚರಣ್?ಜಿತ್ ಸಿಂಗ್ ಚೆನ್ನಿ ಅವರ ಸಂಬಂಧಿಕರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಮರಳು ದಂಧೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಭೂಪಿಂದರ್ ಸಿಂಗ್ ಹನಿ ಚರಣ್?ಜಿತ್ ಸಿಂಗ್ ಚೆನ್ನಿ ಸೋದರಳಿಯ ಆಗಿದ್ದಾರೆ. ಸದ್ಯ ಮೊಹಾಲಿ ಸೇರಿದಂತೆ ಪಂಜಾಬ್‍ನಲ್ಲಿ 10 ರಿಂದ 12 ಕಡೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದೆ. ಚುನಾವಣೆ ಸಮೀಪವಿರುವ ಸಂದರ್ಭದಲ್ಲಿ ನಡೆಸಿರುವ ಈ ದಾಳಿ ಇದೀಗ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:  ಟೆಲಿಪ್ರೊಂಪ್ಟರ್ ಕೂಡ ಇಷ್ಟೊಂದು ಸುಳ್ಳುಗಳನ್ನು ಹೇಳಲು ಸಾಧ್ಯವಿಲ್ಲ – ಮೋದಿ ವಿರುದ್ಧ ರಾಹುಲ್ ವ್ಯಂಗ್ಯ

RAHUL 2

ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಅವರ ಮನೆಯಿಂದ 4 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸಂದೀಪ್ ಕುಮಾರ್ ಎಂಬುವವರ ಮನೆಯಿಂದ 2 ಕೋಟಿ ರೂ. ಭೂಪಿಂದರ್ ಸಿಂಗ್ ಹನಿ ಅವರ ಮನೆ ಸೇರಿದಂತೆ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ.

 

Share This Article
Leave a Comment

Leave a Reply

Your email address will not be published. Required fields are marked *