ನೀನಾಸಂ ಸತೀಸ್ ನಟನೆಯ `ಪೆಟ್ರೋಮ್ಯಾಕ್ಸ್'(Petromax) ಚಿತ್ರದ ಸೋಲಿನ ನಂತರ ಇದೀಗ `ಪರಿಮಳಾ ಲಾಡ್ಜ್'(Parimala Lodge) ಚಿತ್ರವನ್ನು ನಿರ್ದೇಶಕ ವಿಜಯ್ ಪ್ರಸಾದ್ ಕೈಗೆತ್ತಿಕೊಂಡಿದ್ದಾರೆ. ಈ ವೇಳೆ ದಿವಂಗತ ಬುಲೆಟ್ ಪ್ರಕಾಶ್(Bullet Prakash) ಅವರನ್ನ ನೆನಪಿಕೊಂಡಿದ್ದಾರೆ. ಅವರನ್ನು ನೆನೆದು ಭಾವನ್ಮಾತಕ ಪತ್ರವೊಂದನ್ನ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತೋತಾಪುರಿ, ಪೆಟ್ರೋಮ್ಯಾಕ್ಸ್ ಚಿತ್ರದ ಗೆಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡೋದರಲ್ಲಿ ಸೋತಿತ್ತು. ಇದೀಗ ʻಪರಿಮಳಾ ಲಾಡ್ಜ್ʼ ಚಿತ್ರಕ್ಕೆ ವಿಜಯ್ ಪ್ರಸಾದ್ ಕೈಹಾಕಿದ್ದಾರೆ. ಬುಲೆಟ್ ಪ್ರಕಾಶ್ ಜೊತೆಗಿನ ನೆನಪಿನ ಬುತ್ತಿಯನ್ನ ಈ ಪತ್ರದ ಮೂಲಕ ತೆರೆದಿಟ್ಟಿದ್ದಾರೆ. ʻಪರಿಮಳಾ ಲಾಡ್ಜ್ʼ ಚಿತ್ರದ ಸಣ್ಣ ತುಣುಕೊಂದು 3 ವರ್ಷಗಳು ಹಿಂದೆ ರಿಲೀಸ್ ಆಗಿತ್ತು. ಹಲವು ಕಾರಣಗಳಿಂದ ಸಿನಿಮಾ ಮುಂದಕ್ಕೆ ಹೋಗಿರಲಿಲ್ಲ. ಇದೀಗ ಮತ್ತೆ ಈ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಇದನ್ನೂ ಓದಿ:ʻಕಮಾಂಡೋʼ ಶೂಟಿಂಗ್ ವೇಳೆ ರಾಗಿಣಿ ದ್ವಿವೇದಿ ಕೈಗೆ ಪೆಟ್ಟು
ನೀವು ನನಗೆ ಹಾಗಾಗ ನೆನಪಾಗುತ್ತಿರಿ. ಹಾಗೆ ನೆನಪಾದಾಗಲೆಲ್ಲಾ ನಿಮ್ಮ ಕಾಮಿಡಿ ದೃಶ್ಯದ ತುಣುಕುಗಳನ್ನ ನೋಡಿ ಮೌನವಾಗಿ ಬಿಡುತ್ತೇನೆ. `ಗೆಳೆಯ’ ಚಿತ್ರದಲ್ಲಿ ನನಗೆ ಸಿಕ್ಕಾಪಟ್ಟೆ ಇಷ್ಟವಾಗಿ ಹೋದಿರಿ ನಿಮ್ಮೊಳಗಿನ ಹಾಸ್ಯ ಸಮಯದ ಪ್ರಜ್ಞೆ ಅಮೋಘ. ನಿಮ್ಮ ಜೊತೆ ಕೆಲಸ ಮಾಡಬೇಕೆಂಬ ನನ್ನ ಹಂಬಲ ಮತ್ತು ಆಸೆ ಕೇವಲ ಟ್ರೇಲರ್‌ಗೇ ಸೀಮಿತವಾಗಿ ಹೋಗಿದ್ದು ತುಂಬಾ ನೋವಿನ ವಿಚಾರ ಇಂದು ಆಫೀಸಿನಲ್ಲಿ ಪರಿಮಳ ಲಾಡ್ಜ್ ಬರವಣಿಗೆಯಲ್ಲಿ ಇದ್ದೆ. ನಿಮ್ಮ ಪಾತ್ರದ ಬಗ್ಗೆ ಬಂದಾಗ ವಿಪರೀತ ನೆನಪಾದಿರಿ ಹಾಗೆ ಸಂಕಟವೂ ಆಯಿತು.
ನೀವು ಇದ್ದಿದ್ದರೆ ಗುಡ್ಡೆಮಾಂಸ ಪಾತ್ರವನ್ನ ನುಂಗಿ ನೀರು ಕುಡಿದು ಬಿಡುತ್ತಿದ್ದಿರಿ. ನಿಮ್ಮಿಂದ ಮಾತ್ರ ಆ ಶೈಲಿ ಸಾಧ್ಯ. ನಿಮ್ಮ ನೆನಪಿಗಾಗಿ, ಪ್ರೀತಿಗಾಗಿ ಮತ್ತು ಗೌರವಕ್ಕಾಗಿ ಪಾತ್ರದ ಹೆಸರನ್ನ ಬುಲೆಟ್ ಪ್ರಕಾಶ್ ಅಂತಲೇ ಇಟ್ಟು, ಅಡ್ಡ ಹೆಸರಾಗಿ ಗುಡ್ಡೆಮಾಂಸ ಅಂತ ಉಳಿಸಿಕೊಳ್ಳುತ್ತಿದ್ದೇನೆ. ಆದರೂ ನೀವು ಇಷ್ಟು ಬೇಗ ಹೋಗಬಾರದಿತ್ತು ಹಾಗೆ ಇನ್ನೂ ಬೆಳಗಿ ಬಾಳಬೇಕಿತ್ತು. ಟ್ರೇಲರ್ ಚಿತ್ರೀಕರಣದ ಸಮಯದಲ್ಲಿ ನಿಮ್ಮ ನಗು, ಮಾತು, ಕೀಟಲೆ, ಚೇಷ್ಟೇ ಎಲ್ಲವೂ ನನ್ನಲ್ಲಿ ಇನ್ನೂ ಹಚ್ಚಹಸಿರಾಗೇ ಇದೆ ಮಿಸ್ಸಿಂಗ್ ಯೂ ಸರ್ ಎಂದು ವಿಜಯ್ ಭಾವುಕರಾಗಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ಸದ್ದು ಮಾಡುತ್ತಿದೆ.