ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣವಾಗಿ ಕನ್ನಡದ ಖ್ಯಾತ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಕುಟುಂಬದ ಆಪ್ತರಾದ ಖ್ಯಾತ ನಟ ಸುಧೀರ್ ಪತ್ನಿ ಮಾಲತಿ (Malathi Sudhir) ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗ ಜೈಲಿನಿಂದ ಹೊರ ಬರುತ್ತಾನೆ ಎಂದು ಮಾಲತಿ ಸುಧೀರ್ ಕಣ್ಣೀರಿಟ್ಟಿದ್ದಾರೆ.
ದರ್ಶನ್ (Darshan) ಸದ್ಯದ ಸ್ಥಿತಿ ನೆನೆದು ಮಾಲತಿ ಕಣ್ಣೀರು ಹಾಕಿದ್ದಾರೆ. ನನ್ನ ಮಗ ಖಂಡಿತ ಹೊರ ಬರುತ್ತಾನೆ. ಆ ರಾಯರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ದುಃಖ ಇರುವಾಗ ಮೌನ ಇರುತ್ತದೆ. ನೋವಿರುವಾಗಲೂ ಮೌನ ಇರುತ್ತದೆ. ಮಗ ತರುಣ್ ಜೊತೆಯೂ ದರ್ಶನ್ ಪ್ರಕರಣದ ಕುರಿತು ನಾನೇನು ಕೇಳಲಿಲ್ಲ ಎಂದು ಮಾಲತಿ ಸುಧೀರ್ ಮಾತನಾಡಿದ್ದಾರೆ.
ಅಂದಹಾಗೆ, ದರ್ಶನ್‌ರನ್ನ ಬಾಲ್ಯದಿಂದಲೂ ಖಳನಟ ಸುಧೀರ್ ಪತ್ನಿ ಮಾಲತಿ ನೋಡಿಕೊಂಡು ಬಂದಿದ್ದಾರೆ. ಪುತ್ರ ತರುಣ್ (Director Tharun Sudhir) ಮತ್ತು ದರ್ಶನ್ ಸ್ನೇಹಿತರು. ದರ್ಶನ್ ನಟನೆಯ ರಾಬರ್ಟ್, ಕಾಟೇರ (Kaatera) ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದರು.