ಬೆಂಗಳೂರು: ಸ್ಯಾಂಡಲ್ ವುಡ್ ನ ದಿಗ್ಗಜರುಗಳಾದ ಶಿವಣ್ಣ ಹಾಗೂ ಸುದೀಪ್ ಅವರನ್ನಿಟ್ಟುಕೊಂಡು ಸಿನಿಮಾ ಮಾಡಲು ಮುಂದಾದಾಗ ಅನೇಕ ಮಂದಿ ನನ್ನ ವಿರುದ್ಧ ಮಾತನಾಡಿದ್ರು. ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಇಂದು ನಾನು ದಿ ವಿಲನ್ ಸಿನಿಮಾ ಮಾಡಿದ್ದೇನೆ. ಒಟ್ಟಿನಲ್ಲಿ ಕಾಲೆಳೆಯುವವರು ಇದ್ರೇನೆ ನಾವು ಬೆಳೆಸಲು ಸಾಧ್ಯ ಅಂತ ನಿರ್ದೇಶಕ ಪ್ರೇಮ್ ಹೇಳಿದ್ರು.
ತನ್ನ ಸಿನಿಮಾ ಪ್ರಚಾರದ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದು ಬರೀ ಪ್ರಚಾರ ಅಲ್ಲ. ಅದರಿಂದ ಸಮಾಜಕ್ಕೆ ಉಪಯೋಗವಾಗಲಿ ಎಂಬುದೇ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ದಿ ವಿಲನ್ ತಂಡಕ್ಕೆ ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ. ಪ್ರಚಾರದಿಂದ ಬಂದದ್ರಲ್ಲಿ ಒಂದು ಪರ್ಸೆಂಟ್ ಹಣವನ್ನು ನಾವು ನಿರ್ದೇಶಕರ ಸಂಘಕ್ಕೆ ಕೊಡುತ್ತಿದ್ದೇವೆ ಅಂತ ಅವರು ಹೇಳಿದ್ರು.
Advertisement
Advertisement
ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರನ್ನಿಟ್ಟುಕೊಂಡು ಸಿನಿಮಾ ಮಾಡಲು ಮುಂದಾದಾಗ ಹಲವು ಜನ ಮಾತನಾಡಿದ್ದರು. ಈದು ಸಿನಿಮಾ ಆಗತ್ತಾ? ಇವರು ಸಿನಿಮಾ ಮಾಡ್ತಾರಾ? ಇದು ಸ್ಕ್ರೀನ್ ಗೆ ಬರುತ್ತಾ ಅಂತೆಲ್ಲಾ ಪ್ರಶ್ನೆಗಳು ಹರಿದಾಡುತ್ತಿದ್ದವು. ಆದ್ರೆ ಇವೆಲ್ಲ ಪ್ರಶ್ನೆಗಳನ್ನು ನಾನು ಚಾಲೆಂಜ್ ಆಗಿ ತೆಗೆದುಕೊಂಡೆ. ನಾನು ಮೊದಲಿನಿಂದಲೂ ಮಾಡು ಇಲ್ಲವೇ ಮಡಿ ಅನ್ನೋ ಗುಣದವನು. ಹೀಗಾಗಿ ಬೇರೆ ಭಾಷೆಯವರು ಮಾಡಿದಾಗ ನಾವು ಯಾಕೆ ಮಾಡಬಾರದೆಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಈ ಕಾರಣದಿಂದಾಗಿ ಇಬ್ಬರೂ ನಟರ ಬಳಿ ಈ ಕುರಿತು ಮಾತನಾಡಿದ್ದೇನೆ. ಇಬ್ಬರೂ ನಟರೂ ಕೂಡ ನನಗೆ ಸಹಕರಿಸಿದ್ರು. ಹೀಗೆ ಎಲ್ಲರೂ ಸೇರಿ ಒಂದು ಒಳ್ಳೆಯ ಸಿನಿಮಾ ಮಾಡಿದೆವು. ಅಂದು ಯಾರು ಆಗಲ್ಲ ಅಂದ್ರೋ, ಇಂದು ಅವರೇ ಪಬ್ಲಿಸಿಟಿ ಕೊಡಲು ಆರಂಭಿಸಿದ್ದಾರೆ ಅಂತ ನಕ್ಕರು. ಇದನ್ನೂ ಓದಿ: ಮತ್ತೊಂದು ವಿವಾದದಲ್ಲಿ `ದಿ ವಿಲನ್’ – ಸಿನಿಮಾ ನೋಡಿ ಆಮೇಲೆ ಮಾತ್ನಾಡಿ ಅಂದ್ರು ನಿರ್ದೇಶಕ ಪ್ರೇಮ್
Advertisement
ಸುದೀಪ್ ಹಾಗೂ ಶಿವಣ್ಣ ಇಬ್ಬರೂ ಸಿನಿಮಾ ಸೆಟ್ ಗೆ ಬಂದಾಗ ಮಕ್ಕಳಂತೆ ನಡೆದುಕೊಳ್ಳುತ್ತಾರೆ. ಹೊರಗಡೆ ಜನ ಏನೂ ಬೇಕಾದ್ರೂ ಹೇಳಲಿ. ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಆದ್ರೆ ನನ್ನ ಪ್ರಕಾರ ಕನ್ನಡ ಚಿತ್ರರಂಗದಲ್ಲಿ ಇಬ್ಬರೂ ಒಳ್ಳೆಯ ಹಾಗೂ ಅದ್ಭುತ ನಟರು. ಒಟ್ಟಿನಲ್ಲಿ ಇಬ್ಬರೂ ಒಳ್ಳೆಯ ರೀತಿಯಲ್ಲಿ ಅಭಿನಯಿಸಿ ದಿ ವಿಲನ್ ಚಿತ್ರಕ್ಕೆ ಸಹಕರಿಸಿದ್ದಾರೆ ಅಂದ್ರು.
Advertisement
ನಾನು ಮೊದಲಿನಿಂದಲೂ ಸಿನಿಮಾದಲ್ಲಿ ಹೊಸತನವನ್ನು ಹುಡುಕುತ್ತಿರುತ್ತೇನೆ. ಅದನ್ನೇ ಕೆಲವರು ಗಿಮಿಕ್, ಸ್ವಮೇಕ್ ಅಂತೆಲ್ಲಾ ಹೇಳುತ್ತಿರುತ್ತಾರೆ. ಅವರು ಅಂದುಕೊಳ್ಳಲಿ. ಆದ್ರೆ ಜನರಿಗೆ ಈ ವಿಷಯ ಇದೆ ಅನ್ನೋದನ್ನು ಮನದಟ್ಟು ಮಾಡುವುದು ನನ್ನ ಉದ್ದೇಶವಾಗಿರುತ್ತದೆ. ಹೀಗಾಗಿ ಆ ಮಟ್ಟಕ್ಕೆ ನಾನು ಪ್ರಯತ್ನಿಸುತ್ತೇನೆ. ಒಂದು ಸಲ ಸಿನಿಮಾ ನೋಡಬೇಕೆನ್ನುವ ಮನಸ್ಸು ಪ್ರತಿಯೊಬ್ಬನಿಗೂ ಬರಬೇಕು. ಅದಕ್ಕೆ ನಾನು ಶ್ರಮಿಸುತ್ತೇನೆ ಅಂತ ಹೇಳಿದ್ರು. ಇದನ್ನೂ ಓದಿ: ‘ದಿ ವಿಲನ್’ ಟೈಟಲ್ ಟ್ರ್ಯಾಕ್ ಲಿರಿಕಲ್ ವಿಡಿಯೋ ರಿಲೀಸ್
ದಿ ವಿಲನ್ ಸಿನಿಮಾದ ಆಡಿಯೋ ಬಿಡುಗಡೆಯಾಗುತ್ತಿದೆ. ನಿನ್ನೆಯಷ್ಟೇ ಸಿನಿಮಾ ಸೆನ್ಸಾರ್ ಗೆ ಹೋಗಿದೆ. ಹೀಗಾಗಿ ಅಲ್ಲಿ ಏನಾದ್ರೂ ಕರೆಕ್ಷನ್ ಗಳಿದ್ದಲ್ಲಿ ಅದನ್ನು ಸರಿಪಡಿಸಲು 10-12 ದಿನಗಳು ಬೇಕೆ ಬೇಕಾಗುತ್ತದೆ. ಚಿತ್ರದಲ್ಲಿ ಗ್ರಾಫಿಕ್ಸ್ ತುಂಬಾ ಇದೆ. ಆಗಸ್ಟ್ 24ರಂದು ಬಿಡುಗಡೆ ಮಾಡಬೇಕು ಅಂತ ಪ್ಲ್ಯಾನ್ ಮಾಡಿದ್ದೇವೆ. ಒಟ್ಟಿನಲ್ಲಿ ಬರುವ ವಾರ ಸೆನ್ಸಾರ್ ಆಗುತ್ತದೆ. ಹೀಗಾಗಿ ಬರುವ ವಾರವೇ ಚಿತ್ರ ಬಿಡುಗಡೆ ದಿನವನ್ನು ಘೋಷಿಸುವುದಾಗಿ ಹೇಳಿದ್ರು. ಒಟ್ಟಿನಲ್ಲಿ ಚಿತ್ರದಲ್ಲಿ ನಮಗೆ ಪ್ರತಿಯೊಬ್ಬರು ಸಹಾಯ ಮಾಡುವ ಮೂಲಕ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ ಅವರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ವಿವಾದಕ್ಕೆ ಗುರಿಯಾಗ್ತಿದೆ `ದಿ ವಿಲನ್’ ಹಾಡು?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv