ಹೈದರಾಬಾದ್: ಭಾರತೀಯ ಸಿನಿಮಾರಂಗದ ಶ್ರೀಮಂತಿಕೆಯನ್ನು ವಿಶ್ವಕ್ಕೆ ಪರಿಚಯಿಸಿಕೊಟ್ಟ ಬಾಹುಬಲಿ ಸಿನಿಮಾ ಮತ್ತೆ ರಿಲೀಸ್‍ಗೆ ಸಿದ್ಧತೆ ನಡೆಸಿದೆ. ನಿರ್ದೇಶಕ ಎಸ್‍ಎಸ್ ರಾಜ್‍ಮೌಳಿ ಹಾಗೂ ನಿರ್ಮಾಪಕರು ಈ ಕುರಿತು ಚಿಂತನೆಯನ್ನು ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಬಾಹುಬಲಿ ಸಿನಿಮಾದ ರೀ ರಿಲೀಸ್‍ನ ವಿಶೇಷತೆಯೆಂದರೆ ಬಾಹುಬಲಿ-ದಿ ಬಿಗಿನಿಂಗ್ ಮತ್ತು ಕನ್‍ಕ್ಲೂಷನ್ ಸರಣಿಗಳು ಒಂದೇ ಭಾಗವಾಗಿ ಬಿಡುಗಡೆಗೊಳ್ಳಲಿದೆ ಎಂಬ ಮಾತು ಕೇಳಿಬರುತ್ತಿದ್ದು, ಅಧಿಕೃತವಾಗಿ ಎಲ್ಲಿಯೂ ಸಿನಿಮಾ ತಂಡ ಹೇಳಿಕೊಂಡಿಲ್ಲ.
ಬಾಹುಬಲಿ ಮೊದಲ ಭಾಗದಲ್ಲಿ “ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ” ಎಂಬ ಪ್ರಶ್ನೆ ಹುಟ್ಟುಹಾಕಿತ್ತು. ಬಾಹುಬಲಿ-2 ಚಿತ್ರ ಇದಕ್ಕೆ ಉತ್ತರ ಕೊಟ್ಟಿತ್ತು. ನಿರ್ದೇಶಕ ರಾಜ್‍ಮೌಳಿ ಈ ಎರಡು ಚಿತ್ರಗಳನ್ನು ಸಮ್ಮಿಲನಗೊಳಿಸಿ ಪೂರ್ಣ ಚಿತ್ರಕಥೆಯನ್ನು ಹೊಂದಿರುವ ಭಾಗವಾಗಿ ಬಿಡುಗಡೆ ಮಾಡಲು ಯೋಚಿಸುತ್ತಿದ್ದರೆ ಎನ್ನಲಾಗಿದೆ. ವರದಿಗಳ ಪ್ರಕಾರ ರಾಜಮೌಳಿಯವರ ಮುಂದಿನ ಸಿನಿಮಾ ಆರಂಭಗೊಳ್ಳುವ ವೇಳೆಗೆ ಈ ಚಿತ್ರದ ರೀ ರಿಲೀಸ್ ಕಾರ್ಯಗಳು ಪೂರ್ಣಗೊಳ್ಳಲಿದೆ.
Advertisement
ಬಾಹುಬಲಿಯ ಮೂರನೇ ಭಾಗ ಸಿದ್ಧಗೊಳ್ಳಲಿದೆ ಎಂಬ ವದಂತಿಯನ್ನ ಚಿತ್ರತಂಡ ತಳ್ಳಿಹಾಕಿದೆ. ಬಾಹುಬಲಿ ಕಥೆಯನ್ನು ಒಂದೇ ಭಾಗದಲ್ಲಿ ನೋಡಲು ಚಿತ್ರ ರಸಿಕರು ಹೆಚ್ಚು ಕಾತುರರಾಗಿದ್ದಾರೆ. ಅಲ್ಲದೇ ಬಾಹುಬಲಿಯ ನಂತರ ನಿರ್ದೇಶಕ ರಾಜಮೌಳಿಯವರ ಮುಂದಿನ ಸಿನಿಮಾ ಯಾವುದು ಎಂಬ ಕುರಿತು ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ರೀ ರಿಲೀಸ್ ಸುದ್ದಿ ಸಂತೋಷವನ್ನು ಉಂಟುಮಾಡಲಿದೆ.
Advertisement
Advertisement
ಬಾಹುಬಲಿ ಸಿನಿಮಾದ ಭಾಗ ಒಂದು ಮತ್ತು ಎರಡು ವಿಶ್ವದೆಲ್ಲೆಡೆ ಬಿಡುಗಡೆಗೊಂಡು ಒಟ್ಟಾರೆ ಸುಮಾರು ಮೂರು ಸಾವಿರ ಕೋಟಿ ರೂ. ಗಳಿಕೆಯನ್ನು ಪಡೆದಿದ್ದವು. ಚಿತ್ರದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡರೆ, ರಾಣಾ ದಗ್ಗುಬಾಟಿ ಬಲ್ಲಾಳ ದೇವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನುಳಿದಂತೆ ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯ ಚಿತ್ರದ ನಾಯಕಿಯರ ಪಾತ್ರದಲ್ಲಿ ನಟಿಸಿದ್ದರು.
Advertisement
https://www.instagram.com/p/BXQcwU8g8GR/?taken-by=prabhasworld
https://www.instagram.com/p/BXP3SpsgkqP/?taken-by=prabhasworld
https://www.instagram.com/p/BWRZh1IgIdY/?taken-by=prabhasworld
https://www.instagram.com/p/BWFT4ujAbCu/?taken-by=prabhasworld
https://www.instagram.com/p/BVSXMVZgN6q/?taken-by=prabhasworld
https://www.instagram.com/p/BUlvDOtAPfn/?taken-by=prabhasworld
https://www.instagram.com/p/BUcxsZ0AY5A/?taken-by=prabhasworld
https://www.instagram.com/p/BUChbmfAeEl/?taken-by=prabhasworld
https://www.instagram.com/p/BXFEa7NFEjT/?taken-by=prabhas__official
https://www.instagram.com/p/BWwVUPFl3bO/?taken-by=prabhas__official
https://www.instagram.com/p/BVXSQ-GF1jX/?taken-by=prabhas__official
https://www.instagram.com/p/BUrgaWkAufA/?taken-by=prabhas__official
https://www.instagram.com/p/BUjDYWqAdo8/?taken-by=prabhas__official
https://www.instagram.com/p/BTmAg97gdF1/?taken-by=prabhas__official