Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ಕಾವೇರಿ ಹೋರಾಟ ಮತ್ತು ಚಿತ್ರೋದ್ಯಮದ ಸಂಕಟ ಬಿಚ್ಚಿಟ್ಟ ನಿರ್ದೇಶಕ ಶಶಾಂಕ್

Public TV
Last updated: September 27, 2023 11:45 am
Public TV
Share
4 Min Read
shashank director
SHARE

ಕಾವೇರಿ (Cauvery) ಹೋರಾಟಕ್ಕೆ ಚಿತ್ರೋದ್ಯಮದವರು ಎಲ್ಲಿ ಎಂದು ಕೇಳುವ ಕೆಲ ಹೋರಾಟಗಾರರಿಗೆ ಚಿತ್ರೋದ್ಯಮಕ್ಕಾಗಿ ನಿಮ್ಮ ಕೊಡುಕೊಳ್ಳುವಿಕೆ ಏನು ಎಂದು ನಟ ದರ್ಶನ್ (Darshan) ಕೇಳಿಸಿದ್ದರು. ಪರಭಾಷಾ ಚಿತ್ರಗಳನ್ನು ಗೆಲ್ಲಿಸುತ್ತಿರುವ ಕುರಿತು ಅವರು ಅಸಮಾಧಾನ ವ್ಯಕ್ತ ಪಡಿಸಿದ್ದರು. ದರ್ಶನ್ ಈ ನಡೆಯನ್ನು ಕನ್ನಡದ ಹೆಸರಾಂತ ನಿರ್ದೇಶಕ ಶಶಾಂಕ್ (Shashank) ಬೆಂಬಲಿಸಿದ್ದರು. ಈ ಕುರಿತು ಶಶಾಂಕ್ ಮತ್ತಷ್ಟು ವಿವರಗಳನ್ನು ಅಕ್ಷರ ರೂಪದಲ್ಲಿ ಬಿಚ್ಚಿಟ್ಟಿದ್ದಾರೆ. ಆ ಬರಹವಿದು.

mysuru darshan

ಅನಾದಿ ಕಾಲದಿಂದಲೂ ಕನ್ನಡ ಚಿತ್ರ ನಿರ್ಮಾಪಕರು, ನಿರ್ದೇಶಕರು ಮತ್ತು ಸೂಪರ್ ಸ್ಟಾರ್ ಗಳಾಗುವ ಮುಂಚೆ ಹೊಸಬರಾಗಿದ್ದ ನಟರು ಬಹಿರಂಗವಾಗಿ ಹೇಳಿದರೆ ಏನಾಗುತ್ತದೋ ಎಂಬ ಭಯದಲ್ಲಿ, ಒಳಗೇ ಅನುಭವಿಸುತ್ತಿದ್ದ ಒಂದು ಸಂಕಟದ ವಿಚಾರವನ್ನು ದರ್ಶನ್ ಸರ್ ಮೊನ್ನೆ ಧೈರ್ಯವಾಗಿ ಹೇಳಿದ್ದಾರೆ ಮತ್ತು ನಾನು ಅದಕ್ಕೆ ಬೆಂಬಲ ವ್ಯಕ್ತಪಡಿಸಿದ್ದೇನೆ. ನಾನು ಇದುವರೆಗೂ ಜನರನ್ನು ಮೆಚ್ಚಿಸಲು ಸಿನಿಮಾ ಮಾಡಿದ್ದೇನೆಯೇ ಹೊರತು, ಯಾವ ನಾಯಕ ನಟರನ್ನು ಮೆಚ್ಚಿಸಲು ಅಲ್ಲ ಎಂಬುದನ್ನು ನನ್ನ ಚಿತ್ರಗಳೇ ಹೇಳುತ್ತವೆ.

Shashank

ದರ್ಶನ್ ಸರ್ ಮಾತಿಗೆ ನಾನು ಬೆಂಬಲ ಸೂಚಿಸಿದ್ದು ಒಬ್ಬ ಕನ್ನಡಿಗನಾಗಿ ಮತ್ತು ಕನ್ನಡ ಸಿನಿಮಾ ಪ್ರೇಮಿಯಾಗಿ ಅಷ್ಟೇ.  ಎಂತದೇ ಪರಿಸ್ಥಿತಿ ಬಂದರೂ, ಎಷ್ಟೇ ಆಮಿಷಗಳಿದ್ದರೂ, ಇದುವರೆಗೂ ರೀಮೇಕ್ ಚಿತ್ರಗಳನ್ನು ಮಾಡದಿರುವುದು ಮತ್ತು ಪ್ರತಿ ಚಿತ್ರದಲ್ಲೂ ಕನ್ನಡದ ಕಲಾವಿದರಿಗೆ ಪ್ರಾಮುಖ್ಯತೆ ನೀಡಿರುವುದೇ, ಕನ್ನಡ ಭಾಷೆಯ ಮೇಲಿನ ನನ್ನ ಬದ್ಧತೆಗೆ ಸಾಕ್ಷಿ.

Shashank

ನನ್ನ ನಿರ್ದೇಶನದ  ‘ಕೌಸಲ್ಯಾ ಸುಪ್ರಜಾ ರಾಮ’ ಸೇರಿದಂತೆ ನನ್ನ ಬಹುತೇಕ ಚಿತ್ರಗಳು ಗೆಲ್ಲಲು ಕಾರಣ, ನಿಜವಾದ ಕನ್ನಡ ಸಿನಿಮಾ ಪ್ರೇಮಿಗಳೇ. ಅವರಿಗೆ ನಾನು ಸದಾ ಚಿರಋಣಿ. ಆದರೆ, ಅಂಥವರ ಸಂಖ್ಯೆ ತುಂಬಾ ಕಡಿಮೆ ಇದೆ ಎನ್ನುವುದು ದುಃಖದ ಸಂಗತಿ. ಒಟ್ಟಾರೆ ಕನ್ನಡ ಚಿತ್ರರಂಗದ ಆರ್ಥಿಕತೆಯ ಅಂಕಿ-ಅಂಶವೇ ಅದಕ್ಕೆ ಸಾಕ್ಷಿ. ಆದರೆ, ಅದು ಸಾಮಾನ್ಯ ಪ್ರೇಕ್ಷಕರಿಗೆ ತಿಳಿಯದ ವಿಚಾರ. ಕಹಿ ಸತ್ಯವೇನೆಂದರೆ, ಈ ವರ್ಷದಲ್ಲಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಚಿತ್ರಗಳು ಎನಿಸಿಕೊಂಡ ಡೇರ್ ಡೆವಿಲ್ ಮುಸ್ತಫಾ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಕೌಸಲ್ಯಾ ಸುಪ್ರಜಾ ರಾಮ,  ಆಚಾರ್ ಅಂಡ್ ಕೋ,  ಸಪ್ತ ಸಾಗರದಾಚೆ ಎಲ್ಲೋ ಚಿತ್ರಗಳ ಒಟ್ಟು ಕಲೆಕ್ಷನ್ ಒಂದು ತಮಿಳು ಚಿತ್ರದ ಕಲೆಕ್ಷನ್‌ಗೆ ಸಮ. ಐದೂ ಗೆದ್ದ ಚಿತ್ರಗಳೇ. ಆದರೆ, ಇನ್ನೂ ಹೆಚ್ಚಿನ ಗಳಿಕೆಗೆ ಅರ್ಹತೆ ಇದ್ದ ಚಿತ್ರಗಳು.

Kausalya Supraja Rama 2

ನಾವು ಭಾರತೀಯರು, ನಮ್ಮದು ಭಾರತ ಚಿತ್ರರಂಗ, ಈಗ ನಮ್ಮ ಚಿತ್ರಗಳನ್ನು ಬೇರೆ ರಾಜ್ಯದ ಪ್ರೇಕ್ಷಕರು ನೋಡುತ್ತಿದ್ದಾರೆ, ನಾವು ಅವರ ಚಿತ್ರಗಳನ್ನು ನೋಡುವುದು ತಪ್ಪಲ್ಲ ಎಲ್ಲವೂ ನಿಜ. ಆದರೆ ಒಂದು ದೊಡ್ಡ  ವ್ಯತ್ಯಾಸವೇನೆಂದರೆ, ಅವರು ಪರಭಾಷೆಯ ಕೆಲವು ಚಿತ್ರಗಳನ್ನು ಮಾತ್ರ ನೋಡುತ್ತಾರೆ, ತಮ್ಮ ಭಾಷೆಯ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾರೆ. ಸ್ಟಾರ್ ಸಿನಿಮಾಗಳ ಜೊತೆ ಜೊತೆಗೆ, ಇತರೆ ನಟರ, ಹೊಸಬರ, ಉತ್ತಮ ಕಥಾವಸ್ತುವಿನ  ಚಿತ್ರಗಳನ್ನೂ ದೊಡ್ಡ ಪ್ರಮಾಣದಲ್ಲಿ ನೋಡುತ್ತಾರೆ. ಹಾಗಾಗಿಯೇ, ಆ ಚಿತ್ರರಂಗಗಳ ಆರ್ಥಿಕತೆ ನಮಗಿಂತ 10 ಪಟ್ಟು ಹೆಚ್ಚಾಗಿದೆ. ಆದರೆ ನಮ್ಮಲ್ಲಿ ಎಲ್ಲವೂ ಉಲ್ಟಾ. ವಾರ್ಷಿಕ ವಹಿವಾಟಿನ ಲೆಕ್ಕದಲ್ಲಿ, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗಿಂತಲೂ ಪರಭಾಷೆಯ ಚಿತ್ರಗಳ ಗಳಿಕೆಯೇ ಹೆಚ್ಚು.

Kausalya Supraja Rama 2 1

ಕನ್ನಡ ಚಿತ್ರೋದ್ಯಮದ ಸಂಕಟ ಕೇವಲ ಚಿತ್ರಮಂದಿರಕ್ಕಷ್ಟೆ ಸೀಮಿತವಾಗಿಲ್ಲ. OTT ಪ್ಲಾಟ್ ಫಾರ್ಮ್ ಗಳಲ್ಲೂ ಇದೇ ವ್ಯಥೆ. ಎಲ್ಲಾ ಭಾಷೆಯ ಚಿತ್ರಗಳನ್ನು ಕೊಳ್ಳುವ, ಹಾಟ್ ಸ್ಟಾರ್, ಸೋನಿ, ನೆಟ್ ಫ್ಲಿಕ್ಸ್ ನಂತಹ ಪ್ಲಾಟ್ ಫಾರ್ಮ್ ಗಳು, ಕನ್ನಡ ಚಿತ್ರಗಳಿಂದ ವಿಮುಖವಾಗಿರುವುದಕ್ಕೇ, ಕನ್ನಡ ಭಾಷೆಯಲ್ಲಿ ವೆಬ್ ಸೀರೀಸ್ ಗಳು ನಿರ್ಮಾಣವಾಗದಿರುವುದಕ್ಕೆ ಕಾರಣ ಕೂಡ, ಕನ್ನಡ ಪ್ರೇಕ್ಷಕರ ಕೊರತೆ! ಎಲ್ಲಾ ಭಾಷೆಯಲ್ಲೂ  ಚಿತ್ರಗಳನ್ನು ನಿರ್ಮಿಸುವ ದೊಡ್ಡ ದೊಡ್ಡ ಮಲ್ಟಿ ನ್ಯಾಷನಲ್ ಕಂಪನಿಗಳು ಕನ್ನಡದಲ್ಲಿ ಚಿತ್ರ ನಿರ್ಮಿಸಲು ಹಿಂದೇಟು ಹಾಕುವುದಕ್ಕೂ ಇದೇ  ಕಾರಣ.

Kausalya Supraja Rama 1

ಇವೆಲ್ಲವನ್ನು ಅವರು ಸುಮ್ಮನೆ ಹೇಳುವುದಿಲ್ಲ, ಅವರ ಬಳಿ ಇರುವ ಅಂಕಿ-ಅಂಶಗಳ ಆಧಾರದೊಂದಿಗೆ ಹೇಳುತ್ತಾರೆ. ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದರೆ, ಆ ಊರು ಸಮೃದ್ಧವಾಗಿದೆ ಎಂದು ಅರ್ಥವಲ್ಲ, ಒಂದು ಕೆಜಿಎಫ್, ಒಂದು ಕಾಂತಾರ ಕನ್ನಡ ಚಿತ್ರರಂಗಕ್ಕೆ ಅಳತೆ ಗೋಲಾಗಲಾರವು. ಕಾವೇರಿ ಸಮಸ್ಯೆ- ಕನ್ನಡ ಚಿತ್ರೋದ್ಯಮದ ಸಮಸ್ಯೆ ಎರಡೂ  ಬೇರೆ ನಿಜ. ಆದರೆ, ಸಾಮ್ಯತೆ ಇರುವುದು ‘ನಮ್ಮದು’ ಎಂಬ ಭಾವದಲ್ಲಿ.. ಕಾವೇರಿ ನಮ್ಮದು, ನಮಗೇ ಮೊದಲ ಆದ್ಯತೆ ನೀಡಬೇಕು ಎಂಬುದು ಎಷ್ಟು ನ್ಯಾಯವೋ, ಕನ್ನಡ ಭಾಷೆಯ ಚಿತ್ರಕ್ಕೇ ಮೊದಲ ಆದ್ಯತೆ ನೀಡಿ ಎಂಬ ಮನವಿಯು ಅಷ್ಟೇ ನ್ಯಾಯ. ಕಾವೇರಿ ನೀರನ್ನು ನಂಬಿ ಬದುಕುತ್ತಿರುವ ಲಕ್ಷಾಂತರ ರೈತರ ಕುಟುಂಬಗಳಂತೆ, ಕನ್ನಡ ಚಿತ್ರೋದ್ಯಮವನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳಿವೆ. ಸಮಸ್ಯೆಗಳು ಎದುರಾದಾಗ, ಪರಸ್ಪರರ ನೆರವಿಗೆ ನಿಲ್ಲುವುದೇ ನಿಜವಾದ ಮಾನವೀಯತೆ.

Jawan 2

ನಮ್ಮ ಚಿತ್ರಗಳನ್ನು ಪ್ರೇಕ್ಷಕರಾಗಿ ನೀವು ವಿಮರ್ಶೆ, ಟೀಕೆ ಮಾಡಿದಾಗ, ನಾವು ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಮುಂದಿನ ಚಿತ್ರಗಳಲ್ಲಿ ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುವುದಿಲ್ಲವೆ? ಹಾಗೇ, ನಿಮ್ಮ ತಪ್ಪುಗಳನ್ನು ಚಿತ್ರೋದ್ಯಮಕ್ಕೆ ಸಂಬಂಧಪಟ್ಟವರು ತೋರಿಸಿದಾಗ, ನೀವೂ ಅದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುವುದು ನ್ಯಾಯವಲ್ಲವೇ? ವಿಮರ್ಶೆ- ಪರಾಮರ್ಶೆಗಳು ಎರಡೂ ಕಡೆಯಿಂದ ಇದ್ದರಷ್ಟೇ, ಆರೋಗ್ಯಕರವಾದ ವಾತಾವರಣ ನಿರ್ಮಾಣವಾಗುತ್ತದೆ ಎಂಬುದು ನನ್ನ ಅನಿಸಿಕೆ.

ಕನ್ನಡ ಚಿತ್ರಗಳನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆ ಇರಬಹುದು ಆದರೆ, ನಾವೆಲ್ಲರೂ ಇಂದು ನೆಲೆ ಕಂಡಿರುವುದೇ ಅವರ ಪ್ರೀತಿ ಮತ್ತು ಅಭಿಮಾನದಿಂದ. ಅಂತಹ ಪ್ರೇಕ್ಷಕರಿಗಾಗಿ ನಮ್ಮ ಕಾಯಕ ಮುಂದುವರೆಯುತ್ತದೆ. ಸತ್ಯ ಹೇಳಿದರೂ ಅದನ್ನು ಒಪ್ಪದೇ, ಪರಾಮರ್ಶಿಸದೆ, ಆತ್ಮಾವಲೋಕನ ಮಾಡಿಕೊಳ್ಳದೆ, ಕಾಲು ಎಳೆಯುವುದನ್ನೇ ಕಾಯಕ ಮಾಡಿಕೊಳ್ಳುವ ಜನರಿಗೆ ತಾಯಿ ಭುವನೇಶ್ವರಿ ಸದ್ಬುದ್ಧಿ ನೀಡಲಿ.  ಏನೇ ಸಂಕಟಗಳಿದ್ದರೂ,ಕನ್ನಡ ನಾಡಿನ ಸಮಸ್ಯೆಗಳಿಗೆ ಕನ್ನಡ ಚಿತ್ರರಂಗ ಸದಾ ಧ್ವನಿಯಾಗಿದೆ, ಮುಂದೆಯೂ ಆಗಿರುತ್ತದೆ.

Web Stories

ಯಮ್ಮೊ ಯಮ್ಮೊ.. ಹೇಗ್‌ ಕಾಣ್ತಾರ್‌ ನೋಡಿ..
ಯಮ್ಮೊ ಯಮ್ಮೊ.. ಹೇಗ್‌ ಕಾಣ್ತಾರ್‌ ನೋಡಿ..
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌
ಯೋಗ ದಿನದಂದು ನಟಿ ಪ್ರಣಿತಾ ಯೋಗ…
ಯೋಗ ದಿನದಂದು ನಟಿ ಪ್ರಣಿತಾ ಯೋಗ…
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!..
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!..
ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್
ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್
ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್
ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್
ನವಿಲಿನಂತೆ ಕಂಗೊಳಿಸಿದ ಮಲೈಕಾ
ನವಿಲಿನಂತೆ ಕಂಗೊಳಿಸಿದ ಮಲೈಕಾ
ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ
ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ
ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್
ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್
ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್
ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್


follow icon

TAGGED:cauverydarshansandalwoodShashankಕಾವೇರಿ ಹೋರಾಟದರ್ಶನ್ಶಶಾಂಕ್ಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

Cinema Updates

Vijay Devarakonda
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿಜಯ್ ದೇವರಕೊಂಡ
Cinema Latest Top Stories
War 2 Hrithik Roshan Jr NTR
ವಾರ್-2 ಟ್ರೇಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್
Bollywood Cinema South cinema
Ram Charan Peddi
ಪೆದ್ದಿ ಚಿತ್ರಕ್ಕಾಗಿ ದೇಹ ಹುರಿಗೊಳಿಸಿದ ರಾಮ್ ಚರಣ್ : ಮತ್ತೆ ಶೂಟಿಂಗ್ ಶುರು
Cinema Latest Top Stories
Bhargavi LLB Nandagokula Colors kannada Mahasangama Today 1
ಭಾರ್ಗವಿ LL.B, ನಂದಗೋಕುಲ ಮಹಾ ಸಂಗಮ: ಮನಮಿಡಿಯುವ ಕಥೆ
Cinema TV Shows
darshan and kapil sibal
ದರ್ಶನ್‌ ಕೇಸ್‌ – ಸುಪ್ರೀಂ ಕೋರ್ಟ್‌ಗೆ ಹಿರಿಯ ವಕೀಲ ಕಪಿಲ್ ಸಿಬಲ್ ಗೈರು
Bengaluru City Cinema Court Karnataka Latest Sandalwood States Top Stories

You Might Also Like

Cyberattack forces 158 year old UK KNP Logistics transport company to shut down 700 employees lose their jobs
Latest

ಸೈಬರ್‌ ದಾಳಿಗೆ 158 ವರ್ಷದ ಹಳೆಯ ಕಂಪನಿ ಬಂದ್‌ – 700 ಮಂದಿ ಮನೆಗೆ

Public TV
By Public TV
1 minute ago
Koppal Girl falls intoTungabhadra canal
Districts

ಪೈಪ್ ಮೇಲಿಂದ ತುಂಗಭದ್ರಾ ಕಾಲುವೆ ದಾಟುವಾಗ ಬಾಲಕಿ ನೀರುಪಾಲು

Public TV
By Public TV
5 minutes ago
SATISH JARKIHOLI 1
Districts

ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್ – ಪ್ರಕರಣದ ತನಿಖೆಯನ್ನು ರಾಜಕೀಕರಣಗೊಳಿಸಬೇಡಿ: ಸತೀಶ್ ಜಾರಕಿಹೊಳಿ

Public TV
By Public TV
29 minutes ago
Air India Flight
Latest

ದೆಹಲಿಯಲ್ಲಿ ಲ್ಯಾಂಡಿಂಗ್‌ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ – ಪ್ರಯಾಣಿಕರು ಸೇಫ್

Public TV
By Public TV
37 minutes ago
Yellow Line
Bengaluru City

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಆಗಸ್ಟ್‌ನಲ್ಲಿ ಯೆಲ್ಲೋ ಲೈನ್ ಉದ್ಘಾಟನೆ ಸಾಧ್ಯತೆ

Public TV
By Public TV
57 minutes ago
Haveri Bus Accident
Crime

ಹಾವೇರಿ | ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ – ಐವರಿಗೆ ಗಾಯ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
ಯಮ್ಮೊ ಯಮ್ಮೊ.. ಹೇಗ್‌ ಕಾಣ್ತಾರ್‌ ನೋಡಿ.. ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್
Welcome Back!

Sign in to your account

Username or Email Address
Password

Lost your password?