ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ಟಗರು ಚಿತ್ರವನ್ನು ಖ್ಯಾತ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ವೀಕ್ಷಿಸಿದ್ದಾರೆ.
ಖಾಸಗಿ ಮಾಲ್‍ವೊಂದರಲ್ಲಿ ನಿರ್ದೇಶಕ ಸೂರಿ, ನಟ ಧನಂಜಯ್, ನಟಿ ಮಾನ್ವಿತಾ ಜೊತೆ ಚಿತ್ರ ನೋಡಿದ್ದರು. ಬಹುಭಾಷಾ ನಿರ್ದೇಶಕ ಆರ್‍ಜಿವಿ `ಟಗರು’ ಚಿತ್ರ ನೋಡೋದಕ್ಕಾಗಿಯೇ ಬೆಂಗಳೂರಿಗೆ ಆಗಮಿಸಿದ್ದರು.
Advertisement
ಟಗರು ಸಿನಿಮಾ ನೋಡಿದ ನಂತರ ಆರ್‍ಜಿವಿ ಇದೀಗ ಸುಕ್ಕಾ ಸ್ಕ್ರೀನ್‍ಪ್ಲೇ ಖ್ಯಾತಿಯ ಸೂರಿ ನಿರ್ದೇಶನವನ್ನು ಕೊಂಡಾಡಿದ್ದಾರೆ. ಈ ರೀತಿ ಸ್ಕ್ರೀನ್‍ಪ್ಲೇ ಇರೋ ಚಿತ್ರವನ್ನು ಇದುವರೆಗೂ ನನ್ನ ಜೀವನದಲ್ಲಿ ನೋಡೇ ಇಲ್ಲ ಎಂದು ತಿಳಿಸಿದ್ದಾರೆ.
Advertisement
Advertisement
ಸಿನಿಮಾ ವೀಕ್ಷಿಸಿದ ನಂತರ “ಈಗ ತಾನೇ ನಿರ್ದೇಶಕ ಸೂರಿ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಕನ್ನಡ ಚಿತ್ರ ಟಗರು ಸಿನಿಮಾವನ್ನು ವೀಕ್ಷಿಸಿದೆ. ಮಾನ್ವಿತಾ ಹರೀಶ್ ಒಬ್ಬ ನಟಿಯಲ್ಲ. ಆಕೆ ಎಲೆಕ್ಟ್ರಿಸಿಟಿ ಇದ್ದಂತೆ. ತನ್ನ ಸಾಮಥ್ರ್ಯದಿಂದಲೇ ಎಲ್ಲರಿಗೂ ಶಾಕ್ ನೀಡುತ್ತಾರೆ. ಇನ್ನೂ ಧನಂನಜಯ್ ನಟನೆ ಎಲ್ಲರನ್ನೂ ಬೆದರಿಸುವಂತಿದೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
ಟಗರು ಸಿನಿಮಾ ವೀಕ್ಷಿಸಿದ ನಂತರ ನಾನು ಮಾನ್ವಿತಾ ಹರೀಶ್ ಅವರಿಗೆ ಮೊದಲೇ ಟೋಕನ್ ಅಡ್ವಾನ್ಸ್ ನೀಡಿ ಸಿನಿಮಾಗೆ ಸೈನ್ ಮಾಡಿಸಿಕೊಂಡಿದ್ದೇನೆ. ಆ ಕಮಿಂಟ್‍ಮೆಂಟ್‍ಯಿಂದ ನಾನು ಅವರಿಗೆ 10 ಲಕ್ಷ ರೂ. ನೀಡುತ್ತೇನೆ. ಇಲ್ಲವೆಂದರೆ ಅವರು ಕೇಳಿದಷ್ಟು ಕೊಡುತ್ತೇನೆ. ಅಷ್ಟೇ ಅಲ್ಲದೇ ನಿರ್ದೇಶಕ ಸೂರಿ ಅವರನ್ನು ನಾನು ನಿರ್ಮಿಸುವ ಚಿತ್ರವನ್ನು ನಿರ್ದೇಶನ ಮಾಡಬೇಕಾಗಿ ಕೇಳಿಕೊಂಡಿದ್ದೇನೆ ಎಂದು ರಾಮ್‍ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
Just watched the Avant-garde vision of the extraordinary director Suri’s Kannada blockbuster #Tagaru of Shiv Raj kumar @ManvithaHarish is not just an actress but she is pure electricity in her ability to shock(but pleasently) @Dhananjayaka redefines menace
— Ram Gopal Varma (@RGVzoomin) March 28, 2018
After seeing #Tagaru i signed @ManvithaHarish by giving a token advance but with a commitment that I will pay her 10 lakhs more than whatever she will demand as her final remuneration ..I also requested director Suri to do a film produced by me
— Ram Gopal Varma (@RGVzoomin) March 28, 2018
So proud to have a selfie with #Tagaru ‘s visionary director Suri,it’s sparkling heroine @ManvithaHarish and the handsomely menacing villain @Dhananjayaka ???????????? pic.twitter.com/PNLHR2t5zq
— Ram Gopal Varma (@RGVzoomin) March 28, 2018