ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ (Ram Gopal Varma) ಇದೀಗ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಬಗ್ಗೆ ಹಾಡಿಹೊಗಳಿದ್ದಾರೆ. ಇದೀಗ ನೀಡಿದ ಸಂದರ್ಶನವೊಂದರಲ್ಲಿ ‘ದಿ ಕೇರಳ ಸ್ಟೋರಿ’ ನಾನು ನೋಡಿದ ಬೆಸ್ಟ್ ಸಿನಿಮಾಗಳಲ್ಲಿ ಒಂದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ವಯನಾಡಿನ ದುರಂತಕ್ಕೆ ಮಿಡಿದ ಅಲ್ಲು ಅರ್ಜುನ್- ಸಂತ್ರಸ್ತರಿಗೆ 25 ಲಕ್ಷ ದೇಣಿಗೆ ನೀಡಿದ ನಟ
- Advertisement -
ಆರ್‌ಜಿವಿ ಮಾತನಾಡಿ, ಬಹಳ ಹಿಂದೆ ಎ.ಆರ್ ರೆಹಮಾನ್ ಹೇಳಿದ್ದ ವಿಷಯವನ್ನ ಇದೀಗ ಹಂಚಿಕೊಂಡಿದ್ದು, ವರ್ಷದ ಸೂಪರ್ ಹಿಟ್ ಟ್ಯೂನ್ ಆಗಲಿದೆ ಎಂದು ಕೆಲಸ ಮಾಡಿರೋದನ್ನು ಜನ ನಿರ್ಲಕ್ಷಿಸುತ್ತಾರೆ. ಅದನ್ನು ಜನರು ಕೆಟ್ಟದ್ದು ಎಂದು ಕೂಡ ಹೇಳುವುದಿಲ್ಲ. ಇದನ್ನು ಸಾಬೀತುಪಡಿಸಲು ಹಲವಾರು ಉದಾಹರಣೆಗಳಿವೆ. ನನ್ನ ಎಲ್ಲಾ ಚಿತ್ರಗಳು ಹಿಟ್ ಆಗಿದ್ದು, ಆಕಸ್ಮಿಕ. ನನ್ನ ಫ್ಲಾಪ್‌ಗಳು ಉದ್ದೇಶಪೂರ್ವಕವಾಗಿ ಆಗಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಸಿದ್ಧಾಂತ್ ಚತುರ್ವೇದಿ ಜೊತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಿ ಮೊಮ್ಮಗಳು
- Advertisement -
- Advertisement -
ಬಳಿಕ ಇದನ್ನು ಉದಾಹರಣೆಯೊಂದಿಗೆ ವಿವರಿಸಿ, ‘ದಿ ಕೇರಳ ಸ್ಟೋರಿ’ (The Kerala Story) ನಾನು ನೋಡಿದ ಬೆಸ್ಟ್ ಚಿತ್ರಗಳಲ್ಲಿ ಒಂದಾಗಿದೆ. ಆದರೆ ಅದೇ ತಂಡ ಮತ್ತೊಂದು ಸಿನಿಮಾ ಮಾಡಿ ಪ್ಲಾಪ್ ಆಯ್ತು ಎಂದು ತಿಳಿದು ಆಘಾತವಾಯಿತು ಎಂದರು. ಈ ಸಿನಿಮಾ ಬಗ್ಗೆ ನನಗೆ ಬಹಳ ಖುಷಿಯಿದೆ. ನಾನು ಈ ಚಿತ್ರದ ನಿರ್ದೇಶಕ, ನಿರ್ಮಾಪಕನ ಜೊತೆ ಮಾತನಾಡಿದೆ. ಅದಾ ಶರ್ಮಾ (Adah Sharma) ಜೊತೆ ಕೂಡ ಮಾತನಾಡಿದೆ. ನಂತರ, ಮುಂದಿನ ಚಿತ್ರ ‘ಬಸ್ತರ್: ದಿ ನಕ್ಸಲ್ ಸ್ಟೋರಿ’ ಬಂದಿತ್ತು. ರಿಲೀಸ್ ಆಗಿ ಹೋಗಿದ್ದೆ ನನಗೆ ತಿಳಿಯಲಿಲ್ಲ ಎಂದು ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ.