ಡೈರೆಕ್ಟರ್ ಪ್ರೇಮ್ (Director Prem) ಮತ್ತು ಕಾಂಬಿನೇಷನ್ ‘ಕೆಡಿ’ (KD Film) ಸಿನಿಮಾ ಈ ವರ್ಷ ಡಿಸೆಂಬರ್‌ನಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಅಧಿಕೃತ ಅಪ್‌ಡೇಟ್ ನೀಡಿದೆ. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಕೆಡಿ ಚಿತ್ರದ ಕಥೆ, ಆಡಿಯೋ ರೈಟ್ಸ್ ವಿಚಾರ ಸೇರಿದಂತೆ ಥಿಯೇಟರ್ ಸಮಸ್ಯೆ ಬಗ್ಗೆ ಕೂಡ ನಿರ್ದೇಶಕ ಪ್ರೇಮ್ ಮಾತನಾಡಿದ್ದಾರೆ.
Advertisement
‘ಕೆಡಿ’ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಅದ್ಧೂರಿಯಾಗಿ ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. `ಕೆಡಿ’ ರೆಟ್ರೋ ಸ್ಟೈಲ್ ಸಿನಿಮಾ. ಹಾಗಾಗಿ ಚಿತ್ರತಂಡ ಕೂಡ ಅದೇ ಲುಕ್‌ನಲ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ್ದರು. ಈ ವೇಳೆ, ಅಪ್ಪು ಮತ್ತು ಶಿವಣ್ಣನನ್ನು ಧ್ರುವನಲ್ಲಿ (Dhruva Sarja) ನೋಡಿದೆ ಎಂದು ಪ್ರೇಮ್ ಮಾತನಾಡಿದ್ದಾರೆ.
Advertisement
Advertisement
ಲಾಂಗು ಹಿಡಿದಿರುವ ಸಿನಿಮಾ ಹಿಟ್ ಅಂತಲ್ಲ. ದರ್ಶನ್, ಶಿವಣ್ಣ, ಧ್ರುವ ಲಾಂಗ್ ಹಿಡಿದಿದ್ದಾರೆ ಅವರವರ ಸ್ಟೈಲ್ ಬೇರೆ ಆಗಿರುತ್ತದೆ. ಆನ್ ಟೈಮ್‌ಗೆ ಸೆಟ್‌ನಲ್ಲಿ ಹಾಜರಿ ಹಾಕುತ್ತಿದ್ದರು. ಶೂಟಿಂಗ್ ಇಲ್ಲದೆ ಇದ್ದರು ಅವರು ಭಾಗಿಯಾಗುತ್ತಿದ್ದರು. 108 ಕೆಜಿ ಇದ್ದ ಧ್ರುವ ಕೆಡಿ ಸಿನಿಮಾಗಾಗಿ 80 ಕೆಜಿ ತೂಕ ಇಳಿಸಿಕೊಂಡರು ಎಂದು ಧ್ರುವ ಡೆಡಿಕೇಷನ್ ಬಗ್ಗೆ ಪ್ರೇಮ್ ಹಾಡಿ ಹೊಗಳಿದ್ದಾರೆ.
Advertisement
ಸಿನಿಮಾಗಳು ಇಲ್ಲದೇ ಥಿಯೇಟರ್ ಬಂದ್ ಬಗ್ಗೆ ಮತ್ತು ಯಾಕೆ ನಮ್ಮ ಸಿನಿಮಾಗಳು ತಡ ಆಗುತ್ತಿದೆ ಎಂದು ಮುಕ್ತವಾಗಿ ಡೈರೆಕ್ಟರ್ ಪ್ರೇಮ್ ಮಾತನಾಡಿದ್ದಾರೆ. ಸಿನಿಮಾಗಳಿಲ್ಲದೇ ಥಿಯೇಟರ್ ಮುಚ್ಚಬೇಕಿದೆ. ಆದರೆ ಇಂದಿನ ದಿನಗಳಲ್ಲಿ ಕ್ವಾಲಿಟಿ ಸಿನಿಮಾ ಮಾಡಬೇಕಾಗಿದೆ. ಚಿತ್ರದ ಗ್ರಾಫಿಕ್ಸ್ ವರ್ಕ್, ಸಿಜಿ ವರ್ಕ್ ಕೆಲಸ ತುಂಬಾ ಇದೆ ಆದ್ರಿಂದ ಸಿನಿಮಾ ಟೈಂ ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ.
ದರ್ಶನ್, ಯಶ್, ಸುದೀಪ್, ದರ್ಶನ್, ಶಿವಣ್ಣ, ಉಪ್ಪಿ ಸರ್ ಎಲ್ಲರೂ ಇದ್ದಾರೆ. ವರ್ಷಕ್ಕೆ ಒಂದೊಂದು ಸಿನಿಮಾ ಮಾಡಿದ್ದರೆ ಆಗುತ್ತದೆ. ಸಿಂಗಲ್ ಸ್ಕ್ರೀನ್ ಮುಚ್ಚುತ್ತಿದೆ ಅಂತ ಹೇಳ್ತಿದ್ದಿರಲ್ವಾ? ಕಪಾಲಿ ಥಿಯೇಟರ್ ಕ್ಲೋಸ್ ಆಯ್ತು ಅಲ್ಲಿ ಎಷ್ಟು ಸ್ಕ್ರೀನ್ ಬರುತ್ತೆ ಗೊತ್ತಾ? ಎಂದು ಪ್ರಶ್ನಿಸಿದ್ದಾರೆ ಪ್ರೇಮ್. ಹಲವು ವರ್ಷಗಳ ಹಿಂದೆ ಬರುತ್ತಿದ್ದ ಸಿನಿಮಾಗಳಿಗೂ ಇವತ್ತಿನ ಸಿನಿಮಾಗಳಿಗೂ ತುಂಬಾ ಡಿಫರೆನ್ಸ್ ಇದೆ. ಇವತ್ತಿನ ಜನರೇಷನ್ ಪ್ರೇಕ್ಷಕರಿಗೆ ಕ್ವಾಲಿಟಿ ಕೊಡಬೇಕಾಗುತ್ತಿದೆ. ಜೊತೆಗೆ ಬೇರೇ ಭಾಷೆಗಳ ಸಿನಿಮಾಗೂ ನಾವು ಪೈಪೋಟಿ ಕೊಡಬೇಕಾದರೆ ಕ್ಲಾಲಿಟಿಯಲ್ಲಿ ಕಾಂಪ್ರಮೈಸ್ ಆಗಬಾರದು. ಕಾಲಕ್ಕೆ ತಕ್ಕಂತೆ ಸಿನಿಮಾ ಕೊಡಬೇಕಿದೆ ಹಾಗಾಗಿ ತಡವಾಗುತ್ತಿದೆ ಎಂದು ಪ್ರೇಮ್ ಮಾತನಾಡಿದ್ದಾರೆ.
ಈ ಸಿನಿಮಾದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್ ಸೇರಿದಂತೆ ಹಲವು ನಟಿಸಿದ್ದಾರೆ. ಇದೇ ಡಿಸೆಂಬರ್‌ನಲ್ಲಿ ‘ಕೆಡಿ’ ಸಿನಿಮಾ ರಿಲೀಸ್ ಆಗಲಿದೆ.