ಧ್ರುವ ಸರ್ಜಾ (Dhruva Sarja) ನಟಿಸಿರುವ ‘ಕೆಡಿ’ (KD) ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವ ಡೈರೆಕ್ಟರ್ ಪ್ರೇಮ್ (Director Prem) ಅವರು ಮುಂದಿನ ದಿನಗಳಲ್ಲಿ ದರ್ಶನ್ ಜೊತೆ ಸಿನಿಮಾ ಮಾಡೇ ಮಾಡ್ತೀನಿ ಎಂದಿದ್ದಾರೆ. ದರ್ಶನ್ ಜೊತೆ ಸಿನಿಮಾ ಮಾಡೋದು ಗ್ಯಾರಂಟಿ ಎಂದಿದ್ದಾರೆ. ಇದನ್ನೂ ಓದಿ:BBK 11: ರಜತ್‌ಗೆ ಟಾರ್ಗೆಟ್- ಮೋಕ್ಷಿತಾ ಜೊತೆ ಭವ್ಯಾ ಮ್ಯಾಚ್ ಫಿಕ್ಸಿಂಗ್
ದರ್ಶನ್ ನನ್ನ ಬದ್ರರ್, ನನ್ನ ಕುಟುಂಬವಿದ್ದಂತೆ. ಹೋದ ವರ್ಷ ಅವರ ಹುಟ್ಟುಹಬ್ಬಕ್ಕೆ ಸಿನಿಮಾ ಮಾಡುವ ಕುರಿತು ಪ್ಲ್ಯಾನ್ ಮಾಡಿದ್ದೇವು. ಕೆಡಿ ಸಿನಿಮಾದ ಕೆಲಸ ಮುಗಿದ್ಮೇಲೆ ದರ್ಶನ್ (Darshan) ಜೊತೆ ಸಿನಿಮಾ ಮಾಡೇ ಮಾಡುತ್ತೇನೆ. ಇನ್ನೂ ರೆಗ್ಯೂಲರ್ ಬೇಲ್ ಸಿಕ್ಮೇಲೆ ದರ್ಶನ್ ಅವರನ್ನು ಭೇಟಿ ಮಾಡಿದ್ದೇನೆ. ಯಾವಾಗಲೂ ಮಾತನಾಡುತ್ತಿರುತ್ತೇವೆ. ಸಿನಿಮಾ ಬಿಟ್ಟು ನಾವು ಎಮೋಷನಲಿ ಕನೆಕ್ಟ್ ಆಗಿದ್ದೇವೆ ಎಂದಿದ್ದಾರೆ.
ಆಗ ನಾವು ‘ಕರಿಯ’ ಸಿನಿಮಾ ಮಾಡಬೇಕಾದರೆ ಮೀನಾ ತೂಗುದೀಪ ಅವರು ಅಡುಗೆ ಮಾಡಿ ಹಾಕೋರು. ಕೈ ತುತ್ತು ಕೊಡುತ್ತಿದ್ದರು. ಅವರ ಮನೆಯಲ್ಲಿ ಅನ್ನ ತಿಂದಿದ್ದೇವೆ. ಒಂದು ಕುಟುಂಬದ ಹಾಗೇಯೇ ಇರುತ್ತೇವೆ. ಮೊನ್ನೆಯಷ್ಟೇ ಭೇಟಿಯಾದೆ, ಈಗ ಅವರು ಚೇತರಿಸಿಕೊಳ್ತಿದ್ದಾರೆ ಎಂದಿದ್ದಾರೆ. ಇನ್ನೂ ದರ್ಶನ್‌ಗೆ ಬೆನ್ನು ನೋವಿದೆ. ಸ್ವಲ್ಪ ಹುಷಾರ್ ಆದ್ಮೇಲೆ ‘ಡೆವಿಲ್’ (Devil) ಶೂಟಿಂಗ್ ಮಾಡುತ್ತಾರೆ. 100% ‘ಡೆವಿಲ್’ ಸಿನಿಮಾ ಬಂದೇ ಬರುತ್ತದೆ. ಈ ವರ್ಷ ಸಿನಿಮಾ ಮಾಡುತ್ತಾರೆ. ಈ ಸಿನಿಮಾಗೆ ಒಳ್ಳೆಯದಾಗಲಿ.
ಮನುಷ್ಯ ಅಂದ್ಮೇಲೆ ಎಡವುತ್ತೇವೆ. ಅವರಿಗೆ ಅವರೇ ಎದ್ದು ನಿಂತಿದ್ದಾರೆ. ಫೈಟ್ ಮಾಡುತ್ತಿದ್ದಾರೆ. ಇದರ ಹಿಂದಿನ ಘಟನೆ ಬಗ್ಗೆ ಏನೂ ಗೊತ್ತಿಲ್ಲ. ಕೇಸ್ ಕೋರ್ಟ್‌ನಲ್ಲಿದೆ. 100% ನ್ಯಾಯ ಸಿಗುತ್ತದೆ ಎಂದು ನಂಬಿಕೆ ಇದೆ. ಒಳ್ಳೆಯವರಿಗೆ ಯಾವತ್ತಿಗೂ ಒಳ್ಳೆಯದಾಗುತ್ತದೆ ಎಂದು ಮಾತನಾಡಿದ್ದಾರೆ. ಈ ವರ್ಷ ದರ್ಶನ್ ಬರ್ತ್‌ಡೇಗೆ ಹೋಗುತ್ತೇನೆ. ಆಚರಣೆ ಮಾಡುತ್ತೇವೆ ಎಂದಿದ್ದಾರೆ ನಿರ್ದೇಶಕ ಪ್ರೇಮ್.