ಬೆಂಗಳೂರು: ಇಂದು ವಿಶ್ವದಾದ್ಯಂತ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ರಿಲೀಸ್ ಆಗಿದೆ. ಅಭಿಮಾನಿಗಳು ಸುದೀಪ್ ಮತ್ತು ಶಿವರಾಜ್‍ಕುಮಾರ್ ಅಭಿನಯವನ್ನು ನೋಡಲು ಮಧ್ಯರಾತ್ರಿಯಿಂದಲೇ ಚಿತ್ರಮಂದಿರಗಳತ್ತ ಬಂದಿದ್ದಾರೆ. ನಗರದ ನರ್ತಕಿ ಚಿತ್ರಮಂದಿರ ಮಾಲೀಕರ ವಿರುದ್ಧ ನಿರ್ದೇಶಕ ಪ್ರೇಮ್ ಗರಂ ಆಗಿದ್ದಾರೆ.
ನರ್ತಕಿ ಥಿಯೇಟರ್ ನಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಶೋ ಆರಂಭವಾಗಿತ್ತು. ಚಿತ್ರದ ಆರಂಭದಲ್ಲಿಯೇ ಥಿಯೇಟರ್ ನಲ್ಲಿ ಸೌಂಡ್ ಸಮಸ್ಯೆ ಕಾಣಿಸಿಕೊಂಡಿತು. ಚಿತ್ರ ವೀಕ್ಷಿಸಿಸಲು ಖುಷಿಯಿಂದ ಬಂದ ಅಭಿಮಾನಿಗಳಿಗೆ ಕೆಲ ನಿಮಿಷ ಭಾರೀ ನಿರಾಸೆ ಉಂಟಾಯಿತು. ಇದರಿಂದ ಕೋಪುಗೊಂಡು ಹೊರಬಂದ ಪ್ರೇಮ್ ಮಾಧ್ಯಮಗಳ ಮುಂದೆಯೇ ಚಿತ್ರಮಂದಿರದ ಮಾಲೀಕರ ಮೇಲೆ ಕೋಪಗೊಂಡರು.
Advertisement
Advertisement
ಪ್ರಪಂಚದ ದೊಡ್ಡ ದೊಡ್ಡ ಇಂಜಿನಿಯರ್ ಗಳ ಕರೆಸಿ ಸಾಂಗ್ ಮಾಡಿಸಿದ್ದೇನೆ. ಚಿತ್ರದ ಆರಂಭದಲ್ಲಿ ಸಿನಿಮಾ ನಿಲ್ಲಿಸೋಣ ಅಂದುಕೊಂಡಿದ್ದೆ, ಆದರೆ ಅಭಿಮಾನಿಗಳಿಗೆ ನಿರಾಸೆ ಆಗುತ್ತೆ ಅಂತಾ ನಿರ್ಧಾರ ಬದಲಿಸಿ ಹೊರಗೆ ಬಂದಿದ್ದೇನೆ ಎಂದು ನರ್ತಕಿ ಚಿತ್ರಮಂದಿರದ ಸೌಂಡ್ ಇಂಜಿನಿಯರ್ ವಿರುದ್ಧ ಪ್ರೇಮ್ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ವರ್ಷನಾಗಟ್ಟುಲೇ ಸಿನಿಮಾ ಮಾಡಿದ್ದೀವಿ. ದಯವಿಟ್ಟು ಮೊಬೈಲಿನಲ್ಲಿ ಸೆರೆ ಹಿಡಿಯಬೇಡಿ ಎಂದು ಜನರಲ್ಲಿ ಪ್ರೇಮ್ ಮನವಿ ಮಾಡಿಕೊಂಡರು.
Advertisement
ಎಲ್ಲೆಡೆ ಟಿಕೆಟ್‍ಗೆ ನೂಕುನುಗ್ಗಲು ಕಂಡು ಬರುತ್ತಿದೆ. ಮಲ್ಟಿಪ್ಲೆಕ್ಸ್ ಗಳು ಹೌಸ್‍ಫುಲ್ ಆಗಿವೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ನಟಿಸಿದ್ದಾರೆ. ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವಿಲನ್ ಹಾಡುಗಳು ಕಮಾಲ್ ಮಾಡಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv