ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪವನ್ ಒಡೆಯರ್ (Pawan Wadeyar) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಪವನ್ ಪತ್ನಿ ಅಪೇಕ್ಷಾ (Apeksha Purohit) ಅವರು 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಮನೆಗೆ ಮುದ್ದು ಮಗಳ (Baby Girl) ಆಗಮನವಾಗಿದೆ. ಈ ಸಂತಸದ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಗೂಗ್ಲಿ ನಿರ್ದೇಶಕ ಪವನ್ ಒಡೆಯರ್ ತಿಳಿಸಿದ್ದಾರೆ. ಇದನ್ನೂ ಓದಿ:‘ನೆರ್ಚಪೆಟ್ಟಿ’ ಸಿನಿಮಾ ವಿವಾದ: ಪೋಸ್ಟರ್ ಹರಿದು ಹಾಕಿದ ಕೇರಳಿಗರು
Advertisement
ಸ್ಯಾಂಡಲ್ವುಡ್ನ (Sandalwood) ಮುದ್ದಾದ ಜೋಡಿ ನಿರ್ದೇಶಕ ಪವನ್ ಒಡೆಯರ್- ಅಪೇಕ್ಷಾ ಪುರೋಹಿತ್ ದಂಪತಿ ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಈಗಾಗಲೇ ಶೌರ್ಯ ಎಂಬ ಮುದ್ದಾದ ಗಂಡು ಮಗನಿದ್ದು, ಈಗ ಹೆಣ್ಣು ಮಗುವಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ತಾಯಿ- ಮಗು ಕ್ಷೇಮವಾಗಿದ್ದಾರೆ.
Advertisement
Advertisement
ರಣವಿಕ್ರಮ, ಗೂಗ್ಲಿ (Googly) , ಡೊಳ್ಳು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಿರ್ದೇಶಕ ಪವನ್ ಒಡೆಯರ್ ಮನೆಯಲ್ಲಿ ಸಂಭ್ರಮ, ಖುಷಿ ಮನೆ ಮಾಡಿದೆ. ತಮ್ಮ ಕುಟುಂಬಕ್ಕೆ ಹೊಸ ಅತಿಥಿ ಬಂದಿರುವ ಖುಷಿಯಲ್ಲಿದ್ದಾರೆ. ಇತ್ತೀಚಿಗೆ ನಿರ್ದೇಶಕ ಪವನ್ ಪತ್ನಿ ಅಪೇಕ್ಷಾ ಬೇಬಿ ಬಂಪ್ ಫೋಟೋಶೂಟ್ ಮೂಲಕ ಸಿಹಿ ಸುದ್ದಿ ತಿಳಿಸಿದ್ದರು. ಕಪ್ಪು ಬಣ್ಣದ ಉಡುಗೆಯಲ್ಲಿ ನಟಿ ಅಪೇಕ್ಷಾ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು.
Advertisement
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಶ್ರೀಮತಿ ಭಾಗ್ಯಲಕ್ಷ್ಮಿ’ ಸೀರಿಯಲ್ನಲ್ಲಿ ನಾಯಕಿಯಾಗಿ ಅಪೇಕ್ಷಾ ಬಣ್ಣ ಹಚ್ಚಿದ್ದರು. ಪವನ್ ಒಡೆಯರ್ ಅವರನ್ನು ಪ್ರೀತಿಸಿ (Love) ಗುರುಹಿರಿಯರ ಸಮ್ಮುಖದಲ್ಲಿ 2018ರಲ್ಲಿ ಮದುವೆಯಾದರು. ಈಗ ಅಪೇಕ್ಷಾ ಅವರು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಕೂಡ ಗುರುತಿಸಿಕೊಳ್ತಿದ್ದಾರೆ.